ರಾಜಸ್ಥಾನದ 1.35 ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಫೋನ್ ನೀಡಲು ಸಿದ್ಧತೆ

ಜೈಪುರ, ಆ.19- ರಾಜಸ್ಥಾನದ 1.35 ಕೋಟಿ ಮಹಿಳೆಯರಿಗೆ ಸ್ಮಾರ್ಟ್‍ಫೋನ್ ನಿಡುವ ಸರ್ಕಾರದ ಮುಖ್ಯಮಂತ್ರಿ ಡಿಜಿಟಲ್ ಸೇವಾ ಯೋಜನೆ ಜಾರಿಗೆ ದೇಶದ ಮೂರು ಪ್ರಮುಖ ಟೆಲಿಕಾಂ ಕಂಪನಿಗಳು ಆಸಕ್ತಿ ತೋರಿಸಿವೆ. ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೂ ಮುನ್ನ ಈ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಬಯಸಿದ್ದು, ಚುರುಕಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಪ್ರಯತ್ನಗಳು ನಡೆದಿವೆ. ತಾಂತ್ರಿಕ ಬಿಡ್‍ಗಳನ್ನು ಬುಧವಾರ ತೆರೆಯಲಾಗಿದೆ. ಉನ್ನತ ಮಟ್ಟದ ಸಮಿತಿಯು ಟೆಂಡರ್‍ಗಳನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಸರಣಿ ಹಬ್ಬಗಳು ಪ್ರಾರಂಭವಾಗುವ ಮುನ್ನವೇ ಮೊದಲ ಹಂತದ […]