50ರೂ. ಆಸೆಗೆ 1.50 ಲಕ್ಷ ಕಳೆದುಕೊಂಡ ವ್ಯಕ್ತಿ..!

ತಿ.ನರಸೀಪುರ,ಜು.13- ವ್ಯಕ್ತಿಯೊಬ್ಬರು 50 ರೂ. ಆಸೆಗಾಗಿ 1.50 ಲಕ್ಷ ರೂ.ಗಳನ್ನು ಕಳೆದು ಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಮೈಸೂರಿನ ನಜರ್‍ಬಾದ್ ನಿವಾಸಿ ಅಬ್ದುಲ್ ಖಾದರ್(60) ಎಂಬುವರೇ ಹಣ ಕಳೆದುಕೊಂಡವರು. ಅಬ್ದುಲ್ ಖಾದರ್ ಪಟ್ಟಣದ ಆಲಗೂಡು ಸಮೀಪವಿರುವ ಎನ್‍ಕೆಎಫ್ ಪಬ್ಲಿಕ್ ಶಾಲೆಯಲ್ಲಿ ಅಲ್ಯುಮಿನಿಯಮ್ ವಿಂಡೋಸ್ ಕೆಲಸ ಮಾಡುತ್ತಿದ್ದು, ಶಾಲೆಯ ಸಂಸ್ಥಾಪಕರು ಮಾಡಿದ್ದ ಕೆಲಸಕ್ಕೆ 80 ಸಾವಿರ ರೂ.ಗಳು ಹಾಗೂ ಬಾಕಿ ಕೆಲಸದ ಮುಂಗಡ 70 ಸಾವಿರ ರೂ.ಗಳು ಒಟ್ಟಾರೆ 1.50 ಲಕ್ಷ ರೂ.ಗಳಿಗೆ ಚೆಕ್ ನೀಡಿದ್ದರು. ನೀಡಲಾದ ಚೆಕ್ಕನ […]