ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹರ್ಪ್ರೀತ್ ಸಿಂಗ್ ಅರೆಸ್ಟ್

ನವದೆಹಲಿ,ಡಿ.2- ಲೂಯಾನ ಕೋರ್ಟ್ ಬಾಂಬ್ ಸ್ಪೋಟದ ರೂವಾರಿ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹರ್‍ಪ್ರೀತ್ ಸಿಂಗ್‍ನನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ. ಕೌಲಾಲಂಪುರದಿಂದ ವಿಮಾನದಲ್ಲಿ ಬಂದಿಳಿದ ಭಯೋತ್ಪಾದಕನನ್ನು ಇಂದು ಬೆಳಿಗ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಎನ್‍ಐಎ ವಕ್ತಾರರು ತಿಳಿಸಿದ್ದಾರೆ. ಹರ್‍ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಮಲೇಷ್ಯಾ ಎಂದೇ ಕರೆಯಲಾಗುತ್ತಿದ್ದ ಅಮೃತ್‍ಸರ ಮೂಲದ ಸಿಂಗ್ ಬಗ್ಗೆ ಸುಳಿವು ನೀಡುವವರಿಗೆ 10 ಲಕ್ಷ ರೂ.ಗಳ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಕಳೆದ ವರ್ಷ ಡಿಸೆಂಬರ್‍ನಲ್ಲಿ ಲೂಯಾನ […]