ಪ್ರತ್ಯೇಕ ಅಪಘಾತ : ಉತ್ತರಪ್ರದೇಶದಲ್ಲಿ 39 ಮಂದಿ ಸಾವು
ಕಾನ್ಪುರ,ಅ.2- ಕಳೆದ 24 ಗಂಟೆಗಳ ಅವಧಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 39 ಮಂದಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಎರಡು ಅಪಘಾತಗಳಿಂದ ಒಟ್ಟು 32 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 27 ಮಂದಿ ಟ್ರಾಕ್ಟರ್ ಟ್ರಾಲಿ ಪಲ್ಟಿಯಾಗಿ ಕೆರೆಗೆ ಬಿದ್ದದ್ದರಿಂದ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕರು ಮಹಿಳೆಯರು ಮತ್ತು ಮಕ್ಕಳೇ ಆಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕಾನ್ಪುರದ ಅಹಿರವಾನ್ […]
ಕೋಮಾದಲ್ಲಿದ್ದಾನೆ ಎಂದು 18 ತಿಂಗಳಿನಿಂದ ಶವವನ್ನು ಮನೆಯಲ್ಲಿರಿಸಿಕೊಂಡಿದ್ದರು!
ಕಾನ್ಪುರ ,ಸೆ.24-ಕಳೆದ ವರ್ಷ ಮೃತಪಟ್ಟ ಆದಾಯ ತೆರಿಗೆ ಇಲಾಖೆ ನೌಕರ ಕೋಮಾದಲ್ಲಿದ್ದಾನೆ ಎಂದು ಭಾವಿಸಿ ಅವನ ಕುಟುಂಬ ವರ್ಗದವರು, ಸುಮಾರು 18 ತಿಂಗಳ ಕಾಲ ಆತನ ಶವವನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದ ವಿಲಕ್ಷಣ ಘಟನೆ ಮಧ್ಯಪ್ರದೇಶದ ಕಣ್ಣೂರಿನಲ್ಲಿ ನಡೆದಿದೆ. ಸತ್ತ ಪತಿಯ ಶವ ಕೊಳೆಯಬಾರದು ಎಂದು ಆತನ ಪತ್ನಿ ಪ್ರತಿದಿನ ಶವದ ಮೇಲೆ ಗಂಗಾಜಲ ಎರಚುತ್ತ ಇಂದಲ್ಲ, ನಾಳೆ ನನ್ನ ಪತಿ ಮೇಲೇಳುತ್ತಾನೆ ಎಂದು ಭಾವಿಸಿಕೊಂಡು ಈ ರೀತಿ ನಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 2021 ರ ಏಪ್ರಿಲ್ […]