ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್

ಬೆಂಗಳೂರು, ಆ.21- ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ. ಹಿರಿಯ ಪುತ್ರ ಮನೋರಂಜನ್ ದೂರದ ಸಂಬಂಧಿ ಸಂಗೀತ ಅವರನ್ನು ಕೈ ಹಿಡಿದಿದ್ದಾರೆ. ನಿನ್ನೆ ಸಂಜೆ ಅರಮನೆ ಮೈದಾನದಲ್ಲಿ ಸುಂದರವಾಗಿ ಅಲಂಕೃತಗೊಂಡಿದ್ದ ಅರತಕ್ಷತೆ ವೇದಿಕೆಯಲ್ಲಿ ನವದಂಪತಿ ಕಂಗೊಳಿಸುತ್ತಿದ್ದಿರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಹಂಸಲೇಖ, ರಾಕ್‍ಲೈನ್ ವೆಂಕಟೇಶ್, ಖುಷ್ಬು, ಮಾಸ್ಟರ್ ಆನಂದ್, ಉಮಾಶ್ರೀ, ಸಿ.ಟಿ.ರವಿ ಸೇರಿದಂತೆ ಅನೇಕ ರಂಗಗಳ ಗಣ್ಯರು ಆಗಮಿಸಿ ನವಜೋಡಿಯನ್ನು ಹಾರೈಸಿದರು.ಇಂದು ಮುಂಜಾನೆ ನಡೆದ ಶುಭ ಮುಹೂರ್ತದಲ್ಲಿ ಮನೋರಂಜನ್ ಮತ್ತು […]