ಕೌಟುಂಬಿಕ ಕಲಹ:ಬೆಂಕಿ ಹಚ್ಚಿ ತಾಯಿ, ಇಬ್ಬರು ಮಕ್ಕಳ ಕೊಲೆ

ಶಿಡ್ಲಘಟ್ಟ, ಫೆ.22- ತಾಯಿ ಹಾಗೂ ಇಬ್ಬರು ಮಕ್ಕಳ ಮೇಲೆ ಹಲ್ಲೆ ಮಾಡಿ ಅವರ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಇಂದು ಮುಂಜಾನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹೆಣ್ಣೂರು ಗ್ರಾಮದ ಸೊಣ್ಣೆಗೌಡ ಅವರ ಪತ್ನಿ ನೇತ್ರಾವತಿ(37), ಪುತ್ರಿಯರಾದ ಸ್ನೇಹ(11) ಹಾಗೂ ವರ್ಷ( 9) ಕೊಲೆಯಾದವರು. ಈ ನಡುವೆ ಸೊಣ್ಣೇಗೌಡ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದ್ದು , […]