ಕೈಕೊಟ್ಟ ಪ್ರೇಯಸಿಯ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ

ಬೆಂಗಳೂರು, ಮಾ. 15- ಪ್ರೀತಿಸಿದ ಯುವತಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯವಾಗಿರುವ ವಿಷಯ ತಿಳಿದು ಕೋಪಗೊಂಡ ಪ್ರಿಯಕರ ಆಕೆಯ ಮನೆಗೆ ನುಗ್ಗಿ ಅತ್ಯಾಚಾರವೆಸಗಿ ಉಸಿರು ಗಟ್ಟಿಸಿ ಕೊಲೆ ಮಾಡಿ ನಂತರ ಆತನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ. ವಿಲ್ಸನ್‍ಗಾರ್ಡ್‍ನ್‍ನ ವಿನಾಯಕನಗರದ 6ನೆ ಕ್ರಾಸ್ ನಿವಾಸಿ ಶಾಲಿನಿ(23) ಕೊಲೆಯಾದ ಯುವತಿ. ಈಕೆಯ ಪ್ರಿಯಕರ ಮನೋಜ್ ಆತ್ಮಹತ್ಯೆಗೆ ಯತ್ನಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೆಪಿ ಅಗ್ರಹಾರದ ನಿವಾಸಿ ಮನೋಜ್ ಎಂಬಾತ ಶಾಲಿನಿಯನ್ನು ಪ್ರೀತಿಸುತ್ತಿದ್ದನು. ಈ ನಡುವೆ ಶಾಲಿನಿಗೆ ಮನೆಯಲ್ಲಿ ಬೇರೆ ಯುವಕನೊಂದಿಗೆ […]

ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಂದ ಹುಚ್ಚು ಪ್ರೇಮಿ

ಹೊಸಪೇಟೆ, ಮಾ.7- ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂದು ಹುಚ್ಚು ಪ್ರೇಮಿಯೊಬ್ಬ ಆಕೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ನಡೆದಿದೆ. ಐತಿಹಾಸಿಕ ದುಗ್ಗಮ್ಮ ದೇವಿ ಜಾತ್ರೆಯಲ್ಲಿ ಈ ಘಟನೆ ನಡೆದಿದ್ದು ಬಂದಿದ್ದ ಭಕ್ತರು ಇದರಿಂದ ಬೆಚ್ಚಿಬಿದ್ದಿದ್ದಾರೆ.ಪ್ರತಿಭಾ ಕೊಲೆಯಾದ ಯುವತಿಯಾಗಿದ್ದು, ಆರೋಪಿ ಮೂಕಪ್ಪನವರ ಹನುಮಂತನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 2ವರ್ಷದ ಹಿಂದೆ ಪ್ರತಿಭಾಳನ್ನು ಒಲಿಸಿಕೊಳ್ಳಲು ಆರೋಪಿ ಗ್ರಾಮದಲ್ಲಿ ಆಕೆ ಹಿಂದೆ ಸುತ್ತುತ್ತಿದ್ದ. ಆದರೆ ಆಕೆ ಪ್ರೀತಿಯನ್ನು ನಿರಾಕರಿಸಿದ್ದಳು. ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಬಿಗ್ […]

ಪತಿಯನ್ನು ಕೊಂದು ಕುಡಿದು ಸತ್ತ ಎಂದು ಕಥೆ ಹೇಳಿದ್ದ ಪತ್ನಿ ಹಾಗೂ ಪ್ರಿಯಕರ ಅರೆಸ್ಟ್

ಬೆಂಗಳೂರು, ಜ.7- ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಜಯ ಗಾಂಧಿ ನಗರದ ನಿವಾಸಿ ಅನಿತಾ(31) ಮತ್ತು ಆಕೆಯ ಪ್ರಿಯಕರ ರಾಕೇಶ್(24) ಬಂಧಿತರು. ಸಂಜಯನಗರದ ನಿವಾಸಿಯಾದ ಆಂಜನೇಯ- ಅನಿತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆಂಜನೇಯ ಕುಡಿತದ ಚಟ ಹೊಂದಿದ್ದನು. ಗಾರ್ಮೆಂಟ್ಸ್ ಉದ್ಯೋಗಿಯಾಗಿರುವ ಅನಿತಾ, ತನ್ನ ಪ್ರಿಯಕರ ರಾಕೇಶ್‍ನೊಂದಿಗೆ ಸೇರಿ ಕಳೆದ ಜೂನ್ 18ರಂದು ರಾತ್ರಿ ತನ್ನ ಮನೆಯಲ್ಲೇ ಪತಿ ಆಂಜನೇಯ(45)ನನ್ನು ಬೆಡ್‍ಶೀಟ್ ನಿಂದ […]

ಹಾಸನ ಮಿಕ್ಸಿ ಬ್ಲಾಸ್ಟ್ ಹಿಂದೆ ಆಂಟಿ ಪ್ರೀತ್ಸೆ ಲವ್ ಸ್ಟೋರಿ

ಹಾಸನ,ಡಿ.29- ಕುವೆಂಪುನಗರದ ಕೊರಿಯರ್ ಸೆಂಟರ್‍ನಲ್ಲಿ ನಡೆದಿದ್ದ ಮಿಕ್ಸರ್ ಸ್ಪೋಟದ ಪ್ರಕರಣ ಉಗ್ರಗಾಮಿ ಕೃತ್ಯ ಅಲ್ಲ ವಿಚ್ಛೇದಿತ ಮಹಿಳೆಯ ಹಿಂದೆ ಬಿದ್ದ ಪ್ರೇಮಿಯೊಬ್ಬನ ಕೃತ್ಯ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹಾಸನದ ಮಹಿಳೆ ವಸಂತಾ ವಿಚ್ಛೇದನ ನಂತರ ಮ್ಯಾಟ್ರಿಮೋನಿಯಲ್ಲಿ ತನ್ನ ಫೋಟೋ ಅಫ್ಲೋಡ್ ಮಾಡಿದ್ದಳು, ಇದನ್ನು ನೋಡಿ ಬೆಂಗಳೂರು ಮೂಲದ ಅನೂಪ್ ಮದುವೆ ಪ್ರಸ್ತಾಪ ಮಾಡಿದ್ದನು. ನಂತರ ಅನೂಪ್ ಪದೇಪದೇ ಉಡುಗೊರೆ ಕಳುಹಿಸುತ್ತಿದ್ದ ಇದನ್ನು […]

ಪ್ರೇಯಸಿ ಮೇಲಿನ ಕೋಪಕ್ಕೆ ಸ್ಕೂಟರ್‌ಗೆ ಬೆಂಕಿಯಿಟ್ಟ ಪ್ರಿಯಕರ

ಬೆಂಗಳೂರು, ಡಿ.15- ಪ್ರೇಮಿಯೊಬ್ಬ ಪ್ರೇಯಸಿ ಮೇಲಿನ ಕೋಪಕ್ಕೆ ಆಕೆಯ ಸ್ಕೂಟರ್‍ಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟ್ಯಾಟ್ಯೂ ಆರ್ಟಿಸ್ಟ್ ಯುವತಿಯನ್ನು ವಿಕ್ರಂ ಎಂಬಾತ ಪ್ರೀತಿಸುತ್ತಿದ್ದು , ಆತ ಮಾದಕ ವಸ್ತು ಚಟ ಹಾಗೂ ಮಾರಾಟ ಮಾಡುತ್ತಿರುವುದು ತಿಳಿದು ಬುದ್ದಿವಾದ ಹೇಳಿ, ಮಾದಕ ವಸ್ತುವಿನಿಂದ ದೂರವಿರುವಂತೆ ಸೂಚಿಸಿದ್ದರೂ ಕೇಳಿರಲಿಲ್ಲ. ಈ ನಡುವೆ ಆಗ್ನೇಯ ವಿಭಾಗದ ಪೊಲೀಸರು ಮಾದಕ ವಸ್ತು ಪ್ರಕರಣದಲ್ಲಿ ವಿಕ್ರಂನನ್ನು ಬಂಧಿಸಿದ್ದರು. ಜೈಲಿಗೆ ಹೋಗಿ ಹೊರ ಬಂದ ವಿಕ್ರಂ, ನನ್ನ […]

ವಿದ್ಯಾರ್ಥಿನಿಯ ಕತ್ತು ಕೊಯ್ದು ಕೊಂದ ಬಗ್ನ ಪ್ರೇಮಿ

ಅಮರಾವತಿ, ಡಿ .6- ಬಗ್ನ ಪ್ರೇಮಿಯೊಬ್ಬ ದಂತ ವೈದ್ಯಕೀಯ ವಿದ್ಯಾರ್ಥಿನಿಯ ಕತ್ತು ಕೂಯ್ದು ಕೊಲೆ ಮಾಡಿರುವ ಘಟನೆ ಗುಂಟೂರು ಜಿಲ್ಲೆಯ ತಕ್ಕೆಲ್ಲಪ್ಡು ನಗರದಲ್ಲಿ ಕಳೆದ ರಾತ್ರಿ ನಡೆದಿದೆ. ವಿಜಯವಾಡದಲ್ಲಿ ಕಾಲೇಜಿನಲ್ಲಿ ಬಿಡಿಎಸ್ ಮೂರನೇ ವರ್ಷದ ವಿದ್ಯಾರ್ಥಿನಿ ತಪಸ್ವಿ (20) ಕೊಲೆಯಾದ ಯುವತಿ. ಬಗ್ನ ಪ್ರೇಮಿನ್ನು ಸಾಫ್ಟ್‍ವೇರ್ ಇಂಜಿನಿಯರ್ ಜ್ಞಾನೇಶ್ವರ್ ಎಂದು ಪೊಲೀಸರು ತಿಳಿಸಿದಾರೆ. ಕಳೆದ 2 ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಜ್ಞಾನೇಶ್ವರ್ ಮತ್ತು ತಪಸ್ವಿ ಸಂಪರ್ಕಕ್ಕೆ ಬಂದಿದ್ದರು ನಂತರ ಸ್ನೇಹ ಬೆಳೆದು ಪ್ರೀತಿ ಮೂಡಿತ್ತು ಆದರೆ, […]

ಪ್ರೇಯಸಿಯ ಕೊಲೆಯಲ್ಲಿ ಕೊನೆಯಾಯ್ತು ಲಿವಿಂಗ್ ಟುಗೆದರ್ ಲವ್

ಬೆಂಗಳೂರು, ನ.30- ಸಹಜೀವನ ನಡೆಸುತ್ತಿದ್ದ ಪ್ರಿಯಕರ ತನ್ನ ಪ್ರೇಯಸಿಯನ್ನು ಕೊಲೆ ಮಾಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ನೇಪಾಳ ಮೂಲದ ಕೃಷ್ಣಕುಮಾರಿ(23) ಕೊಲೆಯಾಗಿರುವ ನತದೃಷ್ಟೆ. ಆರೋಪಿ ಸಂತೋಷ್ ದಾಬೆ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕೈಗೊಂಡಿದ್ದಾರೆ. ನೇಪಾಳ ಮೂಲದವರಾದ ಕೃಷ್ಣಕುಮಾರಿ ಹಾಗೂ ಸಂತೋಷ್ ದಾಬೆ ಇಬ್ಬರು ಪ್ರೀತಿಸುತ್ತಿದ್ದು, ಟಿ.ಸಿ ಪಾಳ್ಯ ರಸ್ತೆಯ ಮುನೇಶ್ವರ ನಗರದ ಕಟ್ಟಡವೊಂದರ ನಾಲ್ಕನೇ ಮಹಡಿಯ ರೂಮ್‍ನಲ್ಲಿ ವಾಸವಾಗಿದ್ದು,ಸಹಜೀವನ (ಲಿವಿಂಗ್ ಟು ಗೆದರ್) ನಡೆಸುತ್ತಿದ್ದರು. ಹೊರಮಾವು ಬಳಿ ಕೃಷ್ಣಕುಮಾರಿ ಬ್ಯೂಟಿಪಾರ್ಲರ್ […]

ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ-ಪ್ರಿಯಕರನ ಸೆರೆ

ಬೆಂಗಳೂರು,ಅ.27- ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಾನೆಂದು ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಂಡಪ್ಪಲೇಔಟ್‍ನ ಶ್ವೇತ (21) ಮತ್ತು ಪ್ರಿಯಕರ ಆಂಧ್ರಪ್ರದೇಶದ ಪೆನುಗೊಂಡ ನಿವಾಸಿ ಸುರೇಶ್ ಅಲಿಯಾಸ್ ಮೂಲಿ ಸೂರಿ (25) ಬಂಧಿತರು. ಕೊಂಡಪ್ಪಲೇಔಟ್‍ನಲ್ಲಿ ವಾಸವಾಗಿದ್ದ ಅಳಿಯ ಚಂದ್ರಶೇಖರ್ ಅವರನ್ನು ಮನೆಯ ಮೂರನೇ ಟೆರಸ್‍ನಲ್ಲಿ ಅ.21ರಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿರುವುದಾಗಿ ಮಾವ ಶಿವಪ್ಪ ಎಂಬುವರು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ […]

ಪ್ರಿಯತಮೆಗೆ ಚಾಕು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಭಗ್ನಪ್ರೇಮಿ

ಚನ್ನಪಟ್ಟಣ, ಸೆ.14- ಮದುವೆಗೆ ಪ್ರಿಯತಮೆ ಒಲ್ಲೆ ಎಂದಿದ್ದಕ್ಕೆ ಮನನೊಂದು ಭಗ್ನ ಪ್ರೇಮಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರ ನಗರದ ಟುಪ್ಲೇನ್ ನಿವಾಸಿ ಭಗ್ನಪ್ರೇಮಿ ವೆಂಕಟೇಶ್ (25) ಯುವತಿ ಯೊಬ್ಬಳನ್ನು ಪ್ರೀತಿಸಿದ್ದು, ಮದುವೆಗಾಗಿ ಯುವತಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರಿಗೂ ಆಗಾಗ್ಗೆ ಜಗಳ ನಡೆಯುತ್ತಿತ್ತೆಂದು ಹೇಳಲಾಗಿದೆ. ನಗರದ ಮೂರನೇ ಕ್ರಾಸ್‍ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರೆನ್ನಲಾಗಿದ್ದು, ಈ ಸಂದರ್ಭದಲ್ಲಿ ಇಬ್ಬರು ಪರಸ್ಪರ […]

ಪ್ರಿಯತಮನನ್ನೇ ಅಪಹರಿಸಿ ಹಲ್ಲೆ ಮಾಡಿದ್ದ ಇಬ್ಬರು ಯುವತಿಯರು ಸೇರಿ 8 ಮಂದಿ ಸೆರೆ

ಬೆಂಗಳೂರು,ಆ. 27-ಪ್ರಿಯಕರನನ್ನು ಅಪಹರಿಸಿ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಹನುಮಂತನಗರ ಠಾಣೆ ಪೊಲೀಸರು ಇಬ್ಬರು ಯುವತಿಯರು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಕ್ಲಾರಾ, ಮಧು, ಸಂತೋಷ್, ಹೇಮಾವತಿ, ಮಸಣಕಿರಣ, ಅಶ್ವತ್ಥ್ ನಾರಾಯಣ, ಮನು ಮತ್ತು ಲೋಕೇಶ ಬಂಧಿತರು. ಈಗಾಗಲೇ ಮದುವೆಯಾಗಿದ್ದ ಕ್ಲಾರಾ ಎಂಬಾಕೆ ಪತಿಯಿಂದ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಳು. ಈ ನಡುವೆ ಮಹದೇವಪ್ರಸಾದ್ ಎಂಬುವವರನ್ನು ಕ್ಲಾರಾ ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡು ನಂತರ ಮೊಬೈಲ್ ನಂಬರ್‍ಗಳನ್ನು ವಿನಿಮಯ ಮಾಡಿಕೊಂಡು ಸ್ನೇಹ ಪ್ರೀತಿಗೆ ತಿರುಗಿತ್ತು. ನಂತರದ ದಿನಗಳಲ್ಲಿ […]