ಲೋನ್ ಕೊಡುವುದಾಗಿ ಹಣ ಪಡೆದು ವಂಚನೆ : 6 ಮಂದಿ ವಿರುದ್ಧ ದೂರು

ಬೆಂಗಳೂರು, ಡಿ.28- ಆಸ್ತಿ ಖರೀದಿಗಾಗಿ ಲೋನ್ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಂದ ಲಕ್ಷಾಂತರ ಹಣ ಪಡೆದು ವಂಚಿಸಿರುವ ಬಗ್ಗೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಆರು ಮಂದಿಯ ವಿರುದ್ಧ ದೂರು ದಾಖಲಾಗಿದೆ. ಸಹಕಾರ ನಗರದ ನಿವಾಸಿ ಶ್ರೀದೇವಿ ಎಂಬುವರು ಆಸ್ತಿ ಖರೀದಿಗಾಗಿ 10 ಕೋಟಿ ಲೋನ್ ಪಡೆಯಲು ನಿರ್ಧರಿಸಿ ಪತ್ರಿಕೆಗಳಲ್ಲಿ ಬಂದಂತಹ ಜಾಹೀರಾತು ನೋಡಿ ವೈಯಾಲಿಕಾವಲ್‍ನ ವಿನಾಯಕ ಸರ್ಕಲ್ ಬಳಿ ಇರುವ ಸಾಮಿನಾಥ್ ಫೈನಾನ್ಸಿಯಲ್ ಸರ್ವೀಸಸ್ ಎಂಬ ಕಂಪೆನಿಗೆ ತೆರಳಿ ಲೋನ್ ಬಗ್ಗೆ ವಿಚಾರಿಸಿದ್ದಾರೆ. ಕಂಪೆನಿಯ ಕಚೇರಿಯಲ್ಲಿದ್ದ ಸುಗುಣಾ ಎಂಬುವವರು […]