ಯುವ ಕ್ರಿಕೆಟಿಗರು ಚಾಲಕರನ್ನು ನೇಮಿಸಿಕೊಳ್ಳಿ : ಕಪಿಲ್‍ದೇವ್

ನವದೆಹಲಿ, ಜ.2- ಭಾರತ ತಂಡದ ಯುವ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್ ಅವರು ಚೇತರಿಸಿಕೊಳ್ಳುತ್ತಿರುವುದು ತುಂಬಾ ಸಂತಸಕರ ವಿಷಯವಾಗಿದೆ. ಆದರೆ ಯುವ ಕ್ರಿಕೆಟಿಗರು ಇನ್ನಾದರೂ ಇಂತಹ ಅವಘಡಗಳಿಗೆ ಒಳಗಾಗಬೇಡಿ ಎಂದು ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರು ಸಲಹೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಪಿಲ್‍ದೇವ್, ಯುವ ಕ್ರಿಕೆಟಿಗರು ತುಂಬಾ ವೇಗದ ಕಾರುಗಳನ್ನು ಹೊಂದಿದ್ದೀರಿ, ಹಾಗೂ ಮಿಂಚಿನ ವೇಗದಲ್ಲಿ ಕಾರುಗಳನ್ನು ಚಲಿಸುತ್ತೀರಿ, ಆದರೆ ನಿಮ್ಮ ಕ್ರಿಕೆಟ್ ಜೀವನದ ದೃಷ್ಟಿಯಿಂದಾಗಿ ನೀವು ಇನ್ನು ಮುಂದೆ ನೀವೇ […]

ಮ್ಯಾಕ್ಸ್ ಆಸ್ಪತ್ರೆಯ ಖಾಸಗಿ ವಾರ್ಡ್‍ಗೆ ಕ್ರಿಕೆಟಿಗ ರಿಷಭ್ ಪಂತ್ ಶಿಫ್ಟ್

ನವದೆಹಲಿ, ಜ. 2- ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತದ ವಿಕೆಟ್ ಕೀಪರ್ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದ್ದು, ಅವರನ್ನು ಮ್ಯಾಕ್ಸ್ ಆಸ್ಪತ್ರೆಯ ಸುಸಜ್ಜಿತ ಖಾಸಗಿ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ. ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಅವರು ರಿಷಭ್ ಪಂತ್‍ರ ಆರೋಗ್ಯದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, `ಡಿಸೆಂಬರ್ 30ರಂದು ಕಾರಿನ ಅಪಘಾತದಲ್ಲಿ ತೀವ್ರ ತರವಾದ ಗಾಯಕ್ಕೆ ಒಳಗಾಗಿದ್ದ ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಅವರು ಈಗ ಚೇತರಿಕೆಯ ಹಾದಿಯಲ್ಲಿದ್ದು ಅವರನ್ನು ನಿನ್ನೆ ಸಂಜೆ ಮ್ಯಾಕ್ಸ್ […]

ರಿಷಭ್‍ಪಂತ್ ಜೀವ ರಕ್ಷಿಸಿದ ಚಾಲಕ ಸುಶೀಲ್‍ಮಾನ್‍ಗೆ ಸನ್ಮಾನ

ನವದೆಹಲಿ, ಜ.1- ಖ್ಯಾತ ಕ್ರಿಕೆಟಿಗ ರಿಷಭ್ ಪಂತ್‍ರ ಜೀವ ಉಳಿಸಲು ಸಹಕರಿಸಿದ ಬಸ್ ಚಾಲಕ ಸುಶೀಲ್ ಮಾನ್‍ರನ್ನು ಗೌರವಿಸಲು ಉತ್ತರ ಖಂಡ್ ಸರ್ಕಾರವು ತೀರ್ಮಾನಿಸಿದೆ. ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಸಮಾರಂಭದಲ್ಲಿ ಉತ್ತರ ಖಂಡ್‍ನ ಮುಖ್ಯಮಂತ್ರಿ ಶ್ರೀ ಪುಷ್ಕರ್ ಧಾಮಿ ಅವರು ಪದಕ ನೀಡಿ ಸನ್ಮಾನಿಸಲಿದ್ದಾರೆ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಕಳೆದ ಶುಕ್ರವಾರ ಕ್ರಿಕೆಟಿಗ ರಿಷಭ್ ಪಂತ್ ಚಲಿಸುತ್ತಿದ್ದ ಐಷಾರಾಮಿ ಕಾರು ನವದೆಹಲಿ- ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಬಳಿ ಅಪಘಾತಕ್ಕೆ […]

ಬಾಂಗ್ಲಾ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್

ಮಿರ್‍ಪುರ್, ಡಿ.4- ಭಾರತ ತಂಡದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ವೈದ್ಯಕೀಯ ಕಾರಣದಿಂದಾಗಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದಾರೆ. ಬಿಸಿಸಿಐ ತಮ್ಮ ಅಧಿಕೃತ ಟ್ವಿಟ್‍ನಲ್ಲಿ ಈ ವಿಷಯ ತಿಳಿಸಿದ್ದು, ` ರಿಷಭ್ ಪಂತ್ ಅವರು ಆರೋಗ್ಯ ಸಮಸ್ಯೆಯಿಂದಾಗಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯಿಂದ ಅವರನ್ನು ಕೈಬಿಡಲಾಗಿದೆ. ಮೊದಲ ಪಂದ್ಯಕ್ಕೆ ಪಂತ್ ಸ್ಥಾನದಲ್ಲಿ ಯಾವೊಬ್ಬ ಬದಲಿ ಆಟಗಾರನಿಗೂ ಸ್ಥಾನ ಕಲ್ಪಿಸಿಲ್ಲ, ರಿಷಭ್ ಪಂತ್ ಅವರು ಬಾಂಗ್ಲಾದೇಶ […]