ಶಿರಾಡಿಘಾಟ್ ಬಂದ್, ನಿಂತಲ್ಲೇ ನಿಂತ ಲಾರಿಗಳು

ಹಾಸನ, ಜು.17- ಜಿಲ್ಲಾಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ಕಡೆ ವಾಸದ ಮನೆಯ ಗೋಡೆಗಳು ಕುಸಿತ ಕಂಡು ಸಾಕಷ್ಟು ಹಾನಿಯಾಗಿದೆ. ತಾಲೂಕಿನ ಹಾವಿನ ಮಾರನಹಳ್ಳಿ ರಾತ್ರಿ ಸುರಿದ ಭಾರಿ ಮಳೆಗೆ ಅರ್ಚಕ ಮುದ್ದಯ್ಯ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದ ಶಬ್ಧಕ್ಕೆ ಹೊರಗೋಡಿ ಬಂದ ಕುಟುಂಬ ಸದಸ್ಯರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ವಿಪರೀತ ಮಳೆಯಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವುದೇ ಸಮಯದಲ್ಲಾದರೂ ಇಡೀ ಮನೆಯೇ ಕುಸಿದ ಆತಂಕದಲ್ಲಿ ಕುಟುಂಬಸ್ಥರು ಇದ್ದು, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ […]