ಚರ್ಚೆಯಿಲ್ಲದೆ ಹಣಕಾಸು ಮಸೂದೆ 2023 ಅಂಗೀಕಾರ

ನವದೆಹಲಿ,ಮಾ.24- ಅದಾನಿ ಸಮೂಹದ ಕಂಪನಿಗಳ ಮೇಲಿನ ಆರೋಪಗಳ ಕುರಿತು ಜೆಪಿಸಿ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ ತೆರಿಗೆ ಪ್ರಸ್ತಾವನೆಗಳನ್ನು ಚರ್ಚೆಯಿಲ್ಲದೆ ಜಾರಿಗೊಳಿಸುವ ಹಣಕಾಸು ಮಸೂದೆ 2023 ಅನ್ನು ಲೋಕಸಭೆ ಶುಕ್ರವಾರ ಅಂಗೀಕರಿಸಿದೆ. ಮಸೂದೆಯನ್ನು ಹಲವಾರು ತಿದ್ದುಪಡಿಗಳೊಂದಿಗೆ ಅಂಗೀಕರಿಸಲಾಗಿದೆ. ಅಲ್ಲದೆ, ಇನ್ನೂ 20 ವಿಭಾಗಗಳನ್ನು ಮಸೂದೆಗೆ ಸೇರಿಸಲಾಗಿದೆ. ವಿಧೇಯಕ ಅಂಗೀಕಾರ ಪ್ರಕ್ರಿಯೆ ಕೈಗೊತ್ತಿಕೊಳ್ಳುವಾಗ ಸಂಸತ್‍ನಲ್ಲಿ ಹಲವಾರು ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದರು. ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸುವ ಫಲಕಗಳನ್ನು ಹಿಡಿದಿದ್ದರು. ಲೋಕಸಭಾ ಸದಸ್ಯ […]

ಸಂಸತ್‍ನಲ್ಲಿ ಮಾಸ್ಕ್ ಧರಿಸಲು ಸಂಸದರಿಗೆ ಸಭಾಧ್ಯಕ್ಷರ ಸೂಚನೆ

ನವದೆಹಲಿ,ಡಿ.22- ಹಲವು ದೇಶಗಳಲ್ಲಿ ಕೊರೊನಾ ಸೋಂಕು ತೀವ್ರಗೊಳ್ಳುತ್ತಿರುವ ನಡುವೆ ಸಂಸತ್‍ನಲ್ಲಿ ಎಲ್ಲಾ ಸದಸ್ಯರು ಮಾಸ್ಕ್ ಧರಿಸುವಂತೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕರೆ ನೀಡಿದ್ದಾರೆ. ಗುರುವಾರ ಕಲಾಪ ಆರಂಭವಾಗುತ್ತಿದ್ದಂತೆ ಎಲ್ಲಾ ಸದಸ್ಯರಿಗೆ ಸೂಚನೆ ನೀಡಿದ ಓಂ ಬಿರ್ಲಾ ಅವರು, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಮತ್ತು ಜನರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.ಖುದ್ದು ಮಾಸ್ಕ್ ಧರಿಸಿ ಆಗಮಿಸಿದ ಅವರು, ಸರ್ಕಾರ ಕ್ಷೀಪ್ರ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಜನನೀಬೀಢ ಪ್ರದೇಶಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು […]

ಗಾಂಧಿ ಪ್ರತಿಮೆ ಎದುರು ಸಂಸದರ ಅಹೋರಾತ್ರಿ ಧರಣಿ ಮುಂದುವರಿಕೆ

ನವದೆಹಲಿ, ಜು.28- ಅಗತ್ಯ ವಸ್ತುಗಳ ಬೆಲೆ ಏರಿಕೆ, ದಿನ ಬಳಕೆಯ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿಕೆ ಕುರಿತಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಉಭಯ ಸದನಗಳಲ್ಲಿ ಗದ್ದಲ ಮಾಡಿ ಅಮಾನತುಗೊಂಡಿರುವವರ, ಸಂಸದರು ಸಂಸತ್‍ನ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಹೋರಾಟ ಇಂದು ಕೂಡ ಮುಂದುವರೆದಿದೆ. ಬುಧುವಾರ ಬೆಳಗ್ಗೆ 11 ಗಂಟೆಯಿಂದ ಆರಂಭಿಸಿರುವ ಅಹೋರಾತ್ರಿ ಧರಣಿ ಹೋರಾಟ ನಾಳೆ ಮಧ್ಯ ರಾತ್ರಿ ಒಂದು ಗಂಟೆಯವರೆಗೂ ಸುಮಾರು 50 ಗಂಟೆಗಳ ಕಾಲ ಮುಂದುವರೆಯಲಿದೆ. ಧರಣಿ ಸತ್ಯಾಗ್ರಹದಲ್ಲಿ […]

ರಾಮನಾಥ್ ಕೋವಿಂದ್‍ ಅವರಿಗೆ ಸಂಸದರಿಂದ ಸನ್ಮಾನ

ನವದೆಹಲಿ, ಜು.23- ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಸನ್ಮಾನಿಸುವ ಮೂಲಕ ಸಂಸದರು ಇಂದು ಸಂಜೆ ಗೌರವ ಪೂರ್ವಕ ಬೀಳ್ಕೊಡುಗೆ ನೀಡಲಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ನಡೆಯಲಿರುವ ಬೀಳ್ಕೊಡುಗೆ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಸಂಸದರು ಭಾಗವಹಿಸಲಿದ್ದಾರೆ. ಸಂಸದರ ಪರವಾಗಿ ಬಿರ್ಲಾ ಅವರು ಕೋವಿಂದ್ ಅವರನ್ನು ಸನ್ಮಾನಿಸಲಿದ್ದಾರೆ. ನಿರ್ಗಮಿತ ರಾಷ್ಟ್ರಪತಿಗಳಿಗೆ ಸಂಸದರು ಸಹಿ ಮಾಡಿದ ಸ್ಮರಣಿಕೆ ಮತ್ತು ಸಹಿ ಪುಸ್ತಕವನ್ನು ಸಹ ನೀಡಲಾಗುವುದು. […]

ದೆಹಲಿಯಲ್ಲಿ ಶಿವಸೇನೆ ಸಂಸದರನ್ನು ಭೇಟಿ ಮಾಡಲಿರುವ ಸಿಎಂ ಶಿಂಧೆ

ನವದೆಹಲಿ, ಜು.19- ಶಿವಸೇನೆ ಸಂಸದೀಯ ಪಕ್ಷದಲ್ಲಿ ವಿಭಜನೆ ಸನ್ನಿಹಿತವಾಗುತ್ತಿರುವ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ದೆಹಲಿಯಲ್ಲಿ ಪಕ್ಷದ ಸಂಸದರನ್ನು ಭೇಟಿ ಮಾಡಲಿದ್ದಾರೆ. ಉದ್ಧವ್ ಠಾಕ್ರೆ ಅವರು ಸಲ್ಲಿಸಿರುವ 16 ಶಾಸಕರ ವಿರುದ್ಧದ ಅನರ್ಹತೆ ಅರ್ಜಿ ವಿಚಾರಣೆ ನಾಳೆ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಗೆ ಬರಲಿದೆ. ಇದರ ಕುರಿತು ಚರ್ಚೆಗೆ ದೆಹಲಿಗೆ ಆಗಮಿಸಿರುವ ಏಕನಾಥ್ ಶಿಂಧೆ, ಶಿವಸೇನೆಯ ಸಂಸದರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಶಿವಸೇನೆ ಮುಖ್ಯ ನಾಯಕರಾಗಿ ಪಟ್ಟಕ್ಕೇರಿದ ದಿನದ ಬಳಿಕ ಶಿಂಧೆ ಮಂಗಳವಾರ […]

ರಾಜ್ಯ ರಾಜ್ಯಕಾರಣಕ್ಕೆ ಮರಳಲು ತೆರೆಮರೆಯಲ್ಲಿ ಸಂಸದರ ಕಸರತ್ತು

ಬೆಂಗಳೂರು,ಜು.13- ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿ ಇರುವಾಗಲೇ ಕೆಲವು ಸಂಸದರು ರಾಜ್ಯ ರಾಜ್ಯಕಾರಣಕ್ಕೆ ಮರಳಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ. 2019 ರ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಸಂಸತ್ ಪ್ರವೇಶಿಸಿದ್ದ ಬಿಜೆಪಿಯ ಒಂದು ಡಜನ್ ಗೂ ಅಧಿಕ ಸಂಸದರು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಂಸದರಾದ ಶಿವಕುಮಾರ್ ಉದಾಸಿ, […]