ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ ತೊಲಗಿಸುವ ಚಳುವಳಿ ಅಗತ್ಯ : ಮೋದಿ

ನವದೆಹಲಿ,ಆ.9- ಕ್ವಿಟ್ ಇಂಡಿಯಾ ಚಳುವಳಿ ಸಂಸ್ಮರಣಾ ದಿನವಾದ ಇಂದು ಪ್ರಧಾನಿ ನರೇಂದ್ರಮೋದಿ ದೃಶ್ಯ ಸಂಕಲನದ ಮೂಲಕ ಸ್ಪೂರ್ತಿದಾಯಕವಾದ ಮಾತುಗಳ ಸಂದೇಶವನ್ನು ಸಾರಿದ್ದಾರೆ. ಸ್ವಾತಂತ್ರ್ಯ ಪೂರ್ವ ಆಗಸ್ಟ್ ತಿಂಗಳಿನಲ್ಲಿ ಹಲವಾರು ಮಹತ್ವಪೂರ್ಣ ಘಟನೆಗಳು ಸಂಭವಿಸಿವೆ. 1942, ಆ.9ರಂದು ಮಹಾತ್ಮ ಗಾಂಧೀಜಿಯವರು ಕ್ವಿಟ್ ಇಂಡಿಯಾ( ಭಾರತ ಬಿಟ್ಟು ತೊಲಗಿ) ಚಳುವಳಿಯನ್ನು ಆರಂಭಿಸಿದರು. ಈ ಅಭಿಯಾನದಲ್ಲಿ ದೇಶವಾಸಿಗಳು ಯಾವುದೇ ಬೇಧಭಾವವಿಲ್ಲದೆ ತಮ್ಮನ್ನು ತೊಡಗಿಸಿಕೊಂಡರು. ಬಹಳಷ್ಟು ಮಂದಿ ಓದುವುದನ್ನು ಬಿಟ್ಟರು, ಸರ್ಕಾರಿ ಕೆಲಸ ತೊರೆದರು, ಮನೆ ಬಿಟ್ಟು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ […]