ಸಂಸತ್ ಉಭಯ ಸದನಗಳಲ್ಲಿ ತಾರಕಕ್ಕೇರಿದ ಗಡಿ ಸಂಘರ್ಷ

ನವದೆಹಲಿ,ಡಿ.22- ಭಾರತದ ಗಡಿಯಲ್ಲಿ ಚೀನಾ ಸೈನಿಕರ ಆಕ್ರಮಣ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸಂಸತ್‍ನ ಉಭಯ ಸದನಗಳಲ್ಲೂ ಭಾರೀ ಪ್ರತಿಭಟನೆಗಳು ವ್ಯಕ್ತವಾದವು. ಲೋಕಸಭೆಯಲ್ಲಿ ಪದೇ ಪದೇ ಕಲಾಪ ಮುಂದೂಡಿಕೆಯಾದರೆ, ರಾಜ್ಯಸಭೆಯಲ್ಲಿ ಚರ್ಚೆಗೆ ಅವಕಾಶ ನಿರಾಕರಿಸಿದ್ದನ್ನು ವಿರೋಧಿಸಿ ವಿಪಕ್ಷಗಳು ದಿನದ ಮಟ್ಟಿಗೆ ಕಲಾಪವನ್ನು ಬಹಿಷ್ಕರಿಸಿವೆ. ಲೋಕಸಭೆ ಇಂದು ಬೆಳಗ್ಗೆ ಕಲಾಪ ಸೇರುತ್ತಿದ್ದಂತೆ ಪ್ರತಿಪಕ್ಷಗಳು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿವೆ. ಧರಣಿ ಗದ್ದಲದಿಂದಾಗಿ ಕಲಾಪ 12 ಗಂಟೆವರೆಗೂ ಮುಂದೂಡಿಕೆಯಾಯಿತು. ಗಲಾಟೆಯ ನಡುವೆ ಕಾಗದ ಪತ್ರಗಳ ಮಂಡನೆ ಹಾಗೂ ಇತರ […]