ರಷ್ಯಾದ ಇಂಧನ ಖರೀದಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಹರ್ದೀಪ್‍ ಸಿಂಗ್

ನವದೆಹಲಿ,ಅ.8- ತಮಗೆ ಅವಶ್ಯವಿರುವ ಇಂಧನವನ್ನು ಯಾವ ದೇಶದಿಂದ ಬೇಕಾದರೂ ನಾವು ಖರೀದಿಸುತ್ತೇವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯಾವುದೇ ದೇಶ ರಷ್ಯಾದಿಂದ ತೈಲ ಖರೀದಿಸಬಾರದು ಎಂದು ನಮಗೆ ಹೇಳಿಲ್ಲ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್‍ಸಿಂಗ್ ಪುರಿ ಹೇಳಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ನಂತರ ಜಾಗತಿಕ ಇಂಧನ ವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ಪ್ರಪಂಚದಾದ್ಯಂತದ ಇಂಧನಕ್ಕಾಗಿ ಹಾಹಾಕಾರ ಎದ್ದಿದೆ. ನಾವು ನಮ್ಮ ದೇಶದ ನಾಗರೀಕರ ಹಿತದೃಷ್ಟಿಯಿಂದ ರಷ್ಯಾದಿಂದ ಇಂಧನ ಅಮುದು ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು. ಉಕ್ರೇನ್ ಮೇಲಿನ ದಾಳಿಯ ನಂತರ […]