ಬಜೆಟ್‍ನಲ್ಲಿ ಹೊಸ ಕೃಷಿ ನೀತಿ ಘೋಷಣೆ

ಬೆಂಗಳೂರು,ಫೆ.11- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ 17ರಂದು ಮಂಡಿಸಲಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಹೊಸ ಕೃಷಿ ನೀತಿಯನ್ನು ಘೋಷಿಸುವ ಸಾಧ್ಯತೆ ಇದೆ. ಈ ನೀತಿಯು ನೈಸರ್ಗಿಕ ಕೃಷಿಯ ಮೂಲಕ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು, ಸುಧಾರಿಸಲು ಮತ್ತು ರಾಗಿ ಬೆಳೆಯಲು ರೈತರನ್ನು ಉತ್ತೇಜಿಸುತ್ತದೆ ಎಂದು ತಿಳಿದುಬಂದಿದೆ. ಬೊಮ್ಮಾಯಿ ಅವರು ಕಳೆದ ವರ್ಷ ಮಂಡಿಸಿದ ಚೊಚ್ಚಲ ಬಜೆಟ್‍ನಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 33,700 ಕೋಟಿ ರೂ ಮೀಸಲಿಟ್ಟಿದ್ದರು. ರೈತ ಶಕ್ತಿ ಸೇರಿದಂತೆ ರೈತರಿಗೆ ಯಂತ್ರೋಪಕರಣಗಳನ್ನು ಖರೀದಿಸಲು […]
ನೂತನ RTO ಕಚೇರಿ ತೆರೆಯುವ ಪ್ರಸ್ತಾವನೆ ಇಲ್ಲ : ಶ್ರೀರಾಮುಲು

ಬೆಳಗಾವಿ,ಡಿ.21- ಇಲಾಖೆಗಳಲ್ಲಿ 30 ಸೇವೆಗಳನ್ನು ಆನ್‍ಲೈನ್ ಮೂಲಕವೇ ನೀಡುತ್ತಿರುವುದರಿಂದ ಹೊಸದಾಗಿ ಯಾವುದೇ ಭಾಗದಲ್ಲಿ RTO ಕಚೇರಿಗಳನ್ನು ತೆರೆಯುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು. ಶಾಸಕ ಸುಕುಮಾರ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, RTO ಕಚೇರಿಗಳಿಗೆ ಸಾರ್ವಜನಿಕರು ಡಿಸಿ ಮತ್ತು ಎಫ್‍ಸಿ ಸೇವೆ ಪಡೆಯಲು ಮಾತ್ರ ಬರುತ್ತಾರೆ. 30 ಸೇವೆಗಳನ್ನು ಆನ್‍ಲೈನ್‍ನಲ್ಲೇ ನೀಡುತ್ತಿರುವುದರಿಂದ ಆರ್‍ಟಿಒ ಕಚೇರಿಗಳನ್ನು ತೆರೆಯುವ ಪ್ರಸ್ತಾವನೆ ಇಲ್ಲ ಎಂದರು. ಸಾರ್ವಜನಿಕರ ಅನುಕೂಲಕ್ಕಾಗಿ ವಾಹನ್ ಫೋರ್, ಸಾರಥಿ ಫೋರ್, […]
ಸಿದ್ಧಾಂತ ಮರೆತವರಿಗೆ ಬಿಸಿ ಮುಟ್ಟಿಸಲು ವ್ಯೂಹ ರಚಿಸಿದ ಕಾಂಗ್ರೆಸ್

