ರಾಹುಲ್ ಪಾದಯಾತ್ರೆಗೆ ಮೆಹಬೂಬಾ ಮುಫ್ತಿ ಸಾಥ್

ಕಾಶ್ಮೀರ,ಜ.28- ಭದ್ರತೆಯ ಲೋಪದಿಂದ ನಿನ್ನೆ ಸ್ಥಗಿತಗೊಂಡಿದ್ದ ರಾಹುಲ್‍ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆ ಇಂದು ಅಂತಿಪೊರಾದಿಂದ ಶುರುವಾಯಿತು. ಸ್ಥಳೀಯ ಪಿಡಿಪಿಯ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇಂದು ರಾಹುಲ್‍ಗಾಂಧಿಯೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ತೀವ್ರವಾದ ಚಳಿಯಿಂದ ತತ್ತರಿಸಿರುವ ರಾಹುಲ್‍ಗಾಂಧಿ ಇಷ್ಟು ದಿನಗಳ ಬಳಿಕ ಇಂದು ಪಾದಯಾತ್ರೆಯಲ್ಲಿ ಜರ್ಕಿನ್ ಮತ್ತು ತಲೆ ಟೋಪಿ ಧರಿಸಿ ನಡಿಯಲ್ಲಿ ಪಾಲ್ಗೊಂಡಿದ್ದರು. ನಿನ್ನೆ ನ್ಯಾಷನಲ್ ಕಾನರೆನ್ಸ್ ಪಕ್ಷದ ಓಮರ್ ಅಬ್ದುಲ್ಲಾ ಯಾತ್ರೆಯಲ್ಲಿ ಜೊತೆಗೂಡಿದ್ದರು. ಆದರೆ ಎರಡು ಕಿಲೋ ಮೀಟರ್ ನಡೆಯುತ್ತಿದ್ದಂತೆ ಭದ್ರತೆಯ ಲೋಪ ಕಾಣಿಸಿಕೊಂಡಿತ್ತು. […]