ಸತತ ಮಳೆಯಿಂದ ಅಂತರ್ಜಲ ವೃದ್ಧಿ : ಸಚಿವ ಗೋವಿಂದ ಕಾರಜೋಳ

ಬೆಂಗಳೂರು,ಸೆ.29- ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕಪ್ಪು, ಬೂದು ಪ್ರದೇಶಗಳು ಕಡಿಮೆಯಾಗಿವೆ. ಅಂತರ್ಜಲ ಸಾಕಷ್ಟು ಹೆಚ್ಚಳವಾಗಿರುವುದರಿಂದ ನೀರಿನಲ್ಲಿದ್ದ ಅಪಾಯಕಾರಿ ರಾಸಾಯನಿಕ ಅಂಶಗಳು ಕಡಿಮೆಯಾಗಿವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಕಪ್ಪು ಮತ್ತು ಬೂದು ಪ್ರದೇಶದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಸುರಕ್ಷಿತ ಹಾಗೂ ಶುದ್ದ ಕುಡಿಯುವ ನೀರು ಲಭ್ಯವಾಗುತ್ತಿದೆ. ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿ ಜಲಾಶಯಗಳು, ಕೆರೆಕಟ್ಟೆಗಳು ತುಂಬಿದ್ದು, ಅಂತರ್ಜಲದ ಪ್ರಮಾಣವು ಸಾಕಷ್ಟು ಹೆಚ್ಚಳವಾಗಿದೆ. ಇದರಿಂದ ಟ್ಯಾಂಕರ್ […]