ಜೈಲಿನಿಂದ ಬಿಡುಗಡೆಯಾದ ಬಳಿಕ ಮಗುವಿಗೆ ಜನ್ಮ ನೀಡಿ ಮೃತಪಟ್ಟ ಮಹಿಳೆ

ಕೊರಾಪುಟ್(ಒಡಿಶಾ),ಜ.13- ಉದ್ಯೋಗಕ್ಕಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ತುಂಬು ಗರ್ಭಿಣಿಯೊಬ್ಬರು ಕೊಲೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ಜೈಲಿನಿಂದ ಬಿಡುಗಡೆಯಾದ ಮಾರನೇ ದಿನವೇ ಮಗುವಿಗೆ ಜನ್ಮ ನೀಡಿ, ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಒಡಿಸ್ಸಾದ ಮೈಕಾಂಚ್ ಪಂಚಾಯತ್ ವ್ಯಾಪ್ತಿಯ ಅಂದ್ರಾಕಾಂಚ್ ಗ್ರಾಮದ ನಿವಾಸಿ ಮತ್ತು ದಿನಗೂಲಿ ಕಾರ್ಮಿಕರ ಪತ್ನಿ ಮೂವತ್ತು ವರ್ಷದ ಸುಲಬತಿ ನಾಯಕ್ ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ. ಈಕೆ ಒಡಿಶಾದ ರಾಯಗಡದಲ್ಲಿ 16 ದಿನಗಳಿಂದ ಜೈಲಿನಲ್ಲಿದ್ದರು. ಕಳೆದ ವರ್ಷ ಡಿಸೆಂಬರ್ 26 ರಂದು […]