ರಾಮನಾಥ್ ಕೋವಿಂದ್‍ ಅವರಿಗೆ ಸಂಸದರಿಂದ ಸನ್ಮಾನ

ನವದೆಹಲಿ, ಜು.23- ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಸನ್ಮಾನಿಸುವ ಮೂಲಕ ಸಂಸದರು ಇಂದು ಸಂಜೆ ಗೌರವ ಪೂರ್ವಕ ಬೀಳ್ಕೊಡುಗೆ ನೀಡಲಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ನಡೆಯಲಿರುವ ಬೀಳ್ಕೊಡುಗೆ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಸಂಸದರು ಭಾಗವಹಿಸಲಿದ್ದಾರೆ. ಸಂಸದರ ಪರವಾಗಿ ಬಿರ್ಲಾ ಅವರು ಕೋವಿಂದ್ ಅವರನ್ನು ಸನ್ಮಾನಿಸಲಿದ್ದಾರೆ. ನಿರ್ಗಮಿತ ರಾಷ್ಟ್ರಪತಿಗಳಿಗೆ ಸಂಸದರು ಸಹಿ ಮಾಡಿದ ಸ್ಮರಣಿಕೆ ಮತ್ತು ಸಹಿ ಪುಸ್ತಕವನ್ನು ಸಹ ನೀಡಲಾಗುವುದು. […]