ಅದಾನಿ ಹಗರಣದ ತನಿಖೆಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು,ಫೆ.4-ಅದಾನಿ ಸಮೂಹ ಸಂಸ್ಥೆಯ ಷೇರು ಹಗರಣದ ಬಗ್ಗೆ ಜಂಟಿ ಸದನ ಸಮಿತಿಯ ತನಿಖೆ ನಡೆಸಬೇಕು ಎಂದು ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಪ್ರೊ,ಬಿ.ಕೆ ಚಂದ್ರಶೇಖರ್ ಒತ್ತಾಯಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂಡನ್ ಬರ್ಗ್ ಕುರಿತು ಸಾಕಷ್ಟು ಪ್ರಶ್ನೆ ಹುಟ್ಟುಕೊಂಡಿವೆ. 2008ರಲ್ಲಿ ಆರಂಭವಾಗಿದ ಈ ಸಂಸ್ಥೆ ಷೇರುಪೇಟೆ ಹಾಗೂ ಕಂಪನಿಗಳಲ್ಲಿ ಅಕ್ರಮದ ಬಗ್ಗೆ ತನಿಖೆ ಮಾಡಿ ವರದಿ ನೀಡುತ್ತಿದೆ. ಈ ಸಂಸ್ಥೆ ಅದಾನಿ ಅವರ ಕಂಪನಿಗೂ ಮುನ್ನ ಒಂದೆರಡು ಕಂಪನಿ ಬಗ್ಗೆ ತನಿಖೆ […]

ಮೆಟ್ರೋ ಪಿಲ್ಲರ್ ಕುಸಿತಕ್ಕೆ ಗುತ್ತಿಗೆದಾರ ಎಂಜಿನಿಯರ್‌ಗಳೇ ಹೊಣೆ

ಬೆಂಗಳೂರು,ಜ.21- ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಲು ಕಾಮಗಾರಿ ಗುತ್ತಿಗೆ ಪಡೆದಿರುವ ಕಂಟ್ರಾಕ್ಟರ್ ಹಾಗೂ ಎಂಜಿನಿಯರ್‍ಗಳೇ ಕಾರಣ ಎನ್ನುವುದು ಸಾಬೀತಾಗಿದೆ. ಪ್ರಕರಣ ಕುರಿತಂತೆ ತಾಂತ್ರಿಕ ತನಿಖೆ ನಡೆಸಿರುವ ಐಐಎಸ್‍ಸಿ ತಜ್ಞರು ಇಂದು ಬಿಎಂ ಆರ್‍ಸಿಎಲ್‍ಗೆ ವರದಿ ಸಲ್ಲಿಸಿದ್ದು,ವರದಿಯಲ್ಲಿ ಗುತ್ತಿಗೆದಾರ ಹಾಗೂ ಎಂಜಿನಿಯರ್‍ಗಳ ಬೇಜವಬ್ದಾರಿತನವೇ ಪಿಲ್ಲರ್ ಕುಸಿದು ಬೀಳಲು ಕಾರಣ ಎನ್ನುವುದು ದಾಖಲಾಗಿದೆ. ಕುಸಿದು ಬಿದ್ದ ಪಿಲ್ಲರ್‍ನ ಕಂಬಿ, ಮರಳು, ಸಿಮೆಂಟ್‍ಗಳ ಕ್ವಾಲಿಟಿ ರಿಪೋರ್ಟ್ ಪಡೆದು ತನಿಖೆ ಆರಂಭಿಸಿದ್ದ ಐಐಎಸ್‍ಸಿ ತಜ್ಞರು ತನಿಖೆ ಪೂರ್ಣಗೊಳಿಸಿ ಇದೀಗ […]

ಕುಸ್ತಿ ಫೆಡರೇಷನ್‍ಗೆ ಉಸ್ತುವಾರಿ ಸಮಿತಿ ರಚನೆ : 3 ದಿನಗಳ ಧರಣಿ ಅಂತ್ಯ

ನವದೆಹಲಿ,ಜ.21- ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರ ಪದಚ್ಯುತಿ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ತನಿಖೆಗೆ ಉಸ್ತುವಾರಿ ಸಮಿತಿಯನ್ನು ರಚನೆ ಸೇರಿದಂತೆ ಹಲವು ಭರವಸೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಕುಸ್ತಿ ಪಟುಗಳ ಪ್ರತಿಭಟನೆ ನಿನ್ನೆ ತಡ ರಾತ್ರಿ ಅಂತ್ಯಗೊಂಡಿದೆ. ಕೇಂದ್ರ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಅನುರಾಗ್‍ಸಿಂಗ್ ಠಾಕೂರ್ ಅವರೊಂದಿಗೆ ನಡೆದ ಸುದೀರ್ಘ ಮಾತುಕತೆಯಲ್ಲಿ ಕೆಲ ಸ್ಪಷ್ಟ ಭರವಸೆಗಳು ದೊರೆತಿದ್ದವು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ಜಂಟಿ […]

ಪಾರದರ್ಶಕ ತನಿಖೆಗೆ ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವಹಿಸಲಾಗಿದೆ: ಆರಗ ಜ್ಞಾನೇಂದ್ರ

ಬೆಂಗಳೂರು, ಜ.17- ವಿವಿಧ ಆರೋಪಗಳಿರುವ ಸ್ಯಾಂಟ್ರೋ ರವಿ ಪ್ರಕರಣದ ಬಗ್ಗೆ ಯಾವುದೇ ಅನುಮಾನಗಳು ಬಾರದಂತೆ ಮತ್ತು ಮತ್ತಷ್ಟು ಪಾರದರ್ಶಕವಾಗಿ ತನಿಖೆ ನಡೆಸಲು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಈ ಸಂಬಂಧ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮೈಸೂರು ಪೊಲೀಸರು ಈ ಪ್ರಕರಣದ ತನಿಖೆ ಮಾಡುತ್ತಿದ್ದರು. ತನಿಖೆ ಮತ್ತಷ್ಟು ಪಾರದರ್ಶಕವಾಗಿ ನಡೆಯಲು ಮತ್ತು ಯಾವುದೇ ಅನುಮಾನ ಈ ಪ್ರಕರಣದಲ್ಲಿ ಬಾರದಂತೆ ತನಿಖೆ ಮಾಡಲು ಸಿಐಡಿಗೆ ವಹಿಸಲಾಗಿದೆ. ಪಿಎಸ್‍ಐ ಪ್ರಕರಣ ತನಿಖೆ ಮಾಡಿದ ತಂಡವೇ […]

ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿಗೆ ವಹಿಸಿ ಸರ್ಕಾರ ಆದೇಶ

ಬೆಂಗಳೂರು,ಜ.16-ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿದ್ದ ಸ್ಯಾಂಟ್ರೊ ರವಿ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಕಳೆದ ಮೂರು ದಿನಗಳ ಹಿಂದೆ ಗುಜರಾತ್‍ನ ಅಹಮಾದಾಬಾದ್‍ನಲ್ಲಿ ಬಂಧನಕ್ಕೊಳಪಟ್ಟು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿ ತನಿಖೆ ಆದೇಶ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಧಿಅಕಾರಿಗಳ ವರ್ಗಾವಣೆ, ಮಾನವ ಕಳ್ಳಸಾಗಾಣಿಕೆ, ವಂಚನೆ, 2ನೇ ಪತ್ನಿ ಮೇಲೆ ಅತ್ಯಾಚಾರ ಆರೋಪ ಸೇರಿದಂತೆ ಹಲವಾರು ಪ್ರಕರಣಗಳು ಈತನ ಮೇಲಿದೆ. ಈತನ ಮೇಲೆ […]

ಉಗ್ರ ಶಾರೀಕ್‍ಗೆ ಕೇರಳ ನಂಟು ಕುರಿತು ಅಧಿಕಾರಿಗಳಿಂದ ಶೋಧ

ಬೆಂಗಳೂರು,ಡಿ.1- ಮಂಗಳೂರು ಕುಕ್ಕರ್ ಸ್ಪೋಟ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಶಂಕಿತ ಭಯೋತ್ಪಾದಕ ಮೊಹಮ್ಮದ್ ಶಾರೀಕ್ ಜೊತೆಗಿನ ಕೇರಳದ ಸಂಪರ್ಕವನ್ನು ಪತ್ತೆಹಚ್ಚುವತ್ತ ಗಮನಹರಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮತ್ತು ಸೈಬರ್ ಕ್ರೈಂ ಘಟಕದ ಅಧಿಕಾರಿಗಳು ಈಗಾಗಲೇ ಕೇರಳ ತಲುಪಿದ್ದು, ಶಂಕಿತ ಭಯೋತ್ಪಾದಕ ಮೊಹಮ್ಮದ್ ಶಾರೀಕ್‍ನ ನಂಟು ಭೇದಿಸಲು ಹುಡುಕಾಟ ನಡೆಸಿದ್ದಾರೆ. ಮೊಹಮ್ಮದ್ ಶಾರೀಕ್ ಕೇರಳದ ಆಲುವಾ, ಮುನಂಬಂ ಮತ್ತು ಕೊಚ್ಚಿ ನಗರಗಳಲ್ಲಿ ತಂಗಿದ್ದ ಎಂಬ ಮಾಹಿತಿ ಸಿಕ್ಕಿದೆ. ಮೊಹಮ್ಮದ್ ಶಾರೀಕ್ ಡ್ರಗ್ ದಂಧೆಯಲ್ಲಿಯೂ ಭಾಗಿಯಾಗಿರುವ ಬಗ್ಗೆಯೂ […]

ಪೊಲೀಸ್ ಅಧಿಕಾರಿ ನಂದೀಶ್ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು,ಅ.30- ಕೆ.ಆರ್.ಪುರಂನ ಪೊಲೀಸ್ ಅಧಿಕಾರಿ ನಂದೀಶ್ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷ, ಸಚಿವ ಎಂ.ಟಿ.ಬಿ.ನಾಗರಾಜ್ ಅವರ ಹೇಳಿಕೆಯನ್ನು ತನಿಖೆಗೊಳಪಡಿಸುವಂತೆ ಒತ್ತಾಯಿಸಿದೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ನಂದೀಶ್ ಸಾವು ಪ್ರಕರಣದ ಘಟನಾವಳಿಗಳನ್ನು ವಿವರಿಸಿದ್ದಾರೆ. ಖುದ್ದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರೇ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆ ತಂದಿದ್ದಾರೆ. ವರ್ಗಾವಣೆಗಾಗಿ 70ರಿಂದ 80 ಲಕ್ಷ ಹಣ ನೀಡಿ ಬಂದವನಿಗೆ ಹೃದಯಾಘಾತವಾಗದೆ ಇನ್ನೇನು ಆಗಲು ಸಾಧ್ಯ ಎಂದು […]

ಬಿಎಂಎಸ್ ಟ್ರಸ್ಟ್ ಅಕ್ರಮ ತನಿಖೆಗೆ ಬಿಗಿಪಟ್ಟು: ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು, ಸೆ.23- ಬಿಎಂಎಸ್ ಟ್ರಸ್ಟ್‍ನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣವನ್ನು ತನಿಖೆಗೆ ವಹಿಸಬೇಕೆಂದು ಜೆಡಿಎಸ್ ಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪರಿಣಾಮ ಇಂದು ಯಾವುದೇ ಕಾರ್ಯ-ಕಲಾಪ ನಡೆಯದೆ ಮಳೆಗಾಲದ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಒಂದು ಕಡೆ ಜೆಡಿಎಸ್ ವಿಧಾನಸಭೆಯ ಕಲಾಪಕ್ಕೆ ಅಡ್ಡಿಪಡಿಸಿ ಸದನದ ಬಾವಿಗಿಳಿದರೆ ಮತ್ತೊಂದು ಕಡೆ ಪ್ರತಿಪಕ್ಷ ಕಾಂಗ್ರೆಸ್ 40% ಕಮಿಷನ್ ಭ್ರಷ್ಟಾಚಾರವನ್ನು ತನಿಖೆಗೆ ವಹಿಸಬೇಕೆಂದು ಆಗ್ರಹಿಸಿತು. ಈ ನಡುವೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗದ್ದಲ, ಆರೋಪ, ಪ್ರತ್ಯಾರೋಪ ನಡೆಯಿತು. ಆ ಸಂದರ್ಭದಲ್ಲಿ […]

ಮತ್ತೆ ಮುನ್ನೆಲೆಗೆ ಬಂದ ಸಿದ್ದು ದುಬಾರಿ ವಾಚ್ ವಿವಾದ

ಬೆಂಗಳೂರು,ಸೆ.13- ಪಿಎಸ್‍ಐ ನೇಮಕಾತಿ ಅಕ್ರಮ ಹಾಗೂ 40% ಕಮೀಷನ್ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ ಮತ್ತೆ ಹೊಬ್ಲೆಟ್ ವಾಚ್ ವಿವಾದವನ್ನು ಮುಂದಿಡಲು ತೀರ್ಮಾನಿಸಿದೆ. ಪ್ರವಾಹ ಭ್ರಷ್ಟಾಚಾರ ಇನ್ನಿತರೆ ವಿಷಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹಣಿಯಲು ಯತ್ನಿಸುತ್ತಿರುವ ವಿಪಕ್ಷ ಕಾಂಗ್ರೆಸ್‍ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ದುಬಾರಿ ಹೊಬ್ಲೊಟ್ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸುವಂತೆ ಪಟ್ಟುಹಿಡಿದು ಒತ್ತಾಯಿಸಲಿದೆ. 2016ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದ ಹೊಬ್ಲೋಟ್ ವಾಚ್ ಉಡುಗೊರೆ ಪ್ರಕರಣವನ್ನು […]

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಖರೀದಿ ಅಕ್ರಮ : ಸಮಗ್ರ ತನಿಖೆಗೆ ಸಿದ್ಧತೆ

ಬೆಂಗಳೂರು,ಆ.20-ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯ ವೇಳೆ ವಿದ್ಯುತ್ ಖರೀದಿಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಇದನ್ನು ಸಮಗ್ರವಾಗಿ ತನಿಖೆ ನಡೆಸಲು ಇಂಧನ ಇಲಾಖೆ ಮುಂದಾಗಿದೆ. ಮುಂದಿನ ವಾರ ಇಂಧನ ಇಲಾಖೆಯಿಂದ ತನಿಖೆಗೆ ಅಧಿಕೃತ ಆದೇಶ ಹೊರಬೀಳಲಿದ್ದು, ಪ್ರಮುಖ ನಾಯಕರಿಗೆ ತನಿಖೆಯ ಬಿಸಿ ಎದುರಾಗುವ ಸಾಧ್ಯತೆ ಇದೆ. ಈ ಮೂಲಕ 2023ರ ವಿಧಾನಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷ ಏರ್ಪಡುವುದು ಬಹುತೇಕ ಖಚಿತವಾಗಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ದರವನ್ನು […]