ಕಾಂಗ್ರೆಸ್ ಅಭ್ಯರ್ಥಿ ಪರ ಕಮಲ್ ಹಾಸನ್ ಪ್ರಚಾರ

ಚೆನ್ನೈ,ಫೆ.19- ಈರೋಡ್ ಪೂರ್ವ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಪ್ರಚಾರದಲ್ಲಿ ನಟ ರಾಜಕಾರಣಿ ಕಮಲ್ ಹಾಸನ್ ಭಾಗವಹಿಸಿದ್ದರು. ಆಡಳಿತಾರೂಢ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್‍ನ ಇ.ವಿ.ಕೆ.ಎಸ್.ಇಳಂಗೋವನ್ ಪರ ಕಮಲ್ ಹಾಸನ್ ಪ್ರಚಾರ ನಡೆಸಿದ್ದಾರೆ. 2018ರಲ್ಲಿ ಮಕ್ಕಳ್ ನೀ ಮೈಯಂ ಪಕ್ಷ ಸ್ಥಾಪಿಸಿದ ಕಮಲ್ ಹಾಸನ್, 2021ರಲ್ಲಿ ವಿಧಾನಸಭೆ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳನ್ನು ಎದುರಿಸಿದ್ದಾರೆ. ಇದೇ ಮೊದಲ ಬಾರಿಗೆ ಬೇರೆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಛತ್ರಪತಿ ಶಿವಾಜಿ ಕೋಟೆಗೆ ಜನರ ಭೇಟಿಗೆ ಅಡ್ಡಿ ಆರೋಪ […]
ಕಮಲ್ ಕಾಂಗ್ರೆಸ್ ಸೇರುವುದನ್ನು ಅಲ್ಲಗಳೆದ ಮಕ್ಕಳ್ ನಿಧಿ ಮೈಯಂ ಪಕ್ಷ

ಚೆನ್ನೈ,ಜ.28- ಖ್ಯಾತ ನಟ ಕಮಲ ಹಾಸನ್ ನೇತೃತ್ವದ ಮಕ್ಕಳ್ ನಿಧಿ ಮೈಯಂ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸಲಾಗುವುದು ಎಂಬ ಹೇಳಿಕೆ ಕಾಣಿಸಿಕೊಂಡ ಬೆನ್ನಲ್ಲೆ ಮೈಯಂ ಪಕ್ಷದ ವೆಬ್‍ಸೈಟ್ ಹ್ಯಾಕ್ ಆಗಿದೆ. 2024ರ ಲೋಕಸಭಾ ಚುನಾವಣೆ ವೇಳೆಗೆ ಮಕ್ಕಳ್ ನಿಧಿ ಮೈಯಂ ಪಕ್ಷವನ್ನು ಕಾಂಗ್ರೆಸ್‍ನೊಂದಿಗೆ ವಿಲೀನಗೊಳಿಸಲಾಗುವುದು ಎಂಬ ಪೋಸ್ಟ್ ವೆಬ್‍ಸೈಟ್‍ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೆ ವೆಬ್‍ಸೈಟ್ ಹ್ಯಾಕ್ ಆಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಮ್ಮ ಪಕ್ಷವನ್ನು ಕಾಂಗ್ರೆಸ್‍ನೊಂದಿಗೆ ವಿಲೀನಗೊಳಿಸುವ ತೀರ್ಮಾನ ನಾವು ಕೈಗೊಂಡಿಲ್ಲ. ನಮ್ಮ ಪಕ್ಷದ ವೆಬ್‍ಸೈಟ್‍ನ್ನು ಹ್ಯಾಕ್ […]
ಕಾಂಗ್ರೆಸ್ ಸೇರುವರೇ ನಟ ಕಮಲ್ ಹಾಸನ್..?!

ಚೆನ್ನೈ,ಜ.26- ಖ್ಯಾತ ಚಿತ್ರನಟ ಕಮಲ್‍ಹಾಸನ್ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ. ಈರೋಡ್ ಪೂರ್ವದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಪಕ್ಷದ ಅಭ್ಯರ್ಥಿ ಇಳಂಗೋವನ್ ಅವರಿಗೆ ಕಮಲ್‍ಹಾಸನ್ ನೇತೃತ್ವದ ಮಕ್ಕಳ್ ನಿಧಿ ಮೈಯಂ ಪಕ್ಷ ಬೆಂಬಲ ನೀಡಿದೆ. ಈ ಕುರಿತಂತೆ ಮಾಧ್ಯಮದರೊಂದಿಗೆ ಮಾತನಾಡಿದ ಕಮಲ್, ದೇಶದ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದಾಗಿ ಘೋಷಿಸಿದರು. ಆಗ ಮಾಧ್ಯಮದವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ರ್ಪಸುವಿರಾ ಎಂದಾಗ ಯಾಕಾಗಬಾರದು ಎಂದು ಹೇಳಿಕೆ ನೀಡುವ ಮೂಲಕ ಭವಿಷ್ಯದಲ್ಲಿ […]
ಭಾರತ್ ಜೋಡೊ ಯಾತ್ರೆಗೆ ಕಮಲ್ ಹಾಸನ್..?

ಚೆನ್ನೈ,ಡಿ.19- ಮಕ್ಕಳ್ ನೀ ಮಯ್ಯಂ ಪಕ್ಷದ ಸಂಸ್ಥಾಪಕ ಹಾಗೂ ಖ್ಯಾತ ಚಿತ್ರ ನಟ ಕಮಲ್ ಹಾಸನ್ ಅವರು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಡಿ.24 ರಂದು ದೆಹಲಿಯಲ್ಲಿ ನಡೆಯಲಿರುವ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ರಾಹುಲ್ ಗಾಂಧಿ ಅವರು ಮಾಡಿಕೊಂಡಿರುವ ಮನವಿಗೆ ಕಮಲ್ ಹಾಸನ್ ಸಾಕರಾತ್ಮಕವಾಗಿ ಸ್ಪಂದಿಸಿರುವುದರಿಂದ ಅವರು ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ನನಗೆ ಪತ್ರ ಬರೆದು ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಅವರ ಮನವಿಗೆ […]