ರಾಹಲ್ ಅನರ್ಹತೆ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಸಂಕಲ್ಪ ಸತ್ಯಾಗ್ರಹ

ನವದೆಹಲಿ,ಮಾ.26- ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ, ಸಂಸದ ಸ್ಥಾನದಿಂದ ಅಮಾನತುಗೊಂಡಿರುವ ರಾಹಲ್ ಗಾಂಧಿ ಪರವಾಗಿ ಕಾಂಗ್ರೆಸ್ ಇಂದು ದೇಶಾದ್ಯಂತ ಸಂಕಲ್ಪ ಸತ್ಯಾಗ್ರಹ ಪ್ರತಿಭಟನೆ ನಡೆಸಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾಂಗ್ರೆಸ್ ನಡೆಯನ್ನು ಪ್ರಶ್ನಿಸಿದೆ. ದೆಹಲಿಯ ರಾಜಘಾಟ್‍ನಲ್ಲಿ ಮಹಾತ್ಮ ಗಾಂಧಿ ಪುಣ್ಯಭೂಮಿಯಲ್ಲಿ ನಡೆದ ಸತ್ಯಾಗ್ರಹದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾಗಾಂಧಿ ವಾದ್ರಾ, ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್ ಸೇರಿದಂತೆ ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ದೆಹಲಿ ಜೊತೆಗೆ ದೇಶಾದ್ಯಂತ ಎಲ್ಲಾ ರಾಜ್ಯಗಳು ಮತ್ತು […]

ಇಸ್ರೋ ಮತ್ತೊಂದು ಮಹತ್ವದ ದಾಖಲೆ

ಶ್ರೀಹರಿಕೋಟ,ಮಾ.26-ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಮಿಷನ್ ಸೇರಿದಂತೆ ಒನ್ ವೆಬ್ 5805 ಟನ್ ತೂಕ 36 ಉಪಗ್ರಹಗಳು ಹೊತ್ತು ಇಸ್ರೋದ ಅತ್ಯಂತ ಭಾರವಾದ ರಾಕೆಟ್ ಜಿಎಸ್‍ಎಲ್‍ವಿಎಂಕೆ-3 ಅನ್ನು ಉಡಾವಣೆ ಮಾಡಲಾಗಿದೆ. ಇಂದು ಬೆಳಗ್ಗೆ 9 ಗಂಟೆಗೆ ನಭಕ್ಕೆ ಜಿಗಿದ ರಾಕೆಟ್ ಕಕ್ಷೆ ತಲುಪುತ್ತಿದ್ದು, ಇಸ್ರೋದ ವಿಜ್ಞಾನಿಗಳಲ್ಲಿ ಸಂತಸ ಮನೆ ಮಾಡಿದೆ. ವಿಶೇಷವಾಗಿ ಇದನ್ನು ಬ್ರಿಟನ್‍ನ ಕ್ಲೈಂಟ್ ಕಂಪನಿ ನೆಟ್‍ವರ್ಕ್ ಅಸೋಸಿಯೇಷನ್ ಲಿಮಿಟೆಡ್ ಪಾಲುದಾರಿಕೆ ಹೊಂದಿದೆ. ಇಸ್ರೋದ ಇತಿಹಾಸದಲ್ಲಿ ಇದೊಂದು ದೊಡ್ಡ ಸಾಧನೆಯಾಗಿದ್ದು, ಈ ಉಡಾವಣೆಗೆ […]

