ಕೆಂಪುಕೋಟೆ ಮೇಲೆ ಪ್ರಧಾನಿ ಧ್ವಜಾರೋಹಣ, ಇಲ್ಲಿದೆ ಮೋದಿ ಭಾಷಣದ ಹೈಲೈಟ್ಸ್

ನವದೆಹಲಿ, ಆ.15- ಭ್ರಷ್ಟಾಚಾರ, ಸ್ವಜನಪಕ್ಷಪಾತ ದೇಶದ ಶತ್ರುಗಳಾಗಿದ್ದು, ಇವುಗಳನ್ನು ತೊಡೆದು ಹಾಕಲು ಮಹತ್ವದ ಬದಲಾವಣೆಯೊಂದಿಗೆ ಹೋರಾಟಕ್ಕಿಳಿಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಕೆಂಪುಕೋಟೆ ಮೇಲೆ ರಾಷ್ಟ್ರದ ಹೆಮ್ಮೆಯ ಸಂಕೇತವಾದ ತ್ರೀವರ್ಣ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡತನದ ವಿರುದ್ಧ ಜಯ ಗಳಿಸಬೇಕಾದರೆ ನಾವು ಮೊದಲು ಸಮಸ್ಯೆಗಳನ್ನು ಹತ್ತಿಕ್ಕಬೇಕು ಎಂದರು. ಆತ್ಮನಿರ್ಭರ ಭಾರತ, ನಾರಿ ಶಕ್ತಿ, ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ, ಕಪ್ಪು ಹಣ, ಡಿಜಿಟಲ್ ಕ್ರಾಂತಿ, ಸ್ವಾವಲಂಬನೆ, ಕೋವಿಡ್ ಸೇರಿದಂತೆ […]