ನಮ್ಮ ಮೆಟ್ರೋ ರೈಲು ಹಳಿಯಲ್ಲಿ ಬಿರುಕು..!

ಬೆಂಗಳೂರು,ಫೆ.7-ಮೆಟ್ರೋ ನಿಗಮದ ಅವಾಂತರಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಧರೆಗುರುಳಿ ತಾಯಿ-ಮಗು ಸಾವನ್ನಪ್ಪಿದಾಯ್ತು, ಟ್ರಿನಿಟಿ ಸ್ಟೇಷನ್ ಪಿಲ್ಲರ್ ಬೇರಿಂಗ್ ಬಿಟ್ಟಿದ್ದಾಯಿತು. ಇದೀಗ ಮೆಟ್ರೋ ರೈಲ್ವೆ ಹಳಿಗಳ ಸರತಿ. ಮೈಸೂರು ರಸ್ತೆಯ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ಕೂಗಳತೆ ದೂರದಲ್ಲಿ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಟ್ರ್ಯಾಕ್ ಹಾಕಿದ ಮೂರು ವರ್ಷದೊಳಗೆ ಹಳಿಯಲ್ಲಿ ಬಿರುಕು ಕಂಡು ಬಂದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅದಾನಿ ಹಗರಣದ ತನಿಖೆಗೆ ಪ್ರತಿಪಕ್ಷಗಳ ಪಟ್ಟು, ಕಲಾಪ ಮುಂದೂಡಿಕೆ ಮೆಟ್ರೋ ರೈಲು ಸಂಚಾರದ […]

ರೈಲ್ವೇ ಇಲಾಖೆಗೆ 2.40 ಲಕ್ಷ ಕೋಟಿ ರೂ.ಗಳ ಕೊಡುಗೆ

ನವದೆಹಲಿ,ಫೆ.1-ಸತತ ಐದನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ರೈಲ್ವೆ ಇಲಾಖೆಗೆ 2.40 ಲಕ್ಷ ಕೋಟಿ ರೂ.ಗಳ ಭರ್ಜರಿ ಅನುದಾನ ಘೋಷಣೆ ಮಾಡಿದ್ದಾರೆ. 2013-14 ನೇ ಸಾಲಿನ ನಂತರ ರೈಲ್ವೇ ಇಲಾಖೆಗೆ ಬಿಡುಗಡೆಯಾದ ಅತಿ ಹೆಚ್ಚಿನ ಅನುದಾನ ಇದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ರೈಲ್ವೆಗೆ ಒಟ್ಟು 2.40 ಲಕ್ಷ ಕೋಟಿ ರೂ. ದೊಡ್ಡ ರೈಲ್ವೆ ಯೋಜನೆಗಳ ಜಾರಿಗಾಗಿ ನಿರಂತರವಾಗಿ […]

ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಟೆಂಡರ್ ಆಹ್ವಾನ

ಬೆಂಗಳೂರು,ಜ.27- ಕರ್ನಾಟಕ-ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸಸ್ (ಕೆ-ಆರ್‍ಐಡಿಇ) 15,767 ಕೋಟಿ ರೂಪಾಯಿ ವೆಚ್ಚದ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಎರಡನೇ ಹಂತದ ಟೆಂಡರ್‍ಗೆ ಆಹ್ವಾನ ನೀಡಿದೆ. 2ನೇ ಹಂತದಲ್ಲಿ ಹೀಲಲಿಗೆಯಿಂದ ರಾಜಾನುಕುಂಟೆಗೆ ಸಂಪರ್ಕ ಕಲ್ಪಿಸುವ 4ನೇ ಕಾರಿಡಾರ್‍ನ ಕಾಮಗಾರಿ ಅನುಷ್ಠಾನಕ್ಕೆ ಟೆಂಡರ್‍ಗೆ ಆಹ್ವಾನ ನೀಡಲಾಗಿದೆ. 148 ಕಿಮೀ ಯೋಜನೆಯ 46.8 ಕಿಮೀ ಉದ್ದದ ಯಲಹಂಕ (ಕಾರಿಡಾರ್-4) ಮೂಲಕ ಹೀಲಲಿಗೆ-ರಾಜನಕುಂಟೆ ನಡುವಿನ ಕನಕ ಮಾರ್ಗದ ಸಿವಿಲ್ ಕಾಮಗಾರಿಯನ್ನು ಈ ಟೆಂಡರ್ ಒಳಗೊಂಡಿದೆ. ಏಪ್ರಿಲ್ 27 ಟೆಂಡರ್‍ಗೆ ಬಿಡ್ ಸಲ್ಲಿಸಲು […]

ಬೆಂಗಳೂರಿನ ವಾಹನ ಸವಾರರೇ ಇಲ್ಲಿ ಗಮನಿಸಿ

ಬೆಂಗಳೂರು,ನ.19- ನಾಳೆಯಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭಗೊಳ್ಳುವುದರಿಂದ ನಗರದ ಶಾಂತಲಾ ಸರ್ಕಲ್ ನಿಂದ ಸಂಗೊಳ್ಳಿ ರಾಯಣ್ಣ ವೃತ್ತ ವರೆಗಿನ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ. ನಾಳೆಯಿಂದ ಡಿ.18ರವರೆಗೆ ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸದೆ ಪರ್ಯಾಯ ಮಾರ್ಗ ಬಳಸುವಂತೆ ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ರೈಲ್ವೆ ನಿಲ್ದಾಣದ ಮುಂಭಾಗದ 580 ಮೀಟರ್ ರಸ್ತೆಯನ್ನು ವೈಟ್ ಟಾಪಿಂಗ್ ರಸ್ತೆಯನ್ನಾಗಿ ಮಾರ್ಪಡಿಸಲಾಗುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾಳೆ ಬಳ್ಳಾರಿಯಲ್ಲಿ ರಾಜ್ಯಮಟ್ಟದ ಬಿಜೆಪಿ ST ಸಮಾವೇಶ ಈ ಅವಧಿಯಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ […]

ರೈಲು ನಿಲ್ದಾಣದಲ್ಲಿ 1.71 ಕೋಟಿ ನಗದು, ಚಿನ್ನದ ಬಿಸ್ಕತ್ತು ಪತ್ತೆ

ಥಾಣೆ, ಅ. 3 – ಮಹಾರಾಷ್ಟ್ರದ ಥಾಣೆ ಜಿಲ್ಲಾಯ ಟಿಟ್ವಾಲಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಮೂಟೆಯಲ್ಲಿ ಸಾಗಿಸುತ್ತಿದ್ದ 1.71 ಕೋಟಿ ರೂಪಾಯಿ ಮೌಲ್ಯದ ನಗದು ಹಾಗು ಎರಡು ಚಿನ್ನದ ಬಿಸ್ಕತ್ತುಗಳನ್ನು ಆರ್‍ಪಿಎಫ್ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ರೈಲ್ವೆ ನಿಲ್ದಾಣದ ಪ್ಲಾಟ್‍ಫಾರ್ಮ್‍ನಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ವ್ಯಕ್ತಿಯನ್ನು ಗಮನಿಸಿ ಆರ್‍ಪಿಎಫ್ ಸಿಬ್ಬಂದಿ ಆತನನ್ನು ವಿಚಾರಿಸಿದ್ದಾರೆ ಅದರೆ ಆತ ತಡಬಡಾಯಿಸಿದಾಗ ಬೆನ್ನ ಹಿಂದೆ ಹೊತ್ತಿಕೊಂಡಿದ್ದ ಮೂಟೆಯೊಂದಿಗೆ ಠಾಣೆಗೆ ಕರೆತಂದಿದ್ದಾರೆ. ನಂತರ ವಿಚಾರಣೆ ಬಳಿಕ ಆತ ನನ್ನ ಹೆಸರು ಗಣೇಶ್ ಮೊಂಡಲ್ ವ್ಯಾಪಾರಿ […]

ರೈಲ್ವೆ, ಬಸ್ ಸಂಚಾರ ಸಂಬಂಧಿಸಿದ ಕೇರಳ ಪ್ರಸ್ತಾವನೆಗಳ ತಿರಸ್ಕಾರ

ಬೆಂಗಳೂರು,ಸೆ.18- ಕೇರಳ ಸರ್ಕಾರ ಮುಂದಿಟ್ಟಿದ್ದ ಮೂರು ಪ್ರಸ್ತಾವನೆಗಳನ್ನು ಕರ್ನಾಟಕ ಸರ್ಕಾರ ಸಾರಾಸಗಟವಾಗಿ ತಿರಸ್ಕರಿಸಿದೆ. ಕೇರಳ ಮುಖ್ಯಮಂತ್ರಿ ವಿಜಯನ್ ಪಿಣರಾಯ್ ಅವರು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ, ನೆನೆಗುದಿಗೆ ಬಿದ್ದಿರುವ ಎರಡು ರೈಲ್ವೆ ಯೋಜನೆ ಸೇರಿದಂತೆ ಮೂರು ಪ್ರಸ್ತಾವನೆಗಳಿಗೆ ಕರ್ನಾಟಕ ಸರ್ಕಾರ ಅನುಮತಿ ಕೊಡಬೇಕೆಂದು ಮನವಿ ಮಾಡಿದರು. ಕೇರಳದ ಬಹುನಿರೀಕ್ಷಿತ ಕನ್ನಿಯೂರು ರೈಲ್ವೆ ಯೋಜನೆಯ 45 ಕಿ.ಮೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದುಹೋಗುತ್ತದೆ. ಇದೊಂದು ಪರಿಸರ ಸೂಕ್ಷ್ಮ ವಲಯ ಎಂಬ ಕಾರಣಕ್ಕಾಗಿ […]

ಸರ್ಕಾರಿ ಉದ್ಯೋಗಕ್ಕಾಗಿ ಹೆಬ್ಬೆರಳ ಚರ್ಮವನ್ನೇ ತೆಗೆದು ಬೇರೆಯವರಿಗೆ ಅಂಟಿಸಿದ ಭೂಪ..!

ವಡೋದರ, ಆ.25- ಸರ್ಕಾರಿ ಉದ್ಯೋಗ ಪಡೆಯಲು ನಾನಾ ಕಸರತ್ತು ನಡೆಸುತ್ತಾರೆ. ಆದರೆ ಇಲ್ಲಿನ ಮಹಾಶಯನೊಬ್ಬ ತನ್ನ ಹೆಬ್ಬೆರಳಿನ ಚರ್ಮವನ್ನೇ ತೆಗೆದು ಮತ್ತೊಬ್ಬನಿಗೆ ನೀಡಿ ರೈಲ್ವೆ ಉದ್ಯೋಗ ಗಿಟ್ಟಿಸಲು ನಡೆಸಿದ ಅಕ್ರಮವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೆಂಬ ಹಂಬಲದೊಂದಿಗೆ ಹಲವು ಬಾರಿ ಪರೀಕ್ಷೆ ಬರೆದಿದ್ದ. ಆದರೆ ಉತ್ತೀರ್ಣನಾಗಿರಲಿಲ್ಲ. ತನ್ನ ಸ್ನೇಹಿತನ ಜಾಣ್ಮೆ ಹಾಗೂ ಪ್ರತಿಭಾನ್ವಿತೆಯನ್ನು ಅರಿತಿದ್ದ ಆತ ತನ್ನ ಹೆಬ್ಬೆರಳನ್ನು ಬಿಸಿ ನೀರಿನಲ್ಲಿ ಅದ್ದಿ ಚರ್ಮವನ್ನು ತೆಗೆದು ಆತನ ಹೆಬ್ಬೆರಳಿಗೆ ಅಂಟಿಸಿ ಪರೀಕ್ಷೆ ಬರೆಸಿದ್ದ ವಿಚಿತ್ರ […]

ವಿಡಿಯೋ ಮಾಡಲು ಹೋಗಿ ರಾಜಕಾಲುವೆಗೆ ಬಿದ್ದ ಆಟೋ ಚಾಲಕ

ತುಮಕೂರು, ಜು.17- ರೈಲ್ವೆ ಅಂಡರ್‍ ಪಾಸ್‍ನಲ್ಲಿ ನಿಂತಿದ್ದ ನೀರಿನಲ್ಲಿ ವಿಡಿಯೋ ಮಾಡಲು ಹೋಗಿ ಕಾಲುಜಾರಿ ರಾಜಕಾಲುವೆಗೆ ಬಿದ್ದು ಆಟೋ ಚಾಲಕರೊಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ನಗರದ ಹೆಗಡೆ ಕಾಲೋನಿ ಸಮೀಪ ಸಂಭವಿಸಿದೆ. ಶಾಂತಿನಗರ ನಿವಾಸಿ ಆಟೋ ಚಾಲಕ ಅಮ್ಜದ್ ಖಾನ್ (44) ನೀರಿನಲ್ಲಿ ಕೊಚ್ಚಿಕೊಂಡು ಹೋದವರಾಗಿದ್ದು, ಅವರ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಆದರೆ, ಸುಳಿವು ಸಿಕ್ಕಿಲ್ಲ. ಘಟನೆ ವಿವರ: ತುಮಕೂರು ನಗರದಲ್ಲಿ ಮಳೆ ಕಾರಣ ರೈಲ್ವೆ ಅಂಡರ್ ಪಾಸ್ ಕೆಳಗೆ ಮಳೆ […]