ಉತ್ತರ ಕೊರಿಯಾ ಜಲಾಂತರ್ಗಾಮಿ ಯಿಂದ ಕ್ಷಿಪಣಿ ಉಡಾವಣೆ

ಸಿಯೋಲ್, ಮಾ 13-ಯುದ್ಧಕ್ಕೆ ಸಿದ್ಧವಾಗಿರುವಂತೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ತನ್ನ ಪಡೆಗಳಿಗೆ ಆದೇಶಿಸಿರುವ ನಡುವೆ ಇಂದು ಜಲಾಂತರಗಾಮಿಯಿಂದ ಕ್ಷಿಪಣಿ ಉಡಾವಣೆ ಪರೀಕ್ಷೆ ನಡೆಸಲಾಗಿದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಸೇನಾ ಪಡೆ ದೊಡ್ಡ ಪ್ರಮಾಣದ ಜಂಟಿ ಸಮಾರಾಭ್ಯಾಸವನ್ನು ಆಕ್ರಮಣಕ್ಕೆ ಪೂರ್ವಾಭ್ಯಾಸವೆಂದು ಪರಿಗಣಿಸಿರುವ ಉತ್ತರ ಕೊರಿಯಾದ ಪ್ರತ್ಯುತ್ತರವಾಗಿ ಒಂದು ದಿನದ ಮೊದಲು ಕ್ಷಿಪಣಿ ಪರೀಕ್ಷೆ ನಡೆಸಿದೆ. ಉತ್ತರ ಕೊರಿಯಾದ ಅಧಿಕೃತ ಸುದ್ದಿವಾನಿನಿ , ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ಪ್ರಕಾರ ಕ್ಷಿಪಣಿ ಉಡಾವಣೆಗಳು ಅಮೆರಿಕ […]

ಒಂದೇ ಉಡಾವಣೆಯಲ್ಲಿ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ

ಬೆಂಗಳೂರು,ಅ.23-ಇಂದು ಬೆಳಗ್ಗೆ ಯಶಸ್ವಿಯಾದ 36 ಉಪಗ್ರಹಗಳ ಉಡಾವಣೆ ಪ್ರಕ್ರಿಯೆ ಭವಿಷ್ಯ ಭಾರತದ ಸಂಪರ್ಕ ಜಾಲವನ್ನು ಮತ್ತಷ್ಟು ಸದೃಢಗೊಳಿಸುವ ವಿಶ್ವಾಸ ಮೂಡಿಸಿದೆ. ಲಂಡನ್ ಮೂಲದ ಉಪಗ್ರಹ ಸಂವಹನ ಸಂಸ್ಥೆ ನೆಟ್‍ವರ್ಕ್ ಅಕ್ಸೆಸ್ ಅಸೋಸಿಯೇಟೆಡ್ ಲಿಮಿಟೆಡ್( ಒನ್ ವೆಬ್) ಇಸ್ರೋದೊಂದಿಗಿನ ವಾಣಿಜ್ಯ ಒಪ್ಪಂದ ಮತ್ತು ಉಪಗ್ರಹಗಳ ಉಡಾವಣೆ 2023ರ ವೇಳೆಗೆ ಭಾರತದ ಉದ್ದ ಮತ್ತು ಅಗಲದ ಸಂಪರ್ಕ ವ್ಯವಸ್ಥೆಯನ್ನು ದೃಢಗೊಳಿಸುವ ಬದ್ದತೆ ಹೊಂದಿದೆ ಎಂದು ಕಂಪನಿ ಹೇಳಿದೆ. ಲಡಾಕ್‍ನಿಂದ ಕನ್ಯಾಕುಮಾರಿಯವರೆಗೂ, ಗುಜರಾತ್‍ನಿಂದ ಅರುಣಾಚಲ ಪ್ರದೇಶದವರೆಗೂ ಸುರಕ್ಷಿತ ಪರಿಹಾರಗಳನ್ನು ಒದಗಿಸುವ ಜೊತೆಗೆ […]

