ಪಾಕ್ ಮಾಜಿ ಅಧ್ಯಕ್ಷ ಪವೇಝ್ ಮುಷರಫ್ ನಿಧನ

ನವದೆಹಲಿ,ಫೆ.5- ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪವೇಝ್ ಮುಷರಫ್ ಇಂದು ಬೆಳಗ್ಗೆ ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿವೆ. ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಜಿಯೋ ನ್ಯೂಸ್ ಈ ಸುದ್ದಿಯನ್ನು ವರದಿ ಮಾಡಿದೆ. ಮಿಲಟರಿಯ ಮಾಜಿ ಆಡಳಿತಾಧಿಕಾರಿ ತಮ್ಮ 79ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ದುಬೈನ ಅಮೆರಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ವರದಿ ಮಾಡಲಾಗಿದೆ. ಬ್ರಿಟಿಷ್ ಆಡಳಿತಾವಧಿಯಿದ್ದ 1943ರ ಆಗಸ್ಟ್ 11ರಂದು ಭಾರತದ ನವದೆಹಲಿಯಲ್ಲಿ ಮುಷ್ರಫ್ ಜನಿಸಿದ್ದರು. ಭಾರತ-ಪಾಕಿಸ್ತಾನ […]