ಪಂಜಾಬಿನಲ್ಲಿ ಸದ್ದು ಮಾಡುತ್ತಿರುವ ಕನ್ನಡಿಗ

ಚಂಡೀಗಢ,ಫೆ.5- ದೂರದ ಪಂಜಾಬಿನಲ್ಲಿ ಕನ್ನಡಿಗರೊಬ್ಬರು ಸದ್ದು ಮಾಡುತ್ತಿದ್ದಾರೆ. ಕರ್ನಾಟಕದ ಬಿಜಾಪುರ ಜಿಲ್ಲೆಯ ಪಂಡಿತ್ ರಾವ್ ಧರೆನ್ನವರ್ ಎಂಬ ಪ್ರಾಧ್ಯಾಪಕರು ಪಂಜಾಬ್‍ನಲ್ಲಿ ಪಂಜಾಬಿ ಭಾಷೆ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಹಾಕುವಂತೆ ವ್ಯಾಪಾರಸ್ಥರಿಗೆ ತಾಕೀತು ಮಾಡುತ್ತಿದ್ದಾರೆ. 2003ರಲ್ಲಿ ಪ್ರಾಧ್ಯಾಪಕ ಹುದ್ದೆ ಅಲಂಕರಿಸಲು ಚಂಡೀಗಢಕ್ಕೆ ಬಂದು ನೆಲೆಸಿರುವ ಅವರು ಅಲ್ಲಿನ ಸೆಕ್ಟರ್ 46ರ ಸ್ನಾತಕೋತ್ತರ ಸರ್ಕಾರಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಪಂಜಾಬಿ ಭಾಷೆಯ ಉಳಿವಿಗಾಗಿ ಹೋರಾಟ ನಡೆಸುವ ಮೂಲಕ ಮನೆ ಮಾತಾಗಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಳೆದ […]