ರಾಹುಲ್ಗೆ ವರದಾನವಾಗುವುದೇ ಸಂಸದ ಫೈಜಲ್ ಪ್ರಕರಣ..?

ನವದೆಹಲಿ,ಮಾ.29- ಕ್ರಿಮಿನಲ್ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಲಕ್ಷ್ಯದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರು ಸಂಸದರಾಗಿ ಮುಂದುವರೆದಿರುವುದು ರಾಹುಲ್ಗಾಂಧಿ ಅವರಿಗೆ ವರದಾನವಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ರಾಹುಲ್ಗಾಂಧಿ ವಿರುದ್ಧದ ತೀರ್ಪಿಗೆ ತಡೆಯಾಜ್ಞೆ ಪಡೆಯಲು ಹಾಗೂ ಅವರ ಸಂಸದ ಸ್ಥಾನ ಮುಂದುವರೆಸಲು ಉನ್ನತ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿದುಬಂದಿದೆ. ದೆಹಲಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಕೈಬಿಟ್ಟ ಬಿಜೆಪಿ ಗುಜರಾತ್ನ ಸೂರತ್ನ ನ್ಯಾಯಾಲಯವು ದೋಷಿ ಎಂದು ಘೋಷಿಸಿರುವ ರಾಹುಲ್ ಗಾಂಧಿ ಅವರ ಅರ್ಜಿಯನ್ನು […]
ಸಂಸದರ ಅನರ್ಹತೆ ಹಿಂಪಡೆದ ಲೋಕಸಭೆ ಸಚಿವಾಲಯ

ನವದೆಹಲಿ,ಮಾ.29- ಕ್ರಿಮಿನಲ್ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಯೊಂದಿಗೆ ಜನವರಿಯಲ್ಲಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದ ಎನ್ಸಿಪಿ ನಾಯಕ ಮೊಹಮ್ಮದ್ ಫೈಜಲ್ ಪಿ.ಪಿ. ಅವರ ಸದಸ್ಯತ್ವವನ್ನು ಲೋಕಸಭೆ ಸಚಿವಾಲಯ ಇಂದು ಮರು ಸ್ಥಾಪಿಸಿದೆ. ಲಕ್ಷದ್ವೀಪವನ್ನು ಎರಡನೇ ಅವಧಿಗೆ ಪ್ರತಿನಿಸಿದ್ದ ಫೈಝಲ್ ಅವರಿಗೆ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು, ಈ ತೀರ್ಪಿನ ವಿರುದ್ಧ ಕೇರಳ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಕೇರಳ ಹೈಕೋರ್ಟ್ 2023ರ ಜನವರಿ 25ರಂದು ಕೆಳಹಂತದ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಸಚಿವಾಲಯ 2023ರ […]
ನಾಲ್ಕು ತಿಂಗಳ ಹಸುಳೆಯೊಂದಿಗೆ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿದ್ದ ಶಾಸಕಿ

ಮುಂಬೈ,ಫೆ 27- ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶದಲ್ಲಿ ಎನ್ಸಿಪಿ ಶಾಸಕಿಯೊಬ್ಬರು ತಮ್ಮ ನಾಲ್ಕು ತಿಂಗಳ ಮಗುವಿನೊಂದಿಗೆ ಭಾಗವಹಿಸಿ ಗಮನ ಸೆಳೆದರು. ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ಮುಂಬೈಗೆ ಆಗಮಿಸಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಶಾಸಕಿ ಸರೋಜ್ ಅಹಿರೆ ಅವರು ತಮ್ಮ ನಾಲ್ಕು ತಿಂಗಳ ಮಗನೊಂದಿಗೆ ಕಾಣಿಸಿಕೊಂಡರು. ಕಳೆದ ವರ್ಷ ಡಿಸೆಂಬರ್ನಲ್ಲಿ ನಾಗ್ಪುರದಲ್ಲಿ ನಡೆದ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲೂ ಅಹಿರೆ ಮಗುವಿನೊಂದಿಗೆ ಭಾಗವಹಿಸಿದ್ದರು. ಬಿಎಸ್ವೈಗೆ ಮೋದಿ ಬಹುಪರಾಕ್ ವಿಧಾನಭವನದಲ್ಲಿ ಹಿರ್ಕಾನಿ ಘಟಕವಿದ್ದು, ಇದನ್ನು ಮಹಿಳೆಯರು […]
ರಾಜ್ಯಪಾಲರ ನಿರ್ಗಮನವನ್ನು ಸ್ವಾಗತಿಸಿ ಮಹಾರಾಷ್ಟ್ರ ನಾಯಕರು

ಮುಂಬೈ,ಫೆ.12- ರಾಜ್ಯಪಾಲರ ಸ್ಥಾನಕ್ಕೆ ಭಗತ್ ಸಿಂಗ್ ಕೊಶ್ಯಾರಿ ರಾಜೀನಾಮೆ ನೀಡಿರುವುದನ್ನು ಸ್ವಾಗತಿಸಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಮುಖ್ಯಸ್ಥ ಜಯಂತ್ ಪಾಟೀಲ್, ಹೊಸ ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಮೊದಲಿನ ರಾಜ್ಯಪಾಲ ಕೊಶ್ಯಾರಿ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೊಸ ರಾಜ್ಯಪಾಲರನ್ನಾಗಿ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ರನ್ನು ನೇಮಕ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಯಂತ್ ಪಾಟೀಲ್, ಹೊಸ ರಾಜ್ಯಪಾಲರು ಹಿಂದಿನವರಂತೆ ಬಿಜೆಪಿಯ ಕೈಗೊಂಬೆಯಾಗುವುದಿಲ್ಲ ಎಂದು ಭಾವಿಸುತ್ತೇನೆ. ಮಹಾ ವಿಕಾಸ್ ಅಘಾಡಿಯ […]
ಗಡಿ ವಿವಾದ : ಕೇಂದ್ರ ಗೃಹ ಸಚಿವರಿಗೆ ದೂರು ನೀಡಿದ ಎನ್ಸಿಪಿ

ನವದೆಹಲಿ,ಡಿ.9- ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಉಂಟಾಗಿರುವ ಗಡಿ ವಿವಾದವನ್ನು ತಕ್ಷಣವೇ ಪರಿಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಎನ್ಸಿಪಿ ಗೃಹಸಚಿವರಿಗೆ ದೂರು ನೀಡಿದೆ. ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ನೇತೃತ್ವದ ಸಂಸದರ ನಿಯೋಗ , ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕರ್ನಾಟಕಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ವಾಹನಗಳ ಮೇಲೆ ಕಲ್ಲುಗಳನ್ನು ಎಸೆಯಲಾಗುತ್ತಿದೆ. […]