ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪ, ಬಿಹಾರದಲ್ಲಿ ಆತಂಕ

ಕಠ್ಮಂಡು,ಜು.31- ನೆರೆ ರಾಷ್ಟ್ರ ನೇಪಾಳದ ಕಠ್ಮುಂಡುವಿನಲ್ಲಿ ಪ್ರಬಲ ಭೂಕಂಪ ಉಂಟಾಗಿದೆ. ಬೆಳಗಿನ ಜಾವ 6.07ರ ಸುಮಾರಿಗೆ ರಿಕ್ಟರ್ ಮಾಪನದಲ್ಲಿ 6.0ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಕಠ್ಮಂಡುವಿನ ಪೂರ್ವ ಆಗ್ನೇಯಕ್ಕೆ 147 ಕಿ.ಮೀ ದೂರದಲ್ಲಿನ ದಿತುಂಗ್‍ನಲ್ಲಿ ಬೆಳಗಿನ ಜಾವ ಭೂಕಂಪನ ಸಂಭವಿಸಿದೆ ಎಂದು ಭೂಕಂಪನ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ಇಲಾಖೆ ಮಾಹಿತಿ ನೀಡಿದೆ. ಈ ಪ್ರದೇಶದಲ್ಲಿ ಪ್ರಬಲ ಭೂಕಂಪನ ಸಂಭವಿಸಿರುವುದರಿಂದ ಬೆಳಗ್ಗೆ 8 ಗಂಟೆಗೆ ವೇಳೆಗೆ ಬಿಹಾರದ ಸೀತಮರ್ಹಿ, ಮುಜಾಫರ್‍ಪುರ್ ಮತ್ತು ಬಾಗಲಪುರದಲ್ಲಿಯೂ ಕಂಪನದ ಅನುಭವವಾಗಿದ್ದು ಜನ ಆತಂಕಕ್ಕೆ […]