ಒತ್ತುವರಿ ತೆರವು ಕಾರ್ಯ ಸ್ಥಗಿತ ಮಾತು ತಪ್ಪಿದ ಬಿಬಿಎಂಪಿ

ಬೆಂಗಳೂರು,ನ.30- ಮತ್ತೆ ಬಿಬಿಎಂಪಿ ಕೊಟ್ಟ ಮಾತಿಗೆ ತಪ್ಪಿದೆ. ನವಂಬರ್ ಅಂತ್ಯದ ವೇಳೆಗೆ ನಗರದಲ್ಲಿ ಮಾಡಲಾಗಿರುವ ಎಲ್ಲ ಒತ್ತುವರಿಯನ್ನು ತೆರವುಗೊಳಿಸುವುದಾಗಿ ಮಾತು ಕೊಟ್ಟಿದ್ದ ಬಿಬಿಎಂಪಿ ಇದೀಗ ನವಂಬರ ತಿಂಗಳು ಪೂರ್ಣಗೊಳ್ಳುತ್ತಿದ್ದರೂ ಒತ್ತುವರಿ ತೆರವು ಮಾಡುವಲ್ಲಿ ವಿಫಲವಾಗಿದೆ. ಮಳೆ ಅನಾಹುತ ಸಂಭವಿಸಿದ್ದ ಸಂದರ್ಭದಲ್ಲಿಕೇವಲ ಬಡವರ ಮನೆಗಳ ಮೇಲೆ ದಬ್ಬಾಳಿಕೆ ನಡೆಸಿ ಶ್ರೀಮಂತರ ಬೆನ್ನಿಗೆ ಬೆಣ್ಣೆ ಸವರಿದ್ದ ಬಿಬಿಎಂಪಿ ಅಧಿಕಾರಿಗಳ ಆಸಲಿ ಮುಖ ಇದೀಗ ಬಯಲಾಗಿದೆ. ಆರಂಭದಲ್ಲಿ ಬಡವರ ಮನೆಗಳಿಗೆ ಜೆಸಿಬಿಗಳನ್ನು ನುಗ್ಗಿಸಿ ಬಳಿಕ ಸರ್ವೇ ಮಾಡಬೇಕು. ಅದುವರೆಗೂ ಡೆಮಾಲೇಷನ್ ನಿಲ್ಲಿಸಲಾಗುವುದು. […]