ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಅನಾವರಣ

ಚಿಕ್ಕಬಳ್ಳಾಪುರ, ಜ.16- ಆದಿಯೋಗಿ ಅವರನ್ನು ಪ್ರತ್ಯಕ್ಷ ದರ್ಶನ ಮಾಡುವಂಥದ್ದು ಒಂದು ಸಾಧನೆ. ಅದು ನಮ್ಮ ಪುಣ್ಯ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿಪ್ರಾಯ ಪಟ್ಟರು. ತಾಲೂಕಿನ ಕೌರನಹಳ್ಳಿ ಬಳಿ ನಿರ್ಮಾಣವಾಗಿರುವ 112 ಅಡಿ ಎತ್ತರದ ಆದಿಯೋಗಿ ಮೂರ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿ ಮಾತನಾಡಿ, ಆದಿ ಯೋಗಿ ದರ್ಶನ ಮನುಷ್ಯನಿಗೆ ದಾರಿದೀಪ ಶಿವ ವಿಸ್ಮಯ ಮೂರ್ತಿ, ಶಿವನನ್ನು ಅರ್ಥ ಮಾಡಿಕೊಂಡವರು ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ನಮಗಿಂತ ಮುಂಚೆ, ನಂತರ ಸೃಷ್ಟಿಯಿದೆ. ತೃಣದಲ್ಲಿ ತೃಣ ನಮ್ಮ ಬದುಕು. ಹುಟ್ಟು […]