ಪೊಲೀಸರ ಜೀಪ್‍ಗೇ ದಂಡ ವಿಧಿಸಿದ ಆಯುಕ್ತರು

ಮೈಸೂರು,ಜ.19- ಕಾನೂನು ಪಾಲಿಸಲು ಹೇಳುವ ಪೊಲೀಸರೆ ಕಾನೂನು ಪಾಲಿಸದಿದ್ದಾಗ ಅವರಿಗೇ ದಂಡ ವಿಧಿಸಿರುವ ಅಚ್ಚರಿ ಪ್ರಕರಣ ವರದಿಯಾಗಿದೆ. ವಾಹನ ನಿಲುಗಡೆ ನಿಷೇಧ(ನೋ ಪಾರ್ಕಿಂಗ್) ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಎರಡು ಪೊಲೀಸ್ ಜೀಪ್ ಗಳಿಗೇ ನಗರ ಪೊಲೀಸ್ ಆಯುಕ್ತರು ದಂಡ ವಿಧಿಸಿದ್ದಾರೆ. ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಪೊಲೀಸರು ವಾಹನ ನಿಲುಗಡೆ ನಿಷೇಧ ಸ್ಥಳದಲ್ಲಿ ಪೊಲೀಸ್ ಜೀಪ್ ಗಳನ್ನು ನಿಲ್ಲಿಸಿದ್ದರು. ಇದನ್ನು ನೋಡಿದ ಸಾರ್ವಜನಿಕರು ಪೋಟೋ ಕ್ಲಿಕ್ಕಿಸಿ ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್ ಅವರಿಗೆ ಕಳುಹಿಸಿದ್ದರು. ಇದೀಗ ನಗರ ಪೊಲೀಸ್ […]