ನಕ್ಸಲರ ಅಟ್ಟಹಾಸಕ್ಕೆ ಮೂವರು ಪೊಲೀಸರು ಹುತಾತ್ಮ

ರಾಯ್ಪುರ,ಫೆ.25- ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ನಕ್ಸಲೀಯರೊಂದಿಗಿನ ಎನ್ಕೌಂಟರ್ನಲ್ಲಿ ಛತ್ತೀಸ್ಗಢ ಪೊಲೀಸ್ನ ಜಿಲ್ಲಾ ಮೀಸಲು ಗಾರ್ಡ್ನ (ಡಿಆರ್ಜಿ) ಮೂವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಡಿಆರ್ಜಿಯ ತಂಡವು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಜಗರಗುಂದ ಮತ್ತು ಕುಂಡೆಡ್ ಗ್ರಾಮಗಳ ನಡುವೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮುಖಾಮುಖಿ ಸಂಭವಿಸಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ಶ್ರೇಣಿ) ಸುಂದರರಾಜ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಯೋಧರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಪೊಲೀಸ್ ಸಿಬ್ಬಂದಿಯ ಹುತಾತ್ಮತೆ ವ್ಯರ್ಥವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ […]
ಹೆಡ್ಕಾನ್ಸ್ಟೆಬಲ್ ಕತ್ತು ಸೀಳಿದ ನಕ್ಸಲರು

ದಾಂತೇವಾಡ,ಫೆ.21-ನಕ್ಸಲೀಯರು ಪೊಲೀಸ್ ಹೆಡ್ ಕಾನ್ಸ್ಟೆಬಲ್ ಒಬ್ಬರ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ನಕ್ಸಲ್ಪೀಡಿತ ಪ್ರದೇಶವಾಗಿರುವ ಬಿಜಾಪುರ ಜಿಲ್ಲೆಯಲ್ಲಿ ಅಪರಿಚಿತ ನಕ್ಸಲರು ಹೆಡ್ ಕಾನ್ಸ್ಟೆಬಲ್ ಪಿಂಡಿರಾಮ್ ವೆಟ್ಟಿಯ ಕತ್ತು ಸೀಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಭೈರಾಮ್ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇನಾರ್ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪಿಂಡಿರಾಮ್ ತನ್ನ ಸಹೋದರನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಡೇನಾರ್ ಗ್ರಾಮಕ್ಕೆ ಹೋಗಿದ್ದನು . ಮದುವೆ ಮೆರವಣಿಗೆಯಲ್ಲಿ ಭಾಗವಹಿಸಿದ […]