ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವತ್ತ ಭಾರತ ದಾಪುಗಾಲು

ನವದೆಹಲಿ,ಜ.19- ಹಲವು ದಶಕಗಳಿಂದಲೂ ಜನಸಂಖ್ಯೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಚೀನಾವನ್ನು ಹಿಂದುಕ್ಕುವ ನಿಟ್ಟಿನಲ್ಲಿ ಭಾರತ ಮುನ್ನುಗ್ಗುತ್ತಿದ್ದು, ಶೀಘ್ರವೇ ವಿಶ್ವದಲ್ಲಿ ಮೊದಲ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಾಗಿದೆ. ನಿನ್ನೆಯವರಿಗಿನ ಅಂಕಿ ಅಂಶಗಳ ಪ್ರಕಾರ ಚೀನಾ ಮತ್ತು ಭಾರತದ ನಡುವಿನ ಜನಸಂಖ್ಯೆಯ ನಡುವೆ 3.89 ಕೋಟಿ ಮಾತ್ರ ವ್ಯತ್ಯಾಸವಿದೆ. ಚೀನಾ 145 ಕೋಟಿ ಜನರನ್ನು ಹೊಂದಿದ್ದರೆ, ಭಾರತ 141 ಕೋಟಿ ಜನಸಂಖ್ಯೆ ಹೊಂದಿದೆ. ಕಳೆದೆರಡು ವರ್ಷಗಳಲ್ಲಿ ಇದ್ದ 5.93 ಕೋಟಿ ಜನಸಂಖ್ಯೆಯ ಅಂತರ ಗಣನೀಯವಾಗಿ ತಗ್ಗಿ ಹೋಗಿದೆ. 1995ರಿಂದಲೂ ಅಲ್ಲಿನ ಸರ್ಕಾರ […]

ಕಳೆದೊಂದು ವರ್ಷದಿಂದ ಚೀನಾದಲ್ಲಿ ಕ್ಷೀಣಿಸುತ್ತಿದೆ ಜನಸಂಖ್ಯೆ ..!

ಬೀಜಿಂಗ್,ಜ.17- ವಿಶ್ವದ ಅತ್ಯಂತ ದೊಡ್ಡ ಜನಸಂಖ್ಯೆ ಹೊಂದಿರುವ ಚೀನಾ ದೇಶದಲ್ಲಿ ಕಳೆದ ಒಂದು ವರ್ಷದಿಂದ ಜನಸಂಖ್ಯೆ ಪ್ರಮಾಣ ಗಣನೀಯವಾಗಿ ಕುಸಿತಗೊಳ್ಳತೊಡಗಿದೆ ಎನ್ನಲಾಗಿದೆ. 1961ರಿಂದ ವಿಶ್ವದ ದೊಡ್ಡ ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬ ಖ್ಯಾತಿಯನ್ನು ಉಳಿಸಿಕೊಂಡು ಬಂದಿದ್ದ ಚೀನಾದಲ್ಲಿ ಕಳೆದ ವರ್ಷ ಸಂಭವಿಸಿದ ಆಪಾರ ಸಾವು-ನೋವಿನ ಘಟನೆಗಳ ನಂತರ ಅಲ್ಲಿನ ಜನಸಂಖ್ಯೆ ಕ್ಷೀಣಿಸತೊಡಗಿದೆ. 1,4126 ಶತಕೋಟಿ ಜನಸಂಖ್ಯೆ ಹೊಂದಿದ್ದ ಚೀನಾದಲ್ಲಿ ಕಳೆದ ವರ್ಷ 1.4118 ಶತಕೋಟಿಗೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಅಂಕಿ ಅಂಶಗಳ ಬ್ಯೂರೋ ವರದಿ ಪ್ರಕಟಿಸಿದೆ. ಅರಮನೆ […]

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ : ಸಿ.ಟಿ.ರವಿ

ಬೆಂಗಳೂರು,ಜ.13- ಜನಸಂಖ್ಯೆಗೆ ಅನುಗುಣವಾಗಿ ಪ್ರತಿಯೊಂದು ಸಮುದಾಯಕ್ಕೂ ನಮ್ಮ ಸರ್ಕಾರ ಮೀಸಲಾತಿ ಕೊಡಲು ಬದ್ದವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಕ್ಕೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಸಚಿವ ಸಂಪುಟದ ತೀರ್ಮಾನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲಯಕ್ಕೆ ನಮ್ಮ ಸರ್ಕಾರ ಮನವರಿಕೆ ಮಾಡಿಕೊಡಲಿದೆ ಎಂದು ತಿಳಿಸಿದರು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕೆಂಬುದು ಸರ್ಕಾರದ ಒತ್ತಾಸೆಯಾಗಿದೆ. ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದಂತೆ ಮೀಸಲಾತಿ ಕೊಡುತ್ತೇವೆ. […]

800 ಕೋಟಿ ಮೈಲಿಗಲ್ಲು ದಾಟಿದ ವಿಶ್ವದ ಜನಸಂಖ್ಯೆ

ನವದೆಹಲಿ,ನ.15- ವಿಶ್ವದ ಜನಸಂಖ್ಯೆ 800 ಕೋಟಿ ತಲುಪಿದ್ದು, ಮಾನವ ಸಂಖ್ಯೆಯ ಪ್ರಮಾಣದಲ್ಲಿ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ. ಜೊತೆಗೆ ಪ್ರಮುಖ ಸವಾಲುಗಳು ಕೂಡ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ವಿಶ್ಲೇಷಿಸಿದೆ. ಜನಸಂಖ್ಯೆ ಹೆಚ್ಚಾದಂತೆಲ್ಲ ಪೌಷ್ಟಿಕತೆ, ಸಾರ್ವಜನಿಕ ಆರೋಗ್ಯ, ನೈರ್ಮಲೀಕರಣದಂತಹ ಸವಾಲುಗಳು ತೀವ್ರಗೊಳ್ಳುತ್ತವೆ. ಇವುಗಳನ್ನು ಬದಿಗೆ ಸರಿಸಿ ನಾವು ಮುಂದಡಿ ಇಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.ವಿಶ್ವಾದ್ಯಂತ ತಾರತಮ್ಯ ತೀವ್ರಗೊಂಡಿದೆ. ವಿಶ್ವದ ಜನಸಂಖ್ಯೆಯಲ್ಲಿ ಅರ್ಧ ಭಾಗದಷ್ಟು ಜನ ಖರೀದಿ ಶಕ್ತಿಯನ್ನೇ ಹೊಂದಿಲ್ಲದಷ್ಟು ಬಡತನದಿಂದ ನರಳುತ್ತಿದ್ದಾರೆ. ಮತ್ತೊಂದೆಡೆ ಶೇ.10ರಷ್ಟು ಶ್ರೀಮಂತರ ಬಳಿ ಸಂಪತ್ತು ಕ್ರೂಢೀಕರಣಗೊಂಡಿದ್ದು, ಒಟ್ಟು […]