ಚಿನ್ನದ ಇಂಕ್‍ನಲ್ಲಿ ಬರೆದ ಕುರಾನ್ ಹಸ್ತಪ್ರತಿ ಲಭ್ಯ

ನಾಗ್ಪುರ,ಜ.4- ಚಿನ್ನದ ಇಂಕ್‍ನಲ್ಲಿ ಬರೆಯಲಾಗಿರುವ ಪವಿತ್ರ ಕುರಾನ್‍ನ ಹಸ್ತ ಪ್ರತಿ ಸೇರಿದಂತೆ ಹಲವಾರು ಅಮೂಲ್ಯ ಜ್ಞಾನ ಸಂಪತ್ತು ಒಳಗೊಂಡ ದಸ್ತಾವೇಜುಗಳನ್ನು ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಯೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುತ್ತಿರುವ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ (ಐಎಸ್‍ಸಿ) ಸಮಾವೇಶದಲ್ಲಿ ಪ್ರದರ್ಶನಕ್ಕಿಟ್ಟಿದೆ. ಸಂಘ ಪರಿವಾರದ ಭಾಗವಾಗಿರುವ ಭಾರತೀಯ ಶಿಕ್ಷಣ ಮಂಡಲ್ ಬೆಂಬಲಿತ ನಾಗ್ಪುರದ ರಿಸರ್ಚ್ ಫಾರ್ ರಿಸುರ್ಜೆನ್ಸ್ ಫೌಂಡೇಷನ್ (ಆರ್‍ಎಫ್‍ಆರ್‍ಎಫ್) ಸ್ಥಾಪಿಸಿರುವ ಸ್ಟಾಲ್‍ನಲ್ಲಿ ಪುರಾತನವಾದ ಈ ಪ್ರತಿ ವಿಕ್ಷಣೆಗೆ ಲಭ್ಯವಿದೆ. ಚಿನ್ನದ ಇಂಕ್‍ನಲ್ಲಿ ಬರೆಯಲಾಗಿರುವ ಕುರಾನ್‍ನ ನಾಲ್ಕು ಪ್ರತಿಗಳು ಮಾತ್ರ ವಿಶ್ವದಲ್ಲಿ […]