ಅಭಿವೃದ್ಧಿಯೇ ಡಬಲ್ ಇಂಜಿನ್ ಸರ್ಕಾರದ ಪರಮ ಗುರಿ: ಮೋದಿ

ಚಿಕ್ಕಬಳ್ಳಾಪುರ,ಮಾ.25- ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ ಆಗುತ್ತಿದೆ. ಬಡವರ ಅಭಿವೃದ್ಧಿಯೇ ಬಿಜೆಪಿಯ ಪರಮೋಚ್ಛ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದರು. ಚಿಕ್ಕಬಳ್ಳಾಪುರದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನುಲೋಕಾರ್ಪಣೆ ಮಾಡಿದ ಬಳಿಕ ಜನತೆಯನ್ನುದ್ದೇಶಿಸಿ ಅವರು ಮಾತನಾಡಿದರು. ಮೊದಲಿಗೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿಗಳು, ಕರ್ನಾಟಕದ ನನ್ನ ಸಹೋದರ, ಸಹೋದರಿಯರಿಗೆ ನಮಸ್ಕಾರ ಎಂದು ಹೇಳುತ್ತಾ, ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ವಿಶ್ವೇಶ್ವರಯ್ಯ ಜನ್ಮಸ್ಥಳವಾಗಿದೆ. ಇಂತಹ ಪುಣ್ಯಭೂಮಿಗೆ ಬಂದಿದ್ದು ನನ್ನ ಸೌಭಾಗ್ಯ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯನ್ನು […]
ಇಂದು ನನ್ನ ಜೀವನದ ಸಾರ್ಥಕ ದಿನ: ಬಿಎಸ್‍ವೈ

ಶಿವಮೊಗ್ಗ,ಫೆ.27- ಇಂದು ನನ್ನ ಪಾಲಿನ ಸಾರ್ಥಕತೆಯ ದಿನವಾಗಿದೆ. ಇಂದು ನೂತನ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಮಂತ್ರಿಗಳು ದೇಶವೇ ಮೆಚ್ಚಿದ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. ಶಿವಮೊಗ್ಗದಲ್ಲಿ ನೂತನ ಏರ್‍ಫೋರ್ಟ್ ಉದ್ಘಾಟನಾ ಸಮಾರಂಭ ಸಮಾವೇಶದಲ್ಲಿ ಯಡಿಯೂರಪ್ಪ ಅವರು ತಮ್ಮ ಭಾಷಣದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿದರು. ನಿಮ್ಮ ಹುಟ್ಟುಹಬ್ಬದ ದಿನವೇ ವಿಮಾನ ನಿಲ್ದಾಣ ಉದ್ಘಾಟನೆ ಮಾಡಬೇಕು. ಅಂದು ನಾನು ಬಂದೇ ಬರುತ್ತೇನೆ ಎಂದು ಮೋದಿ ಹೇಳಿದ್ದರು. ಅದಕ್ಕಾಗಿ ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ […]
ಬಿಎಸ್‍ವೈಗೆ ಮೋದಿ ಬಹುಪರಾಕ್

ಶಿವಮೊಗ್ಗ,ಫೆ.27- ಐದು ದಶಕಗಳ ಕಾಲ ಬಡವರು ಮತ್ತು ರೈತರಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೀವನ ಮುಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠ ದಿಂದ ಹೊಗಳಿದರು. ಇತ್ತೀಚೆಗೆ ವಿಧಾನಸಭೆಯಲ್ಲಿ ಯಡಿಯೂರಪ್ಪನವರು ಮಾಡಿದ ವಿದಾಯದ ಭಾಷಣ ಬಿಜೆಪಿಯ ಎಲ್ಲ ಕಾರ್ಯಕರ್ತರಿಗೂ ಪ್ರೇರಣೆಯಾಗಿದೆ. ಬಡವರು, ರೈತರಿಗಾಗಿ 50 ವರ್ಷ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಕರ್ನಾಟಕದಲ್ಲಿ ಈಗಲೂ ಅವರೊಬ್ಬ ಜನಪ್ರಿಯ ನಾಯಕ ಎಂದು ಬಣ್ಣಿಸಿದರು. ಯಡಿಯೂರಪ್ಪನವರಿಗೆ 80ನೇ ಹುಟ್ಟಹಬ್ಬದ ಶುಭಾಶಯ ಕೋರಿದ ಅವರು, […]
ಅರುಣಾಚಲದ ಮೊದಲ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ

ಇಟಾನಗರ, ನ 20-ಬುಡಕಟ್ಟು ಪುರೋಹಿತರ ಮಂತ್ರಗಳ ಪಠಣದ ನಡುವೆ ಈಶಾನ್ಯ ರಾಜ್ಯದ ಹೊಸ ದೋನಿ ಪೋಲೋ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಅರುಣಾಚಲ ಪ್ರದೇಶದ ರಾಜಧಾನಿ ಸಮೀಪದ ಹೊಲೊಂಗಿಯಲ್ಲಿರುವ ವಿಮಾನ ನಿಲ್ದಾಣ ಈ ಭಾಗದ ಮೊದಲ ವಿಮಾನ ನಿಲ್ದಾಣ ಎಂಬ ಹಿರಿಮೆ ಪಡೆದಿದೆ. ದೇಶದ ಗಡಿ ರಾಜ್ಯವನ್ನು ಇತರೆ ನಗರಗಳೊಂದಿಗೆ ವಾಣಿಜ್ಯ ವಿಮಾನಗಳ ಜೊತೆಗೆ ಅರುಣಾಚಲ ಪ್ರದೇಶದ ಇತರ ಭಾಗಗಳೊಂದಿಗೆ ಹೆಲಿಕಾಪ್ಟರ್ ಸೇವೆಗಳ ಮೂಲಕ ಸಂಪರ್ಕಿಸುತ್ತದೆ. ಇದು ಈ ಪ್ರದೇಶದಲ್ಲಿ ಸುಮಾರು 20 ಲಕ್ಷ […]
ದೇಶಿಯ ಶಸ್ತ್ರಾಸ್ತ್ರಗಳಿಗೆ ಪ್ರಧಾನಿ ಮೋದಿ ಮೆಚ್ಚುಗೆ

ನವದೆಹಲಿ,ಅ.19- ಗುಜರಾತ್‍ನ ಗಾಂಧಿನಗರದಲ್ಲಿ ನಡೆಯುತ್ತಿರುವ ಡಿಫೆನ್ಸ್ ಎಕ್ಸ್‍ಪೋವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತೀಯ ರಕ್ಷಣಾ ಪಡೆಗಳು ತನಗೆ ಬೇಕಾದ ಯುದ್ಧ ಸಲಕರಣೆಗಳನ್ನು ದೇಶೀಯವಾಗೇ ಖರೀದಿಸುವ ನಿರ್ಧಾರ ಮಾಡಿವೆ. ಇದು ಜಾಗತಿಕವಾಗಿ ಕೆಲವು ಕಂಪನಿಗಳ ಏಕಸ್ವಾಮತೆಯನ್ನು ಬೇಸಿದಂತಾಗಿದೆ ಎಂದಿದ್ದಾರೆ. ಭಾರತೀಯ ರಕ್ಷಣಾ ಪಡೆಗಳ ನಿರ್ಧಾರ ಆತ್ಮ ನಿರ್ಭರ್ ಭಾರತ ಮತ್ತು ಮೇಕಿನ್ ಇಂಡಿಯಾದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ರಕ್ಷಣಾ ಕ್ಷೇತ್ರದಲ್ಲಿ ಭಾರತ ರಫ್ತು ವಲಯದಲ್ಲಿ 2021-22ನೇ ಸಾಲಿನಲ್ಲಿ 13 ಸಾವಿರ ಕೋಟಿ […]