10 ಲಕ್ಷ ಉದ್ಯೋಗ ಕಲ್ಪಿಸುವ ರೋಜಗಾರ್ ಮೇಳಕ್ಕೆ ಮೋದಿ ಚಾಲನೆ

ನವದೆಹಲಿ,ಅ.22- ದೇಶದಲ್ಲಿ ನಿರುದ್ಯೋಗ ನಿವಾರಿಸಿ ಯುವಕರಿಗೆ 10 ಲಕ್ಷ ಉದ್ಯೋಗ ಕಲ್ಪಿಸುವ ಬಹುನಿರೀಕ್ಷಿತ ರೋಜಗಾರ್ ಮೇಳಕ್ಕೆ(ಉದ್ಯೋಗ ಮೇಳ) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿದ್ಯುಕ್ತವಾಗಿ ಚಾಲನೆ ನೀಡಿ ಮೊದಲ ಹಂತದಲ್ಲೇ 75 ಸಾವಿರ ಯುವಕರಿಗೆ ನೇರ ನೇಮಕಾತಿ ಆದೇಶ ಪತ್ರ ನೀಡಿದರು. ಕೋವಿಡ್ ನಂತರ ಕೇಂದ್ರ ಸರ್ಕಾರವು ಏಕಕಾಲಕ್ಕೆ ನೇರ ನೇಮಕಾತಿ ನಡೆಸಿರುವ ಬಹುದೊಡ್ಡ ಪ್ರಕ್ರಿಯೆ ಇದಾಗಿದೆ. ಮುಂದಿನ ಒಂದು ವರ್ಷದೊಳಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಗುರಿ […]

13 ನಗರಗಳಲ್ಲಿಇಂದಿನಿಂದ 5ಜಿ ಸೇವೆ ಆರಂಭ

ನವದೆಹಲಿ,ಅ.1-ದೇಶದ ಹದಿಮೂರು ನಗರಗಳಲ್ಲಿ ಇಂದಿನಿಂದ ಲಭ್ಯವಾಗುವ 5ಜಿ ಸೇವೆಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದರು. ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ 6ನೇ ಭಾರತೀಯ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ 5ಜಿಗೆ ಚಾಲನೆ ನೀಡಲಾಗಿದೆ. ಈ ಸೇವೆ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ 13 ನಗರಗಳಲ್ಲಿ ಇಂದಿನಿಂದ ಲಭ್ಯವಾಗಲಿದೆ. 5ಜಿಗಿಂತಲೂ 10 ಪಟ್ಟು ವೇಗ ಹೊಂದಿರುವ 5ಜಿ ಸೇವೆ ಹೊಸ ತಂತ್ರಜ್ಞಾನ ಉದಯಕ್ಕೆ ಕಾರಣವಾಗಿದೆ. ತಡೆರಹಿತ ನೆಟ್‍ವರ್ಕ್, ವೇಗವಾದ ದತ್ತಾಂಶ ವರ್ಗಾವಣೆ, ಕಡಿಮೆ ವಲಯದಲ್ಲಿ ಹೆಚ್ಚು ವಿಶ್ವಾಸಾರ್ಹ ಸಂವಹನಗಳು,ಇಂಧನ ದಕ್ಷತೆ, […]

ನೀರು, ವಿದ್ಯುತ್ ಮಾದರಿಯಲ್ಲೇ ಪ್ರತಿಯೊಂದು ಮನೆಗೂ ಇಂಟರ್ನೆಟ್ : ಮೋದಿ ಸಂಕಲ್ಪ

ನವದೆಹಲಿ, ಅ.1- ನೀರು, ವಿದ್ಯುತ್, ಅಡುಗೆ ಅನಿಲದ ಮಾದರಿಯಲ್ಲೇ ದೇಶದ ಪ್ರತಿಯೊಂದು ಮನೆಗೂ ಇಂಟರ್ ನೆಟ್ ಸೇವೆಯನ್ನು ಒದಗಿಸುವ ಸಂಕಲ್ಪವನ್ನು ಸರ್ಕಾರ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಡಿಯನ್ ಮೊಬೈಲ್ ಕಾಂಗ್ರೆಸ್‍ನ ಆರನೇ ಆವೃತ್ತಿಗೆ ಚಾಲನೆ ನೀಡಿ, 5ಜಿ ಸೇವೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ನಮ್ಮ ಸರ್ಕಾರದ ಪ್ರಯತ್ನದಿಂದಾಗಿ ಭಾರತದಲ್ಲಿ ಡೇಟಾದ ವೆಚ್ಚವು ತುಂಬಾ ಕಡಿಮೆಯಾಗಿದೆ. ಹಿಂದೆ 1 ಜಿಬಿಗೆ 300 ರೂಪಾಯಿಗಳನ್ನು ಪಾವತಿಸಬೇಕಿತ್ತು, ಈಗ 10 ರೂಪಾಯಿಗೆ ಅಷ್ಟೆ ಪ್ರಮಾಣದ […]

BIG NEWS : 5G ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ,ಅ.1-ದೇಶದ ಹದಿಮೂರು ನಗರಗಳಲ್ಲಿ ಇಂದಿನಿಂದ ಲಭ್ಯವಾಗುವ 5ಜಿ ಸೇವೆಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದರು. ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ 6ನೇ ಭಾರತೀಯ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ 5ಜಿಗೆ ಚಾಲನೆ ನೀಡಲಾಗಿದೆ.ಈ ಸೇವೆ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ 13 ನಗರಗಳಲ್ಲಿ ಇಂದಿನಿಂದ ಲಭ್ಯವಾಗಲಿದೆ. 4ಜಿಗಿಂತಲೂ 10 ಪಟ್ಟು ವೇಗ ಹೊಂದಿರುವ 5ಜಿ ಸೇವೆ ಹೊಸ ತಂತ್ರಜ್ಞಾನ ಉದಯಕ್ಕೆ ಕಾರಣವಾಗಿದೆ. ತಡೆರಹಿತ ನೆಟ್‍ವರ್ಕ್, ವೇಗವಾದ ದತ್ತಾಂಶ ವರ್ಗಾವಣೆ, ಕಡಿಮೆ ವಲಯದಲ್ಲಿ ಹೆಚ್ಚು ವಿಶ್ವಾಸಾರ್ಹ ಸಂವಹನಗಳು,ಇಂಧನ ದಕ್ಷತೆ, ಸ್ಪೆಕ್ಟ್ರಂ […]

ಅಶೋಕ್ ಸೂಟ ಅವರಿಂದ ಹ್ಯಾಪಿಯೆಸ್ಟ್ ಹೆಲ್ತ್ ಆರಂಭ

ಬೆಂಗಳೂರು, 15 ಜುಲೈ 2022: ಖ್ಯಾತ ಉದ್ಯಮಿ ಮತ್ತು Happiest Minds ನ ಕಾರ್ಯಕಾರಿ ಅಧ್ಯಕ್ಷ ಅಶೋಕ್ ಸೂಟ ಅವರು ಇಂದು ತಮ್ಮ ಮತ್ತೊಂದು ಔದ್ಯಮಿಕ ಸಂಸ್ಥೆಯಾದ Happiest Health ಅನ್ನು ಘೋಷಣೆ ಮಾಡಿದ್ದಾರೆ. ಆರೋಗ್ಯ ಮತ್ತು ಕ್ಷೇಮಕ್ಕೆ ಸಂಬಂಧಿಸಿದಂತೆ ಆಳವಾದ, ವಿಶ್ವಾಸಾರ್ಹವಾದ ಮತ್ತು ನಂಬಲರ್ಹ ಜ್ಞಾನವನ್ನು ಒದಗಿಸುವ ಗುರಿಯನ್ನು ಹೊಂದಿರುವ ಜಾಗತಿಕ ಆರೋಗ್ಯ ಮತ್ತು ಕ್ಷೇಮ ಜ್ಞಾನದ ಒಂದು ಉದ್ಯಮವಾಗಿದೆ. ತನ್ನ ಅಧಿಕೃತ ವೆಬ್ ಸೈಟ್ Happiest Health ಅನ್ನು ಈಗಾಗಲೇ ಆರಂಭಿಸಿದೆ. ಆರೋಗ್ಯ ಮತ್ತು […]