ಇಡಿ ಅಧಿಕಾರಿಗಳಿಂದ ಮಾ.10ಕ್ಕೆ ಕೆಸಿಆರ್ ಪುತ್ರಿ ವಿಚಾರಣೆ

ನವದೆಹಲಿ,ಮಾ.8- ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರ ಪುತ್ರಿ ಕವಿತಾ ಅವರನ್ನು ಮಾ.10ರಂದು ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾ ಅವರನ್ನು ಕಳೆದ ಡಿಸೆಂಬರ್ 12 ರಂದು ಸಿಬಿಐ ಅಧಿಕಾರಿಗಳು ಹೈದರಾಬಾದ್‍ನಲ್ಲಿ ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಜಾರಿ ನಿರ್ದೇಶನಾಲಯವು ಮದ್ಯದ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆ ತನಿಖೆ ನಡೆಸುತ್ತಿದೆ. ದೆಹಲಿ ನ್ಯಾಯಾಲಯವು ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು […]
ಫೈಜರ್ ಲಸಿಕೆ ಭಾರತಕ್ಕೆ ಬರಲು ಕೇಂದ್ರ ಸರ್ಕಾರ ಬಿಡಲಿಲ್ಲ; ಕೆಸಿಆರ್

ನಾಂದೇಡ್.ಫೆ.8- ಫೈಜರ್ ಕೋವಿಡ್ ಲಸಿಕೆ ಅಮದು ತಡೆಯಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿತ್ತು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಗಂಭೀರ ಆರೋಪ ಮಾಡಿದ್ದಾರೆ. ಅಮೆರಿಕಾದ ದೈತ್ಯ ಕಂಪನಿಯಾದ ಫೈಜರ್ ಲಸಿಕೆಗಳನ್ನು ತರಿಸಿಕೊಳ್ಳಲು ನಾನು ಮತ್ತು ಇತರ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಚಿಂತನೆ ನಡೆಸಿದ್ದೇವು ಆದರೆ, ಮೋದಿ ಸರ್ಕಾರ ಅದಕ್ಕೆ ಆಸ್ಪದ ನೀಡಲಿಲ್ಲ ಎಂದು ಕೆಸಿಆರ್ ದೂರಿದ್ದಾರೆ. ಫೈಜರ್ ಸಂಸ್ಥೆ ವಿರುದ್ಧ ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆರೋಪ ಮಾಡಿದ್ದ ಬೆನ್ನಲ್ಲೇ ಕೆಸಿಆರ್ […]
ಕೆಸಿಆರ್ ಪುತ್ರಿ ಕವಿತಾ ಪರಿಚಯಸ್ಥನ ಬಂಧನ

ನವದೆಹಲಿ,ಫೆ.8- ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‍ರಾವ್ ಅವರ ಪುತ್ರಿ ಕವಿತಾ ಅವರ ಮಾಜಿ ಉದ್ಯೋಗಿ ಬುಚ್ಚಿಬಾಬು ಅವರನ್ನು ದೆಹಲಿ ಮದ್ಯ ನೀತಿ ಪ್ರಕರಣದ ಆರೋಪದ ಹಿನ್ನೆಯಲ್ಲಿ ಸಿಬಿಐ ಬಂಧಿಸಿದೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬುಚ್ಚಿಬಾಬು ಕೈವಾಡವಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅವರನ್ನು ವಿಚಾರಣೆಗೆಂದು ತೆಲಂಗಾಣದಿಂದ ಕರೆಸಿಕೊಂಡು ನಿನ್ನೆ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಈಗ ರದ್ದದ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಬಾಬು ಅವರ ಪಾತ್ರವಿದೆ ಎಂದು ಸಿಬಿಐ […]
ಮತ್ತೆ ಚರ್ಚೆಯ ಕೇಂದ್ರ ಬಿಂದುವಾದ ಜಮೀರ್

ಬೆಂಗಳೂರು,ಜ.21- ವಿವಾದಗಳಿಗೆ ಜಮೀರ್ ಅಹಮದ್ ಆಪ್ತರೋ ಅಥವಾ ಜಮೀರ್ ಅಹಮದ್‍ಖಾನ್‍ಗೆ ವಿವಾದಗಳು ಇಷ್ಟವೋ ಎಂಬ ಗೊಂದಲಗಳ ನಡುವೆ ಚುನಾವಣೆ ಕಾಲದಲ್ಲಿ ಪಕ್ಷಕ್ಕೆ ಮತ್ತೊಂದು ಮುಜುಗರದ ಸಂಗತಿಗೆ ಕಾರಣರಾಗಿದ್ದಾರೆ. ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ವಲಸೆ ಬಂದಾಗಿನಿಂದಲೂ ಒಂದಲ್ಲ ಒಂದು ವಿವಾದಗಳ ಮೂಲಕ ಕಾಂಗ್ರೆಸ್ ವರ್ಚಸ್ಸಿಗೆ ಜಮೀರ್ ಧಕ್ಕೆಯುಂಟು ಮಾಡುತ್ತಲೇ ಇದ್ದಾರೆ. ಹೊಸದಾಗಿ ಕೆಸಿಆರ್ ಫಂಡಿಂಗ್ ವಿವಾದವಂತೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‍ರಾವ್ ಟಿಆರ್‍ಎಸ್ ಪಕ್ಷವನ್ನು ಇತ್ತೀಚೆಗೆ ಬಿಆರ್‍ಎಸ್ ಆಗಿ ಪರಿವರ್ತಿಸಿ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ಬಿಜೆಪಿಗೆ ಪರ್ಯಾಯವಾಗಿ […]
ಕಾಂಗ್ರೆಸ್ ಸೋಲಿಸಲು ಕೆಸಿಆರ್ ಫಂಡಿಂಗ್ : ಪ್ರತಿಕ್ರಿಯಿಸಲು ಡಿಕೆಶಿ ನಕಾರ

ಬೆಂಗಳೂರು,ಜ.21- ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ 500 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರಾಕರಿಸಿದ್ದಾರೆ. ಪಕ್ಷದ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಒಡೆಯಲು ಟಿಆರ್‍ಎಸ್ ನಾಯಕ ಹಾಗೂ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರರಾವ್ ಅವರು ಹಣ ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಹಣ್ಣ ಕೊಟ್ಟಿರುವವರು ಹಾಗೂ ತೆಗೆದುಕೊಂಡವರನ್ನು ಕೇಳಿ. ಬೇರೆಯವರು ವೈಯಕ್ತಿಕ ವಿಚಾರಕ್ಕಾಗಿ ಚಂದ್ರಶೇಖರ್‍ರಾವ್‍ರನ್ನು ಭೇಟಿ ಮಾಡಿರಬಹುದು, ಅದನ್ನು […]
ರಾಷ್ಟ್ರ ರಾಜಕಾರಣದತ್ತ BRS ಪಕ್ಷದ ಚಿತ್ತ, ದೆಹಲಿಯಲ್ಲಿ ಕಚೇರಿ ಆರಂಭ

ನವದೆಹಲಿ,ಡಿ.14- ತೆಲಂಗಾಣದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಕೆ.ಸಿ.ಆರ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದು, ಇಂದು ದೆಹಲಿಯಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿದೆ. ಸರ್ದಾರ್ ಪಟೇಲ್ ಮಾರ್ಗದಲ್ಲಿ ಆರಂಭಿಸಲಾಗಿರುವ ನೂತನ ಕಚೇರಿಯಲ್ಲಿ ಇಂದು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಪಕ್ಷದ ಧ್ವಜವನ್ನು ಅನಾವರಣಗೊಳಿಸಿದರು ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಔಪಚಾರಿಕವಾಗಿ ಆಸನ ಅಲಂಕರಿಸಿದರು. ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಇಂದಿನಿಂದ ರಾಷ್ಟ್ರ ರಾಜಕಾರಣದಲ್ಲೂ ತನ್ನ ಹೆಜ್ಜೆಗಳನ್ನು ಮೂಡಿಸಲಿದೆ ಎಂದು ಬಿಆರ್‌ಎಸ್ ಸಂಸದ ರಂಜಿತ್ ರೆಡ್ಡಿ ತಿಳಿಸಿದ್ದಾರೆ. […]