ಪ್ರಯಾಗ್‍ರಾಜ್‍ನ ಕುಂಭಮೇಳಕ್ಕೆ ಪೂರ್ವಸಿದ್ಧತೆ ಆರಂಭ

ಲಕ್ನೋ,ಜ.19-ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ 2025ರಲ್ಲಿ ನಡೆಯಲಿರುವ ಮಹಾಕುಂಭದಲ್ಲಿ ಭಕ್ತರ ಅನುಕೂಲಕ್ಕಾಗಿ ಸರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಹಾಕುಂಭದ ಸಮಯದಲ್ಲಿ ಪ್ರಯಾಗರಾಜ್‍ನಿಂದ ಲಕ್ನೋ ಮತ್ತು ದೆಹಲಿಗೆ ಹೆಚ್ಚುವರಿ ಸೂಪರ್ ಪಾಸ್ಟ್ ರೈಲುಗಳ ವ್ಯವಸ್ಥೆ ಮಾಡಲು ರೈಲ್ವೆ ಸಚಿವಾಲಯದೊಂದಿಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪ್ರಯಾಗ್‍ರಾಜ್ ಸಂಪರ್ಕವನ್ನು ಸುಧಾರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೂ ಸಮನ್ವಯತೆ ಸಾಧಿಸಲು ತಾಕೀತು ಮಾಡಿದ್ದಾರೆ. ಅಧಿಕಾರಿಗಳು, ನೌಕರರ ವರ್ಗಾವಣೆಗೆ ಬ್ರೇಕ್ ಹಾಕಿದ ಸಿಎಂ […]