ಜ್ಯೋತಿಷ್ಯಕ್ಕೆ ಜೋತು ಬಿದ್ದ ಜೆಡಿಎಸ್, ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮುಂದೂಡಿಕೆ

ಬೆಂಗಳೂರು,ನ.18-ಜ್ಯೋತಿಷ್ಯಕ್ಕೆ ಜೋತು ಬಿದ್ದಿರುವ ಜೆಡಿಎಸ್ ಇಂದು ಬಿಡುಗಡೆಯಾಗಬೇಕಿದ್ದ 2023ರ ರಾಜ್ಯ ವಿಧಾನಸಭೆ ಚುನಾವಣೆಯ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯನ್ನು ಮುಂದೂಡ ಲಾಗಿದೆ. ಪಂಚರತ್ನ ರಥಯಾತ್ರೆ ಸಂಬಂಧ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ 90 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಸಂಭವನೀಯ ಅಭ್ಯರ್ಥಿಗಳಿಂದ ಪಕ್ಷಾಂತರ ಮಾಡುವುದಿಲ್ಲ ಎಂಬ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮವಿತ್ತು. ಆದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡರ ಸಲಹೆಯಂತೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುಂದೂಡಲಾಗಿದೆ. ಪಂಚರತ್ನ ರಥಯಾತ್ರೆ ನಡುವೆ […]

ಬೆಂಗಳೂರು ವಿವಿಯ ಮತ್ತೊಂದು ಎಡವಟ್ಟು: ದಿಡೀರ್ ಪರೀಕ್ಷೆ ಮುಂದೂಡಿಕೆ

ಬೆಂಗಳೂರು.ಅ.1- ಪರೀಕ್ಷೆ ಬರೆಯಲು ಬಂದಿದ್ದ ನೂರಾರು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಬೆಗಳೂರು ನಗರ ವಿವಿ ಚೆಲ್ಲಾಟವಾಡಿದೆ. ಈ ವರ್ಷದ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಪರೀಕ್ಷಾ ಹಾಲ್‍ನಲ್ಲಿ ನೀಡಿದ ಪ್ರಶ್ನೆಪತ್ರಿಕೆ ಕಂಡು ದಿಗ್ಬಾಂತರಾಗುವಂತಾಗಿತ್ತು. ಕಾರಣ ವಿವಿ ಸಿಬ್ಬಂದಿಗಳು ಈ ವರ್ಷದ ಪ್ರಶ್ನೆ ಪತ್ರಿಕೆ ಬದಲಿಗೆ ಕಳೆದ ವರ್ಷದ ಪ್ರಶ್ನೆ ಪತ್ರಿಕೆ ನೀಡಿದ್ದರು. ವಿವಿಯ ಮೌಲ್ಯಮಾಪನ ವಿಭಾಗದ ಕುಲ ಸಚಿವರ ಈ ನಿರ್ಲಕ್ಷ್ಯದಿಂದಾಗಿ ನಿನ್ನೆ ನಡೆಯಬೇಕಿದ್ದ ಬಿಎಸ್‍ಸಿ ಬಯೋಟೆಕ್ನಾಲಜಿಯ ನಾಲ್ಕನೆ ಸೆಮಿಸ್ಟರ್‍ನ ಜೆಜಿಟಿಕ್ ಎಂಜಿನಿಯರಿಂಗ್ ವಿಷಯದ ಪರೀಕ್ಷೆ ಮುಂದೂಡಲಾಗಿದೆ. ರಾಜ್ಯದ […]

ಬೊಮ್ಮಾಯಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ಮತ್ತೆ ಮುಂದೂಡಿಕೆ

ಬೆಂಗಳೂರು, ಆ.18- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಡೆಸಲು ನಿರ್ಧರಿಸಿದ್ದ ಜನೋತ್ಸವ ಕಾರ್ಯಕ್ರಮವನ್ನು ಮತ್ತೆ ಮುಂದೂಡಲಾಗಿದೆ. ಒಂದಿಲ್ಲೊಂದು ಕಾರಣಕ್ಕೆ ಜನೋತ್ಸವ ಕಾರ್ಯಕ್ರಮದತ್ತ ಕಣ್ಣಿಟ್ಟು ನೋಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಬೊಮ್ಮಾಯಿ ಅವರಿಗೆ ಎದುರಾಗುತ್ತಿದ್ದು, ಜನೋತ್ಸವ ಈಗ ಮತ್ತೆ ಮುಂದೂಡಿಕೆಯಾಗಿದೆ. ಈ ಹಿಂದೆ ಜನೋತ್ಸವ ಕಾರ್ಯಕ್ರಮ ನಿಗದಿಯಾಗಿದ್ದಾಗ ಪ್ರವೀಣ್ ನೆಟ್ಟಾರು ಹತ್ಯೆ ನಡೆಯಿತು. ಆಗ ಸರಕಾರ ವರ್ಷಾಚರಣೆ ಸಂಭ್ರಮ ನಡೆಸುವುದು ಬೇಡ ಎಂದು ಕಾರ್ಯಕರ್ತರು ಪಟ್ಟು ಹಿಡಿದರೂ ಬೊಮ್ಮಾಯಿ ಜನೋತ್ಸವದ ಜಪದಲ್ಲಿದ್ದರು. […]

KCET ದಾಖಲೆಗಳ ಪರಿಶೀಲನೆ ಮುಂದೂಡಿಕೆ

ಬೆಂಗಳೂರು,ಆ.4- ವಿದ್ಯಾರ್ಥಿಗಳು ಮತ್ತು ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಳೆಯಿಂದ ಆರಂಭವಾಗಬೇಕಿದ್ದ ಕೆಸಿಇಟಿ ದಾಖಲೆ ಪರಿಶೀಲನೆಯನ್ನು ಪ್ರಾಕಾರ ಮುಂದೂಡಿದೆ. ಕೆಸಿಇಟಿ ಅಂಕಗಳು ಮತ್ತು ಶ್ರೇಯಾಂಕಗಳಲ್ಲಿ ಪುನರಾವರ್ತಿತರಿಗೆ 2021ರ ಪಿಯು ಅಂಕಗಳನ್ನು ಸೇರಿಸದ ಪ್ರಾಧಿಕಾರದ ನಿರ್ಧಾರಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳುವ ಭರವೆ ನೀಡಿರುವುದರಿಂದ ಸದ್ಯಕ್ಕೆ ಘೋಷಣೆಯಾಗಿರುವ ಕೆಇಎ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವರು, 3 […]

‘ಜನತಾ ಜಲಧಾರೆ’ ಕಾರ್ಯಕ್ರಮ ಮುಂದೂಡಿದ ಜೆಡಿಎಸ್

ಬೆಂಗಳೂರು, ಜ.18-ರಾಜ್ಯಾದ್ಯಂತ ಪವಿತ್ರ ಜಲ ಸಂಗ್ರಹಿಸುವ ವಿಶೇಷ ಕಾರ್ಯಕ್ರಮ ಜನತಾ ಜಲಧಾರೆ ಮುಂದೂಡಿಕೆಯಾಗಲಿದೆ. ಗಣರಾಜ್ಯೋತ್ಸವ ದಿನವಾದ ಜ.26ರಂದು ಜನತಾ ಜಲಧಾರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಜೆಡಿಎಸ್ ಉದ್ದೇಶಿಸಿತ್ತು. ಆದರೆ, ರಾಜ್ಯದಲ್ಲಿ ನಿರಂತರವಾಗಿ ಏರುತ್ತಿರುವ ಕೋವಿಡ್‍ನಿಂದಾಗಿ ಉದ್ದೇಶಿತ ಜನತಾ ಜಲಧಾರೆ ಕಾರ್ಯಕ್ರಮವನ್ನು ಮುಂದೂಡಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ. ಫೆಬ್ರವರಿ ಅಂತ್ಯದವರೆಗೂ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗುವ ಸಾಧ್ಯತೆ ವಿರಳ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮುಂದೂಡಲು ನಿರ್ಣಯಿಸಿದ್ದಾರೆ. ಜನತಾ ಜಲಧಾರೆಗಾಗಿ ಗಂಗಾರಥವನ್ನು ಸಿದ್ಧಗೊಳಿಸಲಾಗಿತ್ತು. ನಾಡಿನ ಜೀವನದಿಗಳಿಂದ […]