ಬೆಂಗಳೂರು,ಡಿ.7- ರಾಜ್ಯ ಕಾಂಗ್ರೆಸ್‍ನಲ್ಲಿ ನಾಯಕತ್ವದ ಗೊಂದಲ ಸೃಷ್ಟಿಸಿ, ವ್ಯಕ್ತಿಪೂಜೆ ಮಾಡಿದ ನಾಯಕರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಹಂತದ ಟಿಕೆಟ್ ಘೋಷಣೆ ವೇಳೆ ಕೈ ಕೊಡಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ. ರಾಜ್ಯದಲ್ಲಿ ಬಹಳಷ್ಟು ಮಂದಿ 2ನೇ ಹಂತದ ಮುಖಂಡರು ಪಕ್ಷ ಅಧಿಕಾರಕ್ಕೆ ಬಂದ ವೇಳೆ ಮುಖ್ಯಮಂತ್ರಿಯಾಗುವ ಸಮರ್ಥರ ಬಗ್ಗೆ ಪದೇ ಪದೇ ಹೇಳಿಕೆ ನೀಡಿ ಗೊಂದಲ ಮೂಡಿಸಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದಾಗ್ಯೂ ಸೊಪ್ಪು ಹಾಕದೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಬಹಿರಂಗ ಹೇಳಿಕೆ ನೀಡಿ […]
ಇರಾನ್: ಹೊಸ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣ

ಕೈರೋ, ಡಿ 4 -ದೇಶದ ನೈಋತ್ಯದಲ್ಲಿ ಹೊಸ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣವನ್ನು ಪ್ರಾರಂಭಿಸಿದೆ ಎಂದು ಇರಾನ್ ಸ್ಟೇಟ್ ಟಿವಿ ತಿಳಿಸಿದೆ. ಅಮೆರಿಕ ಜೊತೆಗಿನ ಭಿನ್ನಾಭಿಪ್ರಾಯ ಮತ್ತು ದೇಶದಲ್ಲಿ ಸದ್ಯ ಮಹಿಳಾ ಹಕ್ಕಿಗಾಗ ನಡೆಯುತ್ತಿರುವ ಹೋರಾಟದಿಂದ ಇರಾನ್ ತತ್ತರಿಸಿ ಹೋಗಿದೆ ಇದರ ನಡುವೆ ಈ ಮಾಹಿತಿ ಹೊರಬಿದ್ದಿರುವುದು ಅಚ್ಚರಿ ಮೂಡಿಸಿದೆ. ಕರೂನ್ ಎಂದು ಕರೆಯಲ್ಪಡುವ ಹೊಸ 300-ಮೆಗಾವ್ಯಾಟ್ ಸ್ಥಾವರವನ್ನು ನಿರ್ಮಿಸಲು ಎಂಟು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸುಮಾರು 2 ಬಿಲಿಯನ್ ಡಾಲರ್ ವೆಚ್ಚವಾಗುತ್ತದೆ ಎಂದು ದೇಶದ ರಾಜ್ಯ […]
ವ್ಯಕ್ತಿ ಚಾರಿತ್ರ್ಯಾ ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳಿ : ಹೈಕಮಾಂಡ್ ಸೂಚನೆ

ಬೆಂಗಳೂರು,ನ.30- ಇನ್ನು ಮುಂದೆ ಪಕ್ಷಕ್ಕೆ ಯಾರನ್ನೇ ಸೇರ್ಪಡೆ ಮಾಡಿಕೊಳ್ಳುವಾಗ ವ್ಯಕ್ತಿಯ ಚಾರಿತ್ರ್ಯ, ಹಿನ್ನಲೆಯನ್ನು ಕಡ್ಡಾಯವಾಗಿ ಪರಿಗಣಿಸಿ ವರಿಷ್ಠರ ಅನುಮತಿ ಪಡೆಯಬೇಕೆಂದು ಬಿಜೆಪಿ ಹೈಕಮಾಂಡ್ ರಾಜ್ಯ ಘಟಕಕ್ಕೆ ಸೂಚನೆ ಕೊಟ್ಟಿದೆ. ಕಳೆದ ವಾರ ಕ್ರಿಮಿನಲ್ ಅಪರಾಧ ಹಿನ್ನಲೆಯುಳ್ಳ ಸೈಕಲ್ ರವಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಹಾಗೂ ಸೈಲೆಂಟ್ ಸುನೀಲ ಜೊತೆ ಸಂಸದರು ಮತ್ತು ಶಾಸಕರು ವೇದಿಕೆ ಹಂಚಿಕೊಂಡಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಇನ್ನು ಮುಂದೆ ಯಾರೇ ಪಕ್ಷಕ್ಕೆ ಸೇರ್ಪಡೆಯಾಗುವುದಾದರೆ ಮೊದಲು ಅವರ ಚಾರಿತ್ರ್ಯ ಹಾಗೂ […]
ಚುನಾವಣಾ ಆಯುಕ್ತರಾಗಿ ಗೋಯಲ್ ನೇಮಕ

ನವದೆಹಲಿ,ನ.21- ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರು ಇಂದು ಚುನಾವಣಾ ಆಯುಕ್ತರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 1985ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿದ್ದ ಗೋಯಲ್ ಅವರು ಮೊನ್ನೆಯಷ್ಟೆ ಸ್ವಯಂ ನಿವೃತ್ತಿ ಹೊಂದಿದ್ದರು. ಅವರ ನಿವೃತ್ತಿ ಬೆನ್ನಲ್ಲೆ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸುವ ಆದೇಶ ಹೊರಡಿಸಲಾಗಿತ್ತು. ಇಂದು ಬೆಳಿಗ್ಗೆ ಕಚೇರಿಗೆ ಆಗಮಿಸಿದ ಗೋಯಲ್ ಅವರು ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಚುನಾವಣಾ ಸಮಿತಿ ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ […]
ಸೋಮವಾರ ಕಾಂಗ್ರೆಸ್ ಕಾರ್ಯಪಡೆಯೊಂದಿಗೆ ಖರ್ಗೆ ಮೊದಲ ಸಭೆ

ನವದೆಹಲಿ,ನ.12- ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕಾರ್ಯಪಡೆ ಸಭೆ ನಡೆಸಲಿದ್ದಾರೆ. ಮುಂಬರುವ 2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಕಾಂಗ್ರೆಸ್ ಕಾರ್ಯಪಡೆ ಸದಸ್ಯರೊಂದಿಗೆ ಸೋಮವಾರ ಖರ್ಗೆ ಅವರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕಾರ್ಯಪಡೆಯ ಮೊದಲ ಸಭೆ ಇದಾಗಿದೆ. ಕಾರ್ಯಪಡೆಯ ಸದಸ್ಯರು 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ರೂಪಿಸಲಾಗಿರುವ ಕಾರ್ಯತಂತ್ರಗಳ ಬಗ್ಗೆ ಖರ್ಗೆ ಅವರಿಗೆ ವಿವರಿಸಲಿದ್ದಾರೆ. ನಡುರಸ್ತೆಯಲ್ಲಿ […]
ಅಮೆರಿಕ ಮತ್ತು ಚೀನಾಗೆ ಓಮಿಕ್ರಾನ್‍ನ ಉಪತಳಿಗಳ ಕಾಟ

ನವದೆಹಲಿ,ನ.6-ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕೋವಿಡ್ ಹಾವಳಿ ತಗ್ಗಿದೆಯಾದರೂ ಅಮೆರಿಕ ಮತ್ತು ಚೀನಾವನ್ನು ಕೊರೊನಾದ ಉಪತಳಿಗಳು ಕಾಡಲಾರಂಭಿಸಿವೆ. ಓಮಿಕ್ರಾನ್‍ನ ಉಪತಳಿಗಳಾದ ಬಿಕ್ಯೂ1 ಮತ್ತು ಬಿಕ್ಯೂ1.1 ರೂಪಾಂತರಿಗಳು ಚೀನಾ ಮತ್ತು ಅಮೆರಿಕಕ್ಕೆ ಕಂಟಕಪ್ರಾಯವಾಗಿದ್ದು, ಒಟ್ಟು ಕೋವಿಡ್ ಸೋಂಕಿನಲ್ಲಿ ಶೇ.35ರಷ್ಟು ಪಾಲು ಪಡೆದಿವೆ. ಭಾರತದಲ್ಲಿ ಕೋವಿಡ್ ಸೋಂಕು ತಗ್ಗಿದ್ದು, ಭಾನುವಾರ 1132 ಹೊಸ ಪ್ರಕರಣಗಳು ವರದಿಯಾಗಿವೆ. 14 ಸಾವುಗಳು ಸಂಭವಿಸಿವೆ. ಅದೃಷ್ಟವಶಾತ್ ಸಕ್ರಿಯ ಪ್ರಕರಣಗಳ ಸಂಖ್ಯೆ 15 ಸಾವಿರದ ಒಳಗೆ ತಗ್ಗಿದೆ. ಚೀನಾ ಶೂನ್ಯ ಕೋವಿಡ್ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿದೆ. ಲಾಕ್‍ಡೌನ್, […]
ಶೀಘ್ರದಲ್ಲೇ ಓಲಾ, ಉಬರ್ ವಾಹನಗಳಿಗೆ ಹೊಸ ದರ ಫಿಕ್ಸ್

ಬೆಂಗಳೂರು,ಅ.27- ಒಂದೇರಡು ದಿನಗಳಲ್ಲೇ ಓಲಾ ಉಬರ್ ವಾಹನಗಳಿಗೆ ಸರ್ಕಾರ ಹೊಸ ದರ ಫಿಕ್ಸ್ ಮಾಡಲಿದೆ.ಓಲಾ ಉಬರ್ ವಾಹನಗಳಿಗ 15 ದಿನಗಳ ಒಳಗೆ ಹೊಸ ದರ ಫಿಕ್ಸ್ ಮಾಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.ನ್ಯಾಯಾಲಯದ ಆದೇಶದ ಗಡುವು ಮುಗಿಯುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಒಂದೇರಡು ದಿನಗಳಲ್ಲೇ ಹೊಸ ದರ ಫಿಕ್ಸ್ ಮಾಡಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. ಓಲಾ- ಉಬರ್ ಸಂಸ್ಥೆಗಳು ನಾವು ಸರ್ಕಾರಕ್ಕೆ ಜಿಎಸ್‍ಟಿ ಪಾವತಿಸಲು ಸಿದ್ದ ಎಂದು ಹೇಳಿಕೆ ನೀಡಿದ್ದವು. ಹೀಗಾಗಿ ಜಿಎಸ್‍ಟಿ ಸೇರಿಸಿ ಹೊಸ ದರ […]
ಬೆಂಗಳೂರಿಗೆ ಬಂದ ಹೊಸ ಮೆಟ್ರೋ ರೈಲು ಬೋಗಿಗಳು

ಬೆಂಗಳೂರು, ಅ.15- ಮೆಟ್ರೋ ರೈಲಿನ ಹೊಸ ಬೋಗಿಗಳು ಇಂದು ನಗರಕ್ಕೆ ಆಗಮಿಸಿವೆ. ಇಂದು ಬೆಳಿಗ್ಗೆ ಅಗಮಿಸಿದ ಬೋಗಿ ಗಳನ್ನು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್ ಅವರು ಸ್ವೀಕರಿಸಿದರು. ವೈಟ್ಫೀಲ್ಡ್ಗೆ ಅಗಮಿಸಿದ 6 ಹೊಸ ಕೋಚ್ಗಳನ್ನು ಮೇಟ್ರೋ ಡಿಪೋದಲ್ಲಿ ಅನ್ಲೋಡ್ ಮಾಡಲಾಗಿದೆ.ಒಂದೊಂದು ಕೋಚ್ಗಳು ಸುಮಾರು 9 ಕೋಟಿ ರೂ. ಬೆಲೆ ಬಾಳಲಿವೆ. ಈಗ ಬಂದಿರುವ 6 ಬೋಗಿಗಳನ್ನು ಒಂದುಗೂಡಿಸಿದರೆ ಅದು ಹೊಸ ಮೆಟ್ರೋ ರೈಲಾಗಲಿದೆ. ಹೊಸ ಮೆಟ್ರೋ ರೈಲು ತಯಾರಿಸುವ ಹೊಣೆಯನ್ನು ಬಿಇಎಂಎಲ್ ವಹಿಸಿಕೊಂಡಿದ್ದು ಸಧ್ಯ ಒಂದು […]