ಪಂಜಾಬ್‍ನ ಪೊಲೀಸ್ ಠಾಣೆಯ ಮೇಲೆ ರಾಕೆಟ್ ಚಾಲಿತ್ ಗ್ರೇನೆಡ್ ದಾಳಿ

ತರ್ನ್‍ತರಣ್, ಡಿ.10- ಪಂಜಾಬ್‍ನ ಮತ್ತೊಂದು ಪೊಲೀಸ್ ಠಾಣೆಯ ಮೇಲೆ ರಾಕೇಟ್ ಚಾಲಿತ್ ಗ್ರೇನೆಡ್ (ಆರ್‍ಪಿಜಿ) ದಾಳಿ ನಡೆದಿದೆ. ಪಂಜಾಬ್‍ನ ಉತ್ತರ ವಲಯದ ಮಝ ಪ್ರದೇಶದಲ್ಲಿನ ತರ್ನ್‍ತರಣ್ ನಗರದ ಸರ್ಹಾಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿದೆ. ತಕ್ಷಣದ ವರದಿಯ ಪ್ರಕಾರ ಯಾವುದೇ ಆಸ್ತಿ ಮತ್ತು ಪ್ರಾಣ ಹಾನಿ ಸಂಭವಿಸಿಲ್ಲ. ಶನಿವಾರ ಮಧ್ಯರಾತ್ರಿ 1ಗಂಟೆ ಸುಮಾರಿಗೆ ಹಾರಿಸಲಾದ ಗ್ರೇನೆಡ್ ಠಾಣೆಯ ಹೊರಗಿನ ಪಿಲ್ಲರ್‍ಗೆ ಬಡಿದು ನೆಲಕ್ಕೆ ಅಪ್ಪಳಿಸಿದೆ. ಆದರೆ ಗ್ರೇನೆಡ್ ಸ್ಪೋಟಗೊಂಡಿಲ್ಲ. ಇದು ಪ್ರಬಲಶಾಲಿಯಾಗಿತ್ತು ಒಂದು ವೇಳೆ ಸ್ಪೋಟಗೊಂಡಿದ್ದರೆ […]

ಉಗ್ರರಿಂದ ಗ್ರೆನೇಡ್ ದಾಳಿ, 9 ಮಂದಿಗೆ ಗಾಯ

ಶ್ರೀನಗರ,ಆ.22- ಶ್ರೀನಗರದ ನಿಶಾತ್ ಹೊರವಲಯದಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ದಾಲ್ ಸರೋವರದ ದಡದಲ್ಲಿರುವ ಸುಪ್ರಸಿದ್ಧ ಮೊಘಲ್ ಉದ್ಯಾನದ ಮುಂಭಾಗದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಗಾಯಗೊಂಡವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿದ್ದು, ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ಕಾಶ್ಮೀರ ಪ್ರಾಂತ್ಯದ ಟ್ರಾಲ್‍ನ ಬೀಹ್‍ಗುಂಡ್ ಭಾಗದಲ್ಲಿ ಭದ್ರತಾ ಅಧಿಕಾರಿಗಳು 10 ರಿಂದ 12 […]

ಆಕಸ್ಮಿಕ ಗ್ರೆನೇಡ್ ಸ್ಫೋಟದಲ್ಲಿ ಸೇನಾ ಕ್ಯಾಪ್ಟನ್, ಮತ್ತು ಜೆಸಿಒ ಸಾವು

ಜಮ್ಮು, ಜು.18- ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲಾಯ ಗಡಿ ನಿಯಂತ್ರಣ ರೇಖೆಯಲ್ಲಿ ಆಕಸ್ಮಿಕ ಗ್ರೆನೇಡ್ ಸ್ಫೋಟ ಘಟನೆಯಲ್ಲಿ ಸೇನಾ ಕ್ಯಾಪ್ಟನ್ ಮತ್ತು ಜೂನಿಯರ್ ಕಮಿಷನ್ಡ ಅಧಿಕಾರಿ ಮೃತಪಟ್ಟಿದ್ದಾರೆ. ಸೇನಾ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೆ ಭಾನುವಾರ ತಡರಾತ್ರಿ ಪೂಂಚ್ ಮೆಂಧರ್ ಸೆಕ್ಟರ್‍ನಲ್ಲಿ ಈ ಘಟನೆ ನಡೆದಿದ್ದು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಸೇನಾ ಕ್ಯಾಪ್ಟನ್ ಮತ್ತು ಸುಬೇದಾರ್ (ಜೆಸಿಒ) ಅವರನ್ನು ತಕ್ಷಣ ಹೆಲಿಕಾಪ್ಟರ್‍ನಲ್ಲಿ ತುರ್ತು ಚಿಕಿತ್ಸೆಗಾಗಿ ಉಧಮ್‍ಪುರಕ್ಕೆ ಕರೆದೊಯ್ಯಲಾಯಿತು ಎಂದು ಅವರು ಹೇಳಿದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು […]