ತನ್ವೀರ್ ಸೇಠ್ ನಿವೃತ್ತಿ ನಿರ್ಧಾರ : ಅಭಿಮಾನಿಗಳಿಂದ ಹೈಡ್ರಾಮಾ

ಮೈಸೂರು,ಫೆ.28- ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ ಶಾಸಕ ತನ್ವೀರ್ ಸೇಠ್ ಅವರ ನಿರ್ಧಾರ ವಿರೋಧಿಸಿ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ. ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ ಶಾಸಕ ತನ್ವೀರ್ ಸೇಠ್ ಅವರ ಮೈಸೂರು ನಿವಾಸದ ಸಮೀಪ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತನ್ವೀರ್ ಸೇಠ್ ನಿರ್ಧಾರಕ್ಕೆ ಬೇಸತ್ತ ಅಭಿಮಾನಿಗಳು ಮೈಸೂರಿನ ಉದಯಗಿರಿಯಲ್ಲಿರುವ ನಿವಾಸದ ಬಳಿ ಜಮಾಯಿಸಿದ್ದಾರೆ. ಈ ವೇಳೆ ಓರ್ವ ಅಭಿಮಾನಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮತ್ತೊಬ್ಬ ಅಭಿಮಾನಿ ತನ್ವೀರ್ ಸೇಠ್ […]

ಬಿಎಸ್‍ವೈಗೆ ಇದು ಕೊನೆ ಅಧಿವೇಶನ

ಬೆಂಗಳೂರು,ಫೆ.11- ನಾಲ್ಕು ದಶಕದ ಚುನಾವಣಾ ರಾಜಕೀಯದಲ್ಲಿ ಹೋರಾಟದ ಮೂಲಕವೇ ಮನೆ ಮಾತಾಗಿರುವ ಬಿಎಸ್‍ವೈ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ಪ್ರಸಕ್ತ ಅಧಿವೇಶನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೊನೆಯ ಅಧಿವೇಶನವಾಗಲಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದಿದ್ದ ಯಡಿಯರೂಪ್ಪ, ಸದನದಲ್ಲಿ ಗೌರವಪೂರ್ವಕ ವಿದಾಯವನ್ನು ಎದುರು ನೋಡುತ್ತಿದ್ದಾರೆ. ರಾಜ್ಯ ರಾಜಕೀಯ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗಿದು ಕಡೆಯ ಅಧಿವೇಶನ. 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು […]

ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಫಿಂಚ್ ವಿದಾಯ

ಪರ್ತ್,ಫೆ.7- ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಂಚೂಣಿ ಆಟಗಾರ ಆ್ಯರೋನ್ ಫಿಂಚ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಇಂದು ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ಟಿ-20 ತಂಡದ ನಾಯಕರಾಗಿದ್ದ ಫಿಂಚ್ ಇಂದು ಬೆಳಿಗ್ಗೆ ನಿವೃತ್ತಿ ಘೋಷಿಸಿ ಕ್ರಿಕೆಟ್ ಪ್ರಿಯರಿಗೆ ಶಾಕ್ ನೀಡಿದ್ದಾರೆ. ಈ ಮೂಲಕ ತಮ್ಮ 12 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಅಂತ್ಯಗೊಳಿಸಿದ್ದಾರೆ. ಮುಂದಿನ 2024ರ ಟಿ 20 ವಿಶ್ವಕಪ್ ವರೆಗೆ ನಾನು ಆಡುವುದು ಅನುಮಾನ. ಹೀಗಾಗಿ ಟಿ20 ನಾಯಕತ್ವದಿಂದ ಕೆಳಗಿಳಿಯಲು ಇದು ಸರಿಯಾದ ಸಮಯ. […]

ಲಂಚ ನೀಡಿದ್ದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ

ಬೀದರ್,ಫೆ.4- ಯಾರಾದರೂ ನನಗೆ 5 ಪೈಸೆ ಲಂಚ ನೀಡಿದ್ದೆ ಎಂದು ಸಾಬೀತು ಪಡಿಸಿದರೆ ತಾವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಜಿಲ್ಲೆಯ ಭಾಲ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕು, ಸಾಲ ಪಡೆಯುವುದನ್ನು ಕಡಿಮೆ ಮಾಡಬೇಕು, ಭ್ರಷ್ಟಾಚಾರವನ್ನು ನಿಲ್ಲಿಸಬೇಕು. 100 ರೂಪಾಯಿಯ ಒಂದು ಕಾಮಗಾರಿಯಲ್ಲಿ 40 ರೂ. ಕಮಿಷನ್ ನೀಡಿದರೆ ಉಳಿಯುವುದು 60 ರೂ. ಇದರಲ್ಲಿ 18 ರೂ. ಜಿಎಸ್‍ಟಿ ನೀಡಿದರೆ 42 ರೂ. […]

ಮೋಸ ಮಾಡಿದ್ದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ : ಹೆಚ್ಡಿಕೆ

ಬೆಂಗಳೂರು,ಸೆ.19-ಬೆಂಗಳೂರು ಜನತೆಗೆ ಮೋಸ ಮಾಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು ಜನತೆಗೆ ಏನಾದರೂ ಮೋಸ ಮಾಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದರು. ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-09-2022) ಬೆಂಗಳೂರಿನಲ್ಲಿ ಒತ್ತುವರಿ ತೆರವು ಮಾಡುವ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಆ ರೀತಿ ನನ್ನ ಅವಧಿಯಲ್ಲಿ ಬೆಂಗಳೂರಿಗೆ ಮೋಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರಕ್ಕೆ ನೂರಾರು […]

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವಯಂ ನಿವೃತ್ತಿಗೆ ಮುಂದಾದ ಅಧಿಕಾರಿಗಳು..!

ಬೆಂಗಳೂರು,ಆ.29- ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗಲೇ ಕೆಲವು ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಸ್ವಯಂ ನಿವೃತ್ತಿ ಪಡೆದು ಖಾದಿ ಧರಿಸಲು ಸಜ್ಜಾಗಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತರಾಗಿದ್ದ ಅನಿಲ್‍ಕುಮಾರ್ ಸೇರಿದಂತೆ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಮುಂಬರುವ ಚುನಾವಣೆಗೆ ಸ್ರ್ಪಧಿಸಲು ಸಿದ್ದತೆ ನಡೆಸಿದ್ದಾರೆ. ಆಡಳಿತಾರೂಢ ಬಿಜೆಪಿಯಿಂದ ಸ್ರ್ಪಧಿಸಲು ಹೆಚ್ಚಿನ ಅಧಿಕಾರಿಗಳು ತುದಿಗಾಗಲಲ್ಲಿ ನಿಂತಿದ್ದಾರೆ. ವಿಧಾನಸಭೆ ಇಲ್ಲವೇ ಲೋಕಸಭೆ ಚುನಾವಣಗೆ […]