ದೇವಾಲಯ ಸ್ವತಂತ್ರಗೊಳಿಸುವ ಕಾಯ್ದೆ ಹಿಂಪಡೆಯಲು ಅರ್ಚಕರ ನಿಯೋಗ ಒತ್ತಾಯ

ಬೆಂಗಳೂರು, ಜ.7- ಹಿಂದೂ ದೇವಾಲಯಗಳನ್ನು ಸ್ವತಂತ್ರಗೊಳಿಸಲು ರಾಜ್ಯ ಸರ್ಕಾರ ತನ್ನ ತೀರ್ಮಾನವನ್ನು ಪುನರ್ ಪರಿಶೀಲಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಅಖಿಲ ಕರ್ನಾಟಕ ಹಿಂದೂ ದೇವಾಲಯದ ಅರ್ಚಕರ -ಆಗಮಿಕರ ಮತ್ತು ಉಪಾವಂತರ ಒಕ್ಕೂಟ ಮನವಿ ಮಾಡಿದೆ. ಒಕ್ಕೂಟದ ಗೌರವಾಧ್ಯಕ್ಷ ಆರ್.ಲಕ್ಷ್ಮೀಕಾಂತ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಅವರ ನಿಯೋಗವು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು. ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕಾಯ್ದೆಯು ಅನುಕೂಲಕ್ಕಿಂತ ಅನಾನುಕೂಲವನ್ನು ಸೃಷ್ಟಿಸಲಿದೆ. ಈ ಕಾಯ್ದೆಯನ್ನು […]

ದೇವಾಲಯಗಳ ಧಾರ್ಮಿಕ ಸ್ವಾಯತ್ತ ಕಾಯ್ದೆಗೆ ಅರ್ಚಕರ ಒಕ್ಕೂಟ ವಿರೋಧ

ಬೆಂಗಳೂರು, ಜ.4- ದೇವಸ್ಥಾನಗಳ ಸ್ವಾಯತ್ತತೆ ಕುರಿತು ಕಾಯ್ದೆ ತರಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಅರ್ಚಕರು-ಆಗಮಿಕ-ಉಪಾವಂತರ ಒಕ್ಕೂಟ ವಿರೋಧಿಸಿದೆ. ಯಾವುದೇ ಕಾರಣಕ್ಕೂ ಈ ಕಾಯ್ದೆ ತರಲು ಅವಕಾಶ ಕೊಡಬಾರದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ. ಈ ಕಾಯ್ದೆಯಿಂದ ಸಣ್ಣ ದೇಗುಲಗಳಿಗೆ ಅನ್ಯಾಯವಾಗಲಿದೆ. ಪಕ್ಷದ ಕಾರ್ಯಕರ್ತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸಣ್ಣ ದೇಗುಲಗಳ ಅರ್ಚಕರಿಗೆ ಸಮಸ್ಯೆಯಾಗುತ್ತದೆ. ರಾಜ್ಯದಲ್ಲಿ ಸಿ ಗ್ರೇಡ್ ದೇಗುಲಗಳ ಅರ್ಚಕರು ಹೇಗೋ […]