ಮಾರಣಾಂತಿಕವಾಗಿ ಚಾಕುವಿನಿಂದ ಚುಚ್ಚಿ ದರೋಡೆ ಮಾಡಿದ್ದ ಇಬ್ಬರ ಸೆರೆ

ಬೆಂಗಳೂರು,ಫೆ.23- ಹಣಕ್ಕಾಗಿ ಪಾದಚಾರಿಯನ್ನು ಅಡ್ಡಗಟ್ಟಿ ಚಾಕುವಿನಿಂದ ಕರುಳು ಹೊರಬರುವಂತೆ ಚುಚ್ಚಿ ಜೇಬಿನಲ್ಲಿದ್ದ ಒಂದು ಸಾವಿರ ಹಣ ತೆಗೆದುಕೊಂಡು ಪರಾರಿಯಾಗಿದ್ದ ಇಬ್ಬರು ದರೋಡೆಕೋರರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 1.50 ಲಕ್ಷ ರೂ. ಮೌಲ್ಯದ ಮೂರು ದ್ವಿಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ತುಮಕೂರಿನ ಕುಣಿಗಲ್ ತಾಲ್ಲೂಕು, ಹುತ್ರಿದುರ್ಗ ಹೋಬಳಿಯ ಕೃಷ್ಣ (26) ಮತ್ತು ನಿರಂಜನ್ (25) ಬಂಧಿತ ದರೋಡೆಕೋರರು. ಇವರಿಬ್ಬರು ಬೆಂಗಳೂರಿನ ಸುಂಕದಕಟ್ಟೆಯ ಹೊಯ್ಸಳ ನಗರದ ಪೈಪ್‍ಲೈನ್ ರಸ್ತೆಯಲ್ಲಿ ವಾಸವಾಗಿದ್ದಾರೆ. ಮಂಡ್ಯದಲ್ಲಿ ಭೀಕರ […]