ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ್ದವರ ಬಂಧನ

ವೆಲ್ಲೂರು,ಮಾ.31-ತಮಿಳುನಾಡಿನ ಐತಿಹಾಸಿಕ ವೆಲ್ಲೂರು ಕೋಟೆಗೆ ಭೇಟಿ ನೀಡಿದ್ದ ಮಹಿಳೆಯರಿಗೆ ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ್ದ ಆರು ಮಂದಿಯನ್ನು ವೆಲ್ಲೂರು ಉತ್ತರ ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ವೆಲ್ಲೂರು ಕೋಟೆಗೆ ಭೇಟಿ ನೀಡಿದ್ದ ಮಹಿಳೆಗೆ ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ್ದ ಇಮ್ರಾನ್ ಬಾಷಾ, ಅಶ್ರಫ್ ಬಾಷಾ, ಮೊಹಮ್ಮದ್ ಫೈಜಲ, ಸಂತೋಷ್, ಇಬ್ರಾಹಿಂ ಬಾಷಾ ಹಾಗೂ ಪ್ರಶಾಂತ್ ಎಂಬುವರನ್ನು ಬಂಧಿಸಲಾಗಿದೆ. ಇದೆ ಗ್ಯಾಂಗ್‍ನಲ್ಲಿದ್ದ ಅಪ್ರಾಪ್ತ ಬಾಲಕನನ್ನು ರಿಮ್ಯಾಂಡ್ ಹೋಮ್‍ಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ […]

ಸುಪ್ರೀಂ ತೀರ್ಪು ಸ್ವಾಗತಾರ್ಹ : ಅರಗ ಜ್ಞಾನೇಂದ್ರ

ಬೆಂಗಳೂರು,ಅ.13- ಶಿಕ್ಷಣ ಸಂಸ್ಥೆ ಗಳಲ್ಲಿ ಹಿಜಾಬ್ ಧರಿಸುವ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸರ್ಕಾರ ಸ್ವಾಗತಿಸಲಿದ್ದು, ರಾಜ್ಯಾದ್ಯಂತ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಏನೇ ತೀರ್ಪು ಕೊಟ್ಟರು ಸರ್ಕಾರ ಆದೇಶಕ್ಕೆ ತಲೆಬಾಗುತ್ತದೆ ವಿಭಿನ್ನ ತೀರ್ಪು ನೀಡಿರುವುದರಿಂದ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆಯಾಗಲಿದೆ. ಅಂತಿಮ ತೀರ್ಪು ಬರುವರೆಗೂ ನಾವು ಕಾಯೋಣ ಎಂದು ತಿಳಿಸಿದರು. ಹೈಕೋರ್ಟ್ ಸೇರಿದಂತೆ ಸುಪ್ರೀಂಕೋರ್ಟ್‍ವರೆಗೂ ಹಿಜಾಬ್ […]

ಶಾಲಾಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ : ಸಚಿವ ನಾಗೇಶ್

ಬೆಂಗಳೂರು,ಅ.13- ಹಿಜಾಬ್ ಕುರಿತಂತೆ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ ವಿಭಿನ್ನ ತೀರ್ಪು ನೀಡಿರುವ ಹಿನ್ನಲೆ ಶಾಲಾಕಾಲೇಜುಗಳಲ್ಲಿ ಸಮವಸ್ತ್ರ ಹೊರತುಪಡಿಸಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠದ ಇಬ್ಬರು ನ್ಯಾಯಮೂರ್ತಿಗಳು ಭಿನ್ನವಾದ ತೀರ್ಪು ನೀಡಿದ್ದಾರೆ. ಸುಪ್ರೀಂಕೋರ್ಟ್‍ನ ಅಂತಿಮ ತೀರ್ಪು ಬರುವವರೆಗೂ ಹೈಕೋರ್ಟ್ ನೀಡಿರುವ ಆದೇಶ ಮುಂದುವರೆಯುತ್ತದೆ ಎಂದು ಸ್ಪಷ್ಪಪಡಿಸಿದರು. ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ತರಗತಿಗಳಿಗೆ ಬರಬೇಕು. ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಬರುವಂತಿಲ್ಲ. ಕರ್ನಾಟಕ […]

ಬ್ರೇಕಿಂಗ್ : ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ಭಿನ್ನ ತೀರ್ಪು

ನವದೆಹಲಿ, ಅ.13- ವಿವಾದಿತ ಹಿಜಾಬ್ ಪ್ರಕರಣ ಕುರಿತಂತೆ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ, ಭಿನ್ನ ತೀರ್ಪನ್ನು ನೀಡಿದ್ದು, ಮತ್ತಷ್ಟು ವಿಶ್ಲೇಷಣೆಗಾಗಿ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ ಮಾಡಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಇಂದು ಬೆಳಗ್ಗೆ ಬೇರೆ ಬೇರೆ ಅಭಿಪ್ರಾಯಗಳನ್ನು ಒಳಗೊಂಡ ತೀರ್ಪನ್ನು ಪ್ರಕಟಿಸಿದೆ. ಒಮ್ಮತದ ಅಭಿಪ್ರಾಯ ವ್ಯಕ್ತವಾಗದ ಹಿನ್ನೆಲೆಯಲ್ಲಿ ಹಿಜಾಬ್ ಗೊಂದಲ ಮುಂದುವರೆದಿದ್ದು, ಸ್ಪಷ್ಟನೆಗಾಗಿ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ದಾಟಿಸಲಾಗಿದೆ. ಹೇಮಂತ್ ಗುಪ್ತಾ […]

ಇರಾನ್‍ನಲ್ಲಿ ಮುಂದುವರೆದ ಹಿಜಾಬ್ ಪ್ರತಿಭಟನೆ, 50 ದಾಟಿದ ಸಾವಿನ ಸಂಖ್ಯೆ

ನವದೆಹಲಿ, ಸೆ.24- ಇರಾನ್ ನಲ್ಲಿ ಭುಗಿಲೆದ್ದಿರುವ ಹಿಜಾಬ್ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 50ನ್ನು ದಾಟಿದ್ದು, ಪ್ರತಿಭಟನಾಕಾರರ ವಿರುದ್ಧ ಅನಗತ್ಯವಾದ ಬಲ ಪ್ರಯೋಗ ಮಾಡದಂತೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. 22 ವರ್ಷದ ಮಹ್ಸಾ ಅಮಿನಿ ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂದು ಇರಾನ್‍ನ ನೈತಿಕ ಪೊಲೀಸರು ಆಕೆಯನ್ನು ಥಳಿಸಿ ಬಂಧಿಸಿದ್ದರು. ವಿಚಾರಣೆ ವೇಳೆ ಕುಸಿದು ಬಿದ್ದ ಆಕೆ ಚಿಕಿತ್ಸೆ ಪಡೆಯುವ ಹಂತದಲ್ಲಿ ಮೃತಪಟ್ಟಿದ್ದಳು. ಇದು ಇರಾನ್ ನಲ್ಲಿ ಪ್ರತಿಭಟನೆ ಭುಗಿಲೇಳಲು ಕಾರಣವಾಗಿದೆ. ಇರಾನ್ ಮಹಿಳೆಯರು ಬುರ್ಕಾ, ಹಿಜಾಬ್ ಕಿತ್ತೆಸೆದು ಬೀದಿಗಿಳಿದಿದ್ದಾರೆ. […]

ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ ಹಿಜಾಬ್ ನಂಟು..!?

ಬೆಂಗಳೂರು, ಜು.27- ಹಿಜಾಬ್ ಹಿಂದಿರುವ ಶಕ್ತಿಗಳೇ ಸೂಳ್ಯ ತಾಲೂಕಿನಲ್ಲಿ ಬಿಜೆಪಿ ಮುಖಂಡಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಹಿಂದೆ ಇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಮತ್ತು ರಾಜ್ಯದ ಗಡಿ ಭಾಗಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಈ ಬಗ್ಗೆ ಕೇರಳ ಸರ್ಕಾರದ ಜತೆ ಸಿಎಂ ಮಾತಾಡಿದ್ದಾರೆ ಎಂದರು. ಪೊಲೀಸರು, ಕೊಲೆಗಡುಕರ ಬೆನ್ನಟ್ಟಿದ್ದಾರೆ. ಕೇರಳ ಸರ್ಕಾರದ ಜತೆಗೂ ನಮ್ಮ ಪೊಲೀಸರು ಮಾತುಕತೆ ನಡೆಸಿದ್ದಾರೆ. ಅಲ್ಲೂ ಕೂಡ ಕೊಲೆಗಡುಕರ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ […]

ಹಿಜಾಬ್ ವಿವಾದಕ್ಕೆ ಮತ್ತೆ ಮರುಜೀವ, ವಿಚಾರಣೆಗೆ ಸುಪ್ರೀಂ ಅಸ್ತು

ನವದೆಹಲಿ, ಜು.13- ಹಿಜಾಬ್ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಸುಪ್ರೀಂಕೋರ್ಟ್, ಮುಂದಿನ ವಾರ ಸೂಕ್ತ ಪೀಠದಲ್ಲಿ ವಿಚಾರಣೆಗೆ ಪಟ್ಟಿ ಮಾಡುವುದಾಗಿ ತಿಳಿಸಿದೆ. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆಗೆ ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನೊಳಗೊಂಡ ಪೀಠ ಸಮ್ಮತಿಸಿದೆ. ಶಾಲೆಗಳಲ್ಲಿ ಸಮವಸ್ತ್ರದ ವಿವಾದ ತೀವ್ರವಾಗಿ ಈ ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ಭಾರೀ ಚರ್ಚೆ, ಪ್ರತಿಭಟನೆ, ವಾದ ವಿವಾದ ನಡೆದಿದ್ದವು. ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಉಡುಪಿ […]

ಸರ್ಕಾರಕ್ಕೆ ಕಿವಿ ಹಿಂಡುವಂತೆ ರಾಜ್ಯಪಾಲರಿಗೆ ಎಚ್‍ಡಿಕೆ ಆಗ್ರಹ

ಬೆಂಗಳೂರು, ಫೆ.23- ರಾಜ್ಯದಲ್ಲಿ ಶಾಂತಿ, ಭದ್ರತೆ ನಿರ್ವಹಣೆಯಲ್ಲಿ ವಿಫಲವಾಗಿರುವ ಸರ್ಕಾರಕ್ಕೆ ರಾಜ್ಯಪಾಲರು ಕಿವಿ ಹಿಂಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಬೇಕು. ಅವರು ಯಾರ ಕೈಗೊಂಬೆಯೂ ಆಗಬಾರದು ಎಂದು ಆಗ್ರಹಿಸಿದ್ದಾರೆ. ರಾಜ್ಯಪಾಲರ ಭೇಟಿಗೆ ಸಮಯವನ್ನು ಕೇಳಿದ್ದು, ಈ ಸಂಬಂಧ ದೂರು ನೀಡಲಿದ್ದಾರೆ. ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ […]

ಹಿಜಾಬ್ ವಿವಾದದ ಹಿಂದೆ ಬಿಜೆಪಿ-ಎಸ್‍ಡಿಪಿಐ ಕೈವಾಡ : ಡಿಕೆಶಿ ಆರೋಪ

ಬೆಂಗಳೂರು, ಫೆ.20- ಹಿಜಾಬ್ ವಿಷಯದಲ್ಲಿ ರಾಜ್ಯ ಸರ್ಕಾರ ಎಸ್‍ಡಿಪಿಐ ಜೊತೆ ಸೇರಿ ರಾಜ್ಯದಲ್ಲಿ ಅಶಾಂತಿಯ ಬೀಜ ಬಿತ್ತಲು ಹುನ್ನಾರ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ವಿಧಾನಮಂಡಲದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಶಾಸಕರ ಜೊತೆ ಇಂದು ಬೆಳಗ್ಗೆ ವಿಧಾನಸೌಧದ ಆವರಣದಲ್ಲಿ ವಾಯು ವಿಹಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಷಯದಲ್ಲಿ ಹೈಕೋರ್ಟ್ ಆದೇಶಕ್ಕೆ ಸೀಮಿತವಾಗಿ ಸರ್ಕಾರ ನಡೆದುಕೊಳ್ಳಬೇಕಿತ್ತು. ಅತಿರೇಖದ ವರ್ತನೆ ಪ್ರದರ್ಶನ ಮಾಡುತ್ತಿದೆ. ಫೆ.5ರಂದು ಆದೇಶ ಹೊರಡಿಸುವ ಅಗತ್ಯವೇ […]

ಕಾಂಗ್ರೆಸ್ ಹಿಜಾಬ್ ವಿವಾದದ ಮೆದುಳು, ಎಸ್‍ಡಿಪಿಐ ದೇಹ : ಕಟೀಲ್

ಬೆಂಗಳೂರು,ಫೆ.15- ಹಿಜಾಬ್ ವಿವಾದವನ್ನು ವಿದ್ಯಾರ್ಥಿನಿಯರ ಮೂಲಕ ಆಡಿಸುತ್ತಿರುವ ಕೀಲಿಕೈ ಬೇರೆಯೇ ಇದೆ. ಕಾಂಗ್ರೆಸ್ ಈ ವ್ಯೂಹದ ಮೆದುಳು, ಎಸ್‍ಡಿಪಿಐ ಅದರ ದೇಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಹಿಜಾಬ್ ವಿವಾದವನ್ನು ವಿದ್ಯಾರ್ಥಿನಿಯರ ಮೂಲಕ ಆಡಿಸುತ್ತಿರುವ ಕೀಲಿಕೈ ಬೇರೆಯೇ ಇದೆ. ಕಾಂಗ್ರೆಸ್ ಈ ವ್ಯೂಹದ ಮೆದುಳು. ಎಸ್‌ಡಿಪಿಐ ಅದರ ದೇಹ. ಇದು ಕೇವಲ ವಿವಾದವಲ್ಲ, ಮೂಲಭೂತವಾದವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ವ್ಯವಸ್ಥಿತ ಸಂಚು.#YesToUniform_NoToHijab — Nalinkumar Kateel (@nalinkateel) February 14, 2022 ಈ ಸಂಬಂಧ […]