ಪಾಕ್‍ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ ; ಭಾರತ ತಿರುಗೇಟು

ನ್ಯೂಯಾರ್ಕ್,ಮಾ.4-ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರು ಇಂದು ಪಾಕಿಸ್ತಾನದಲ್ಲಿ ಮುಕ್ತವಾಗಿ ಬದುಕಲು ಮತ್ತು ಅವರ ಧರ್ಮವನ್ನು ಆಚರಿಸಲು ಸಾಧ್ಯವಿಲ್ಲ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ತಿರುಗೇಟು ನೀಡಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ಕುರಿತು ಮಾತನಾಡಿದ ಭಾರತದ ಪ್ರತಿನಿಧಿ ಸೀಮಾ ಪೂಜಾನಿ ಅವರು ಪಾಕ್ ಸಹವರ್ತಿ ಹೀನಾ ರಬ್ಬಾನಿ ಅವರ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನದ ಪ್ರತಿನಿಧಿ ಹೀನಾ ರಬ್ಬಾನಿ ಅವರು ತಮ್ಮ ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಭಾರತದ ವಿರುದ್ಧ ದುರುದ್ದೇಶಪೂರಿತ ಪ್ರಚಾರಕ್ಕಾಗಿ ಈ ಫೋರಂ […]

ಶ್ರದ್ಧಾ ಹತ್ಯೆ ಬಳಿಕ ಹೆದರಿ ತುನಿಶಾಳಿಂದ ದೂರವಾಗಿದ್ದೆ : ಆರೋಪಿ ಹೇಳಿಕೆ

ಮುಂಬೈ,ಡಿ.26- ದೆಹಲಿಯಲ್ಲಿ ಭೀಕರವಾಗಿ ಹತ್ಯೆಯಾದ ಶ್ರದ್ಧಾ ವಾಲ್ಕರ್ ಪ್ರಕರಣದ ನಂತರ ದೇಶದಲ್ಲಿ ಎದುರಾದ ಬದಲಾವಣೆಗಳಿಗೆ ಹೆದರಿ ನಾನು ಸಹಜೀವನ ನಡೆಸುತ್ತಿದ್ದ ತುನಿಶಾ ಶರ್ಮಾಳಿಂದ ದೂರವಾಗಲು ಬಯಸಿದ್ದೆ ಎಂದು ಬಂಧಿತ ಆರೋಪಿ ಶಿಝನ್ ಖಾನ್ ಹೇಳಿಕೆ ನೀಡಿದ್ದಾನೆ. ಕಿರುತೆರೆ ನಟಿಸ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈನ ವಾಲಿವ್ ಪೊಲೀಸರ ಮುಂದೆ ಹೇಳಿಕೆ ನೀಡಿರುವ ಆತ, ತಮ್ಮಿಬ್ಬರ ನಡುವೆ 15 ದಿನಗಳ ಹಿಂದೆ ಬ್ರೆಕ್‍ಅಪ್ ಆಗಿತ್ತು. ಆ ವೇಳೆಯೂ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು. ನಾನು ರಕ್ಷಣೆ […]

ಬಿಜೆಪಿ ಧರ್ಮಾಧಾರಿತ ರಾಜಕಾರಣ : ಕಾಂಗ್ರೆಸ್ ಆಕ್ರೋಶ

ಬೆಂಗಳೂರು,ಆ.23-ಬಿಜೆಪಿ ಧರ್ಮಾಧಾರಿತವಾಗಿ ರಾಜಕಾರಣ ಮಾಡುವ ಮೂಲಕ ಜನರ ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಎಂ.ರೇವಣ್ಣ, ಸರ್ಕಾರ ನಡೆಸುವ ಬಿಜೆಪಿ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಅದರ ಆಧಾರದ ಮೇಲೆ ಜನರಲ್ಲಿ ಮತ ಕೇಳಬೇಕು. ಅದನ್ನು ಬಿಟ್ಟು ಮಾಂಸಾಹಾರ, ದೇವರು, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಇದನ್ನು ಮರೆಮಾಚಲು ಸಿದ್ದರಾಮಯ್ಯ ಅವರ ಮಾಂಸಾಹಾರವನ್ನು ವಿವಾದ […]