ಗಡಿಯಲ್ಲಿ ಕಳ್ಳಸಾಗಣಿಕೆ ಯತ್ನ ತಡೆದ ಬಿಎಸ್‍ಎಫ್ ಯೋಧರು

ನವದೆಹಲಿ, ಫೆ.18- ಪಂಜಾಬ್ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಕಳ್ಳಸಾಗಣಿಕೆ ಪ್ರಯತ್ನವನ್ನು ವಿಫಲಗೊಳಿಸಿರುವ ಬಿಎಸ್‍ಎಫ್ ಯೋಧರು, ಅಪಾರ ಪ್ರಮಾಣದ ಮಾದಕ ದ್ರವ್ಯಗಳು, ಚೀನಾ ಮತ್ತು ಟರ್ಕಿ ನಿರ್ಮಿತ ಪಿಸ್ತೂಲ್‍ಗಳು ಮತ್ತು 242 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಶನಿವಾರ ಮುಂಜಾನೆ 5.30 ರ ಸುಮಾರಿಗೆ ಗುರುದಾಸ್‍ಪುರ ಸೆಕ್ಟರ್‍ನ ಡಿಬಿಎನ್ ಮತ್ತು ಶಿಕಾರ್ ಗಡಿ ಪೋಸ್ಟ್‍ನ ಬಳಿ ಗಡಿ ಬೇಲಿಯ ಎರಡೂ ಬದಿಗಳಲ್ಲಿ ಶಸ್ತ್ರಸಜ್ಜಿತ ಕಳ್ಳಸಾಗಾಣಿಕೆದಾರರ ಚಲನವಲನವನ್ನು ಯೋಧರು ಪತ್ತೆಹಚ್ಚಿದರು. ಯೋಧರ ಎಚ್ಚರಿಕೆ ಹೊರತಾಗಿ ನುಸುಳುಕೋರರು ಚಲಿಸಿದ್ದರಿಂದ ಗುಂಡು ಹಾರಿಸಲಾಯಿತು, ಉಗ್ರರ […]

ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರ ಸಾವು

ದಿಯೋಘರ್ (ಜಾರ್ಖಂಡ್),ಫೆ.12- ಜಾರ್ಖಂಡ್‍ನ ದಿಯೋಘರ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ರಾಂಚಿಯಿಂದ 250 ಕಿಮೀ ದೂರದಲ್ಲಿರುವ ದಿಯೋಘರ್ ಪಟ್ಟಣದ ಶ್ಯಾಮ್‍ಗಂಜ್ ರಸ್ತೆಯಲ್ಲಿ ಮಧ್ಯರಾತ್ರಿ 12.30 ರ ಸುಮಾರಿಗೆ ಈ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಈ ಪಟ್ಟಣದಲ್ಲಿನ ಮೀನಿನ ವ್ಯಾಪಾರಿಯ ಮೇಲೆ ಅಪರಿಚಿತರು ದಾಳಿ ನಡೆಸಿದ್ದರು. ಜಮ್ಮು-ಕಾಶ್ಮೀರದಲ್ಲಿ ಉದ್ಯೋಗ ಬದಲಿಗೆ ಬುಲ್ಡೋಜರ್ ಬಳಕೆ : ರಾಹುಲ್ ಟೀಕೆ ಇದರಿಂದ ಆತಂಕಗೊಂಡ ಮನೆಯವರು ಪೊಲೀಸ್ ಭದ್ರತೆ ಕೋರಿದ್ದರು. ರಕ್ಷಣೆಗಾಗಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು […]

ಹಲವು ರಾಜ್ಯಗಳಲ್ಲಿ ದರೋಡೆ ಮಾಡಿದ್ದ ಕೇಶವ್ ಗುರ್ಜರ್ ಸೆರೆ

ಜೈಪುರ, ಜ.31- ಹಲವು ರಾಜ್ಯಗಳ ಪೊಲಿಸರಿಗೆ ಬೇಕಾಗಿದ್ದ ಹಾಗೂ ಲಕ್ಷಗಟ್ಟಲೆ ಬಹುಮಾನ ಘೋಷಿತ ದರೋಡೆಕೋರನನ್ನು ರಾಜಸ್ಥಾನದ ಪೊಲಿಸರು ಗುಂಡಿನ ಚಕಮಕಿಯ ಬಳಿಕ ಬಂಧಿಸಿದ್ದಾರೆ. ಧೋಲ್ಪುರ ಜಿಲ್ಲೆಯಲ್ಲಿ ಬಂಧಿತ ಕೇಶವ್ ಗುರ್ಜರ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದಾರೆ. ಪೊಲೀಸರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಆತನ ಕಾಲಿಗೆ ಪೆಟ್ಟಾಗಿದೆ. ಚಿಕಿತ್ಸೆಗಾಗಿ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೆಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ. ಭಾರತೀಯರ ಮೇಲೆ ಖಲಿಸ್ತಾನಿ ಉಗ್ರರ ದಾಳಿಗೆ ಖಂಡನೆ […]

ರಾಂಚಿ ಹೊರವಲಯದಲ್ಲಿ ಭದ್ರತಾ ಪಡೆ-ನಕ್ಸಲರ ನಡುವೆ ಗುಂಡಿನ ಚಕಮಕಿ

ರಾಂಚಿ, ಜ .13-ರಾಂಚಿ ನಗರದ ಹೊರವಲಯದಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ನಿಷೇಧಿತ ಟಿಎಸ್‍ಪಿಸಿ ಸಂಘಟನೆಯ ಐವರು ಸದಸ್ಯರು ಬುದ್ಮು ಪ್ರದೇಶದ ಅರಣ್ಯದಲ್ಲಿ ಅಡಗಿರುವ ಬಗ್ಗೆ ಸುಳಿವಿನ ಮೇರೆಗೆ ಶೋಧ ಕಾರ್ಯಾಚರಣೆ ನಡೆಸುವಾಗ ಕಳೆದ ರಾತ್ರಿ ಈ ಘಟನೆ ನಡೆದಿದೆ. ಕೊನೆಗೆ ದಟ್ಟ ಅರಣ್ಯದಲ್ಲಿ ಉಗ್ರರು ಪರಾರಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೌಶಾದ್ ಆಲಂ ತಿಳಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮೋದಿ ಅಬ್ಬರ ಗುಂಡಿನ ಚಕಮಕಿಯಲ್ಲಿ ಕೆಲವು ಉಗ್ರರು ಗಾಯಗೊಂಡಿದ್ದಾರೆ ಎಂಬ […]

ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಇಬ್ಬರು ಉಗ್ರರ ಎನ್‍ಕೌಂಟರ್

ಶ್ರೀನಗರ,ಅ.10- ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿಂದು ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‍ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಟ್ಯಾಂಗ್ಪಾವಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿತು. ಸ್ಥಳಕ್ಕೆ ಬರುತ್ತಿದಂತೆ ಭದ್ರತಾ ಪಡೆಗಳ ಮೇಲೆ ಉಗ್ರರು ಅವರ ಮೇಲೆ ಗುಂಡು ಹಾರಿಸಿದ್ದಾರೆ ಸುಮಾರು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು ಅಂತಿಮವಾಗಿ ಎನ್‍ಕೌಂಟರ್‍ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ. […]