ಕಿರಣ್ ರಿಜಿಜು ಹೇಳಿಕೆಗೆ ಬಾರ್ ಕೌನ್ಸಿಲ್ ಆಕ್ರೋಶ

ಅಗರ್ತಲಾ,ಮಾ.24-ನಿವೃತ್ತ ನ್ಯಾಯಾೀಧಿಶರ ವಿರುದ್ಧ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಮಾಡಿರುವ ಟೀಕೆಗಳನ್ನು ತ್ರಿಪುರ ಬಾರ್ ಕೌನ್ಸಿಲ್ ಖಂಡಿಸಿದೆ. ಕಾನೂನು ಸಚಿವರ ಈ ಹೇಳಿಕೆಗಳು ನ್ಯಾಯಾಂಗದಲ್ಲಿ ಮಧ್ಯಪ್ರವೇಶಿಸುವ ಕೇಂದ್ರದ ಪ್ರಯತ್ನವಾಗಿದೆ ಎಂದು ಬಾರ್ ಕೌನ್ಸಿಲ್ ಆರೋಪಿಸಿದೆ. ಮಾರ್ಚ್ 18 ರಂದು ನಡೆದ ಸಮಾವೇಶವೊಂದರಲ್ಲಿ, ಕೆಲವು ನಿವೃತ್ತ ನ್ಯಾಯಾೀಧಿಶರು ಮತ್ತು ಭಾರತ ವಿರೋಧಿಗ್ಯಾಂಗ್‍ನ ಭಾಗವಾಗಿದ್ದಾರೆ. ಕೆಲವು ಕಾರ್ಯಕರ್ತರು ಭಾರತೀಯ ನ್ಯಾಯಾಂಗವನ್ನು ವಿರೋಧ ಪಕ್ಷದ ಪಾತ್ರವನ್ನು ವಹಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ರಿಜಿಜು ಹೇಳಿದ್ದರು. ಛತ್ತೀಸ್‍ಗಢದಲ್ಲಿ ನಾಲ್ವರು ಅಮೃತ್‍ಸಿಂಗ್‍ಪಾಲ್ […]

ಕೆಲವರು ಭಾರತದ ಘನತೆ ಹಾಳುಮಾಡಲು ಯತ್ನಿಸುತ್ತಿದ್ದಾರೆ : ಕಿರಣ್ ರಿಜಿಜು

ಭುಬನೇಶ್ವರ್,ಮಾ.5 – ಕೆಲವರು ಭಾರತದ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂಬುವುದನ್ನು ಜಗತ್ತಿಗೆ ಸಾರುವ ಪ್ರಯತ್ನದಲ್ಲಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಪೂರ್ವ ರಾಜ್ಯಗಳಲ್ಲಿನ ವಕೀಲರ ಸಮಾವೇಶವನ್ನು ಉದ್ಘಾಟಿಸಿದ ಮಾತನಾಡಿದ ಅವರು, ನ್ಯಾಯೀಧಿಶರ ಕಾರ್ಯಕ್ಷಮತೆಯು ಸಾರ್ವಜನಿಕರ ವಿಶ್ಲೇಷಣೆಗೆ ಮೀರಿದ್ದಾಗಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸಲಾಗುವುದಿಲ್ಲ , ಮತ್ತು ನ್ಯಾಯಾೀಧಿಶರ ತೀರ್ಪನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಲಾಗುವುದಿಲ್ಲ ಎಂದರು. ಎಸ್.ಎಂ.ಕೆ. ಭೇಟಿಯಾದ ಸುಮಲತಾ ಭಾರತದ ನ್ಯಾಯಾಂಗ ಮತ್ತು […]

ಮಹಿಳೆಯರು, ಮಕ್ಕಳು ಸುರಕ್ಷಿತವಲ್ಲದಾಗ ಸಂಭ್ರಮ ಔಚಿತ್ಯವಲ್ಲ: ಕಿರಣ್ ರಿಜಿಜು

ನವದೆಹಲಿ,ಮಾ.2- ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿಲ್ಲದಿದ್ದರೆ ಸಮಾಜ ಅಥವಾ ರಾಷ್ಟ್ರವು ತನ್ನ ಸಾಧನೆಗಳನ್ನು ಸಂಭ್ರಮಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಇಲ್ಲಿನ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‍ಎಚ್‍ಆರ್‍ಸಿ) ಆಯೋಜಿಸಿದ್ದ ಮಕ್ಕಳ ಲೈಂಗಿಕ ದೌರ್ಜನ್ಯ ವಸ್ತು ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ರಿಜಿಜು, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ವಿಷಯದಲ್ಲಿ ನಾವು ಕಾನೂನು ನಿಬಂಧನೆಗಳನ್ನು ಮೀರಿ ಹೋಗಬೇಕಾಗುತ್ತದೆ ಮತ್ತು ಸಮಾಜವು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಗ್ಗೂಡಬೇಕಿದೆ ಎಂದರು. ಮಕ್ಕಳ […]

ಸಂವಿಧಾನ ಧಾರ್ಮಿಕ ಪುಸ್ತಕ ಎಂಬಂತೆ ನಾವು ನಡೆದುಕೊಳ್ಳುತ್ತಿದ್ದೇವೆ : ಕೇಂದ್ರ ಸಚಿವ

ಕುರುಕ್ಷೇತ್ರ,ಡಿ.27- ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ನ್ಯಾಯಾಲಯಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಅಧಿಕಾರ ನೀಡಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜೂಜು ಹೇಳಿದ್ದಾರೆ. ಹರಿಯಾಣದಲ್ಲಿನ ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ನಡೆದ ಮೂರು ದಿನಗಳ ಭಾರತೀಯ ಅವಕಾತ್ ಪರಿಷತ್‍ನ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ದೇಶದ ವಿವಿಧ ನ್ಯಾಯಾಲಯಗಳಲ್ಲಿ 5 ಕೋಟಿಗೂ ಹೆಚ್ಚಿನ ಪ್ರಕರಣಗಳು ಬಾಕಿ ಉಳಿದಿವೆ. ಕೋವಿಡ್ ವೇಳೆಯಲ್ಲೂ ನ್ಯಾಯಾಲಯಗಳ ಕಾರ್ಯಾಚರಣೆಗೆ ತೊಂದರೆಯಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿತ್ತು. ಪ್ರಸ್ತುತ ಹಲವು ರಾಜಕೀಯ ಪಕ್ಷಗಳು, […]