10.50 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವನೆಗಳಿಗೆ ಒಡಿಶಾ ಸರ್ಕಾರ ಸಹಿ

ಭುವನೇಶ್ವರ್,ಡಿ.4- ಒಡಿಶಾ ಸರ್ಕಾರ ಇತ್ತೀಚೆಗೆ ನಡೆಸಿದ ಹೂಡಿಕೆದಾರರ ಸಮಾವೇಶದಲ್ಲಿ 10.50 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಸಹಿ ಹಾಕಲಾಗಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ಕೋವಿಡೋತ್ತರದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದೆಂಗಿಂತಲೂ ಹೆಚ್ಚಿನ ಸಕಾರಾತ್ಮಕ ಪ್ರತಿಕ್ರಿಯೆಗಳ ಮೂಲಕ ಬಂಡವಾಲ ಹೂಡಿಕೆಯ ಪ್ರಸ್ತಾವನೆಗಳು ಚರ್ಚೆಯಾಗಿವೆ ಎಂದು ಅವರು ತಿಳಿಸಿದರು. ಹೂಡಿಕೆದಾರರ ಸಮಾವೇಶದ ಪಾಲುದಾರಿಕೆ ದೇಶಗಳಾಗಿದ್ದ ಜರ್ಮನಿ, ಜಪಾನ್, ನಾರ್ವೆಗೆ ಕೃತಜ್ಞತೆ ಸಲ್ಲಿಸಿದ ಅವರು, ಬಾಧ್ಯಸ್ಥ ಕಂಪನಿಗಳು ಶೀಘ್ರವಾಗಿಯೇ ಉದ್ಯಮಗಳನ್ನು ಆರಂಭಿಸುವ […]
ಕಲ್ಲಿದ್ದಲು ಗಣಿ ಹೂಡಿಕೆಗೆ ನಾಳೆ ಬೆಂಗಳೂರಿನಲ್ಲಿ ಸಮಾವೇಶ

ನವದೆಹಲಿ,ಡಿ.2- ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿನಲ್ಲಿ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸಲು, ಕೇಂದ್ರ ಕಲ್ಲಿದ್ದಲು ಸಚಿವಾಲಯವು ನಾಳೆ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ಆಯೋಜಿದೆ. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಕಲ್ಲಿದ್ದಲು ಸಚಿವಾಲಯವು ಭಾರತದಾದ್ಯಂತ ಹಲವಾರು ಸ್ಥಳಗಳಲ್ಲಿ ಹೂಡಿಕೆದಾರರ ಸಮಾವೇಶವನ್ನು ನಡೆಸಲು ಯೋಜಿಸಿದೆ ಮತ್ತು ಈಗಾಗಲೇ ಇಂದೋರ್ ಮತ್ತು ಮುಂಬೈ ನಗರಗಳಲ್ಲಿ ಅಂತಹ ಸಮಾವೇಶಗಳನ್ನು ಯಶಸ್ವಿಯಾಗಿ ನಡೆದಿವೆ. […]
ಕೈಗಾರಿಕೆಗಳಿಗೆ ಉತ್ತೇಜನ : 1747.37 ಕೋಟಿಯ 35 ಯೋಜನೆಗಳಿಗೆ ಅನುಮೋದನೆ

ಬೆಂಗಳೂರು ಅ.22- ಕೈಗಾರಿಕೆಗಳ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಮತ್ತಷ್ಟು ಉತ್ತೇಜನ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು 1747.37 ಕೋಟಿ ಬಂಡವಾಳ ಹೂಡಿಕೆಯ 35 ಯೋಜನೆಗಳಿಗೆ ಅನುಮೋದನೆ ನೀಡಿದೆ. ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ 135ನೇ ರಾಜ್ಯ ಮಟ್ಟದ ಏಕಗಾವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಬಂಡವಾಳ ಹೂಡಿಕೆಯ ಯೋಜನೆಗೆ ಅನುಮೋದನೆ ನೀಡಲಾಗಿದೆ. ಒಟ್ಟು 35 ಬೃಹತ್ ಮತ್ತು ಮಧ್ಯಮ ಯೋಜನೆಗಳಿಂದ 1747.47 ಕೋಟಿ […]
903 ಕೋಟಿ ರೂ.ವಂಚನೆ : ಚೀನಿ, ತೈವಾನ್ ಪ್ರಜೆ ಸೇರಿದಂತೆ 10 ಮಂದಿ ಸೆರೆ

ಹೈದರಾಬಾದ್,ಅ.13- ಮತ್ತೊಂದು ಚೀನಾ ಆನ್‍ಲೈನ್ ಹೂಡಿಕೆ ವಂಚನೆ ಬಯಲಾಗಿದೆ. ಭಾರತ, ಚೀನಾ, ತೈವಾನ್, ಕಾಂಬೋಡಿಯಾ ಮತ್ತು ಯುಎಇಯಲ್ಲಿ ಚೀನಾ ಆಪ್ ಮೂಲಕ 903 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣ ಬೇಧಿಸಿರುವ ಹೈದರಾಬಾದ್ ಪೊಲೀಸರು ಹತ್ತು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾ ಮೂಲದ ಲಿ ಜಾಂಗ್‍ಜುನ್ ಹಾಗೂ ತೈವಾನ್ ಪ್ರಜೆ ಚು ಚುನ್ ಯೂ ಪ್ರಕರಣದ ಪ್ರಮುಖ ರೂವಾರಿಗಳೆಂದು ಗುರುತಿಸಲಾಗಿದೆ. ಈ ವಂಚಕರಿಂದ ದೇಶದಾದ್ಯಂತ ಲಕ್ಷಗಟ್ಟಲೆ ಹೂಡಿಕೆದಾರರು ವಂಚನೆಗೆ ಒಳಗಾಗಿರಬಹುದು ಎಂದು ನಾವು ಅನುಮಾನಿಸುತ್ತೇವೆ. ದೆಹಲಿಯಲ್ಲಿಯೇ 10,000 […]