ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಮುಖ್ಯ ಶಿಕ್ಷಕ ಬಂಧನ

ಜೋಧ್‍ಪುರ,ಮಾ.15- ವಿದ್ಯಾರ್ಥಿನಿಯರ ಮೈ ಕೈ ಮುಟ್ಟಿ ಅಸಹ್ಯವಾಗಿ ವರ್ತಿಸುತ್ತಿದ್ದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನೊಬ್ಬನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. ಆರೋಪಿ ಶಿಕ್ಷಕ ಭಗವಾನ್ ಸಿಂಗ್ ರಜಪೂತ್ (56) ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ ನಂತರ ಆತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಕಾಮುಕ ಶಿಕ್ಷಕನನ್ನು ಬಂಧಿಸಿ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. ಪೊಲೀಸರ ಪ್ರಕಾರ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಮಾರ್ಚ್ 10 ರಂದು ಜೋಧ್ಪುರ ಸಮೀಪದ ರಾಮನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ […]
ಜಪಾನ್ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದವರ ಬಂಧನ

ನವದೆಹಲಿ,ಮಾ.11-ಜಪಾನ್ ದೇಶದ ಮಹಿಳೆಯೊಬ್ಬರಿಗೆ ಹೋಳಿ ಹಬ್ಬದ ಸಂದರ್ಭದಲ್ಲಿ ದೌರ್ಜನ್ಯ ನಡೆಸಿದ್ದ ಮೂವರನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಪಾನ್ ಮಹಿಳೆ ಯುವ ಪ್ರವಾಸಿ ಕೇಂದ್ರ ದೆಹಲಿಯ ಪಹರ್‍ಗಂಜ್‍ನಲ್ಲಿ ತಂಗಿದ್ದರು ಅವರ ಮೇಲೆ ಹೋಳಿ ಸಂದರ್ಭದಲ್ಲಿ ದೌರ್ಜನ್ಯ ನಡೆಸಿದ್ದ ಮೂವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಒಬ್ಬ ಬಾಲಾಪರಾಧಿ ಇದ್ದಾನೆ ಎಂದು ತಿಳಿದುಬಂದಿದೆ. ತನ್ನ ಮೇಲಾದ ಕಿರುಕುಳದ ಬಗ್ಗೆ ಮಹಿಳೆ ಇಲ್ಲಿಯವರೆಗೆ ದೂರು ದಾಖಲಿಸಿಲ್ಲ ಮತ್ತು ನಿನ್ನೆ ಬಾಂಗ್ಲಾದೇಶಕ್ಕೆ ತೆರಳಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತಾನು ಬಾಂಗ್ಲಾದೇಶ ತಲುಪಿದ್ದು ಮಾನಸಿಕ […]