ತೈವಾನ್ ಗಡಿಯಲ್ಲಿ ಚೀನಾದ ಅಣ್ವಸ್ತ್ರ ಸಿಡಿತಲೆಗಳು..!

ತೈಪೆ,ಡಿ.13- ತೈವಾನ್ ವಾಯು ರಕ್ಷಣಾ ವಲಯಕ್ಕೆ ಚೀನಾ 18 ಅಣ್ವಸ್ತ್ರಗಳ್ನು ರವಾನಿಸಿದೆ ಎಂದು ತೈಪೆ ಗಂಭೀರ ಆರೋಪ ಮಾಡಿದೆ. ತೈವಾನ್ ಮತ್ತು ಚೀನಾ ನಡುವಿನ ಸಂಬಂಧ ಹದಗೆಟ್ಟ ನಂತರ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಸಮಯದಲ್ಲೇ ಚೀನಾ ಅಣ್ವಸ್ತ್ರ ರವಾನಿಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ನಾವು ಯಾವುದೇ ಕಾರಣಕ್ಕೂ ಚೀನಾದ ಭಾಗವಾಗಲು ಇಚ್ಚಿಸುವುದಿಲ್ಲ ಎಂದು ತೈವಾನ್ ಸ್ಪಷ್ಟಪಡಿಸಿದ ನಂತರ ಚೀನಾ ದಬ್ಬಾಳಿಕೆ ಮೂಲಕ ನಮ್ಮನ್ನು ಬೆದರಿಸಿ ತೈವಾನ್ ವಶಪಡಿಸಿಕೊಳ್ಳುವ ಕಾರ್ಯದ ಭಾಗವಾಗಿ ರಕ್ಷಣಾ ವಲಯದಲ್ಲಿ […]

ತೈವಾನ್ ಸಮೀಪ ಹಾರಾಡಿದ 36 ಚೀನೀ ಫೈಟರ್ ಜೆಟ್‌ಗಳು

ತೈಪೆ, ತೈವಾನ್ ,ನ.13- ಚೀನಾದ ಸೇನೆಯು ತೈವಾನ್ ಬಳಿ 36 ಫೈಟರ್ ಜೆಟ್‌ಗಳು ಮತ್ತು ಬಾಂಬರ್‌ಗಳನ್ನು ಹಾರಿಸಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯವು ಹೇಳಿದೆ. ಚೀನಾ ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಳ್ಳುವ ಸ್ವಯಂ-ಆಡಳಿತ ದ್ವೀಪ ಪ್ರಜಾಪ್ರಭುತ್ವದ ವಿರುದ್ಧ ದೀರ್ಘಾವಧಿಯ ಬೆದರಿಕೆಯ ಅಭಿಯಾನದ ಭಾಗವಾಗಿದೆ. ಶನಿವಾರದಂದು ಹತ್ತು ವಿಮಾನಗಳು ತೈವಾನ್ ಜಲಸಂಧಿಯಲ್ಲಿನ ಮಧ್ಯದ ರೇಖೆಯ ಉದ್ದಕ್ಕೂ ಹಾರಿದವು, ಅದು ದ್ವೀಪವನ್ನು ಮುಖ್ಯ ಭೂಭಾಗದಿಂದ ಪ್ರತ್ಯೇಕಿಸುತ್ತದೆ ಎಂದು ಸಚಿವಾಲಯ ತಿಳಿಸಿದ್ದು, . ಅವುಗಳಲ್ಲಿ ಆರು ಶೆನ್ಯಾಂಗ್ ಜೆ-11 ಮತ್ತು ನಾಲ್ಕು […]

903 ಕೋಟಿ ರೂ.ವಂಚನೆ : ಚೀನಿ, ತೈವಾನ್ ಪ್ರಜೆ ಸೇರಿದಂತೆ 10 ಮಂದಿ ಸೆರೆ

ಹೈದರಾಬಾದ್,ಅ.13- ಮತ್ತೊಂದು ಚೀನಾ ಆನ್‍ಲೈನ್ ಹೂಡಿಕೆ ವಂಚನೆ ಬಯಲಾಗಿದೆ. ಭಾರತ, ಚೀನಾ, ತೈವಾನ್, ಕಾಂಬೋಡಿಯಾ ಮತ್ತು ಯುಎಇಯಲ್ಲಿ ಚೀನಾ ಆಪ್ ಮೂಲಕ 903 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣ ಬೇಧಿಸಿರುವ ಹೈದರಾಬಾದ್ ಪೊಲೀಸರು ಹತ್ತು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೀನಾ ಮೂಲದ ಲಿ ಜಾಂಗ್‍ಜುನ್ ಹಾಗೂ ತೈವಾನ್ ಪ್ರಜೆ ಚು ಚುನ್ ಯೂ ಪ್ರಕರಣದ ಪ್ರಮುಖ ರೂವಾರಿಗಳೆಂದು ಗುರುತಿಸಲಾಗಿದೆ. ಈ ವಂಚಕರಿಂದ ದೇಶದಾದ್ಯಂತ ಲಕ್ಷಗಟ್ಟಲೆ ಹೂಡಿಕೆದಾರರು ವಂಚನೆಗೆ ಒಳಗಾಗಿರಬಹುದು ಎಂದು ನಾವು ಅನುಮಾನಿಸುತ್ತೇವೆ. ದೆಹಲಿಯಲ್ಲಿಯೇ 10,000 […]

ತೈವಾನ್ ಮೇಲೆ ದಾಳಿಗೆ ಸಜ್ಜಾದ ಚೀನಾ

ತೈಪೆ, ಆ.11- ಚೀನಾ ಯೋಧರು ತೈವಾನ್ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಹರಡುತ್ತಿದ್ದು, ಯುದ್ಧ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ತೈವಾನ್‍ನ ಪೂರ್ವ ಕರಾವಳಿ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಯಾವಾಗ ಬೇಕಾದರೂ ಚೀನಾದ ಯೋಧರು ನುಗ್ಗಬಹುದು ಎಂದು ಹೇಳಲಾಗುತ್ತಿದೆ. ಅಕ್ಕ-ಪಕ್ಕದ ದೇಶಗಳಾದ ಜಪಾನ್, ದಕ್ಷಿಣ ಕೋರಿಯಾ ಸೇರಿದಂತೆ ಯಾರೂ ಕೂಡ ನಮಗೆ ಪ್ರತಿರೋಧ ಒಡ್ಡಬಾರದು ಎಂಬ ತಂತ್ರಗಾರಿಕೆ ಹಿನ್ನೆಲೆಯಲ್ಲಿ ಈ ದ್ವೀಪ ರಾಷ್ಟ್ರದ ಸುತ್ತ ಫೈಟರ್ ಜಟ್‍ಗಳನ್ನು ಹಾರಾಡುತ್ತಿವೆ. ಸುಮಾರು 370 ಫೈಟರ್ […]

ತೈವಾನ್ ಮೇಲೆ ಚೀನಾ ಕ್ಷಿಪಣಿ ದಾಳಿ, ಜಪಾನ್ ಖಂಡನೆ

ಟೋಕಿಯೊ.ಆ.5- ತೈವಾನ್ ಭೂ ಪ್ರದೇಶದ ಮೇಲೆ ಚೀನಾ ಕ್ಷಿಪಣಿ ದಾಳಿ ನಡೆಸಿರುವುದನ್ನು ಜಪಾನ್ ಖಂಡಿಸಿದೆ.ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ನಮ್ಮ ನಾಗರಿಕರ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಗಂಭೀರ ಸಮಸ್ಯೆ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಹೇಳಿದ್ದಾರೆ. ಚೀನಾ ಸಮರಾಭ್ಯಾಸ ಹೆಸರಿನಲ್ಲಿ ಐದು ಕ್ಷಿಪಣಿಗಳು ದೇಶದ ವಿಶೇಷ ಆರ್ಥಿಕ ವಲಯದಲ್ಲಿ ಬಿದ್ದಿವೆ ಎಂದು ಅವುಗಳಲ್ಲಿ ನಾಲ್ಕು ತೈವಾನ್‍ನ ಮುಖ್ಯ ದ್ವೀಪದ ಮೇಲೆ ಹಾರಿವೆ ಎಂದು ಶಂಕಿಸಲಾಗಿದೆ. ಚೀನಾದ ಈ ಕ್ರಮ ನಮ್ಮ ಪ್ರದೇಶ ಮತ್ತು ಅಂತರಾಷ್ಟ್ರೀಯ […]

ಥೈವಾನ್‍ಗೆ ಮೇಲೆ ಯುದ್ಧದ ಕಾರ್ಮೋಡ

ತೈಪೆ, ಆ.4- ಅಮೆರಿಕದ ಸ್ಪೀಕರ್ ಸ್ಯಾನ್ಸಿ ಪೆಲೋಸಿ ಭೇಟಿ ನಂತರ ಕೆರಳಿರುವ ಚೀನಾ ಥೈವಾನ್ ಮೇಲೆ ಮುಗಿಬೀಳಲು ತುದಿಗಾಲ ಮೇಲೆ ನಿಂತಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ. ಭಾರೀ ಪ್ರತಿರೋಧದ ನಡುವೆ ಅಮೆರಿಕದ ಸ್ಪೀಕರ್ ಸ್ಯಾನ್ಸಿ ಅವರ ನೇತೃತ್ವದ ನಿಯೋಗ ಥೈವಾನ್‍ಗೆ ಭೇಟಿ ನೀಡಿ ರಾಜಧಾನಿ ತೈಪೆಗೆ ಭೇಟಿ ನೀಡಿ ಅಧ್ಯಕ್ಷೆ ಇಂಗ್ ಮೆನ್ ಅವರನ್ನು ಭೇಟಿ ಮಾಡಿ ಪ್ರಜಾಪ್ರಭುತ್ವದ ರಕ್ಷಣೆಗೆ ನಾವು ನಿಮ್ಮೊಂದಿಗಿದ್ದೇವೆ. ಅಮೆರಿಕ ನಿಮ್ಮ ರಾಷ್ಟ್ರಕ್ಕೆ ರಕ್ಷಾಕವಚವಾಗಲಿದೆ ಎಂದು ತಿಳಿಸಿದ ನಂತರ ಚೀನಾ ಕೆಂಡಾಮಂಡಲವಾಗಿದೆ. ಅಮೆರಿಕದ […]