ಏನು ಬೇಕಾದರೂ ಮಾಡಿಕೊಳ್ಳಿ ನಾನು ಹೆದರಲ್ಲ : ರಾಹುಲ್‍ ಗಾಂಧಿ

ನವದೆಹಲಿ, ಆ.4- ಏನು ಬೇಕಾದರೂ ಮಾಡಿಕೊಳ್ಳಿ, ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ದೇಶ ರಕ್ಷಣೆಯ ಕೆಲಸವನ್ನು ನಾವು ಮುಂದುವರೆಸುತ್ತೇವೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ ಗಾಂಧಿ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ನಿನ್ನೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹೆರಾಲ್ಡ್ ಹೌಸ್ ಮತ್ತು ಯಂಗ್ ಇಂಡಿಯಾ ಕಚೇರಿಯನ್ನು ಜಪ್ತಿ ಮಾಡಿತ್ತು. ಎಐಸಿಸಿ ಕಚೇರಿಯ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು. ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ದಿಗ್ಭಂದನ ವಿಧಿಸಲಾಗಿತ್ತು